ಸಾರಾಂಶ
ಕನ್ನಡಪ್ರಭ ವಾರ್ತೆ ವಿಜಯಪುರ
ವಿದ್ಯಾರ್ಥಿಗಳು ಜ್ಞಾನ ನೀಡಿದ ಶಿಕ್ಷಕರನ್ನು ಸ್ಮರಿಸಿ, ಮಾರ್ಗದರ್ಶನ ಪಡೆದರೆ ನೀವು ಜಗತ್ತು ಬೆಳಗುವ ತಾರೆಗಳಾಗುತ್ತೀರಿ ಎಂದು ಜೆಎಸ್‌ಎಸ್ ಶಿಕ್ಷಣ ಮಹಾವಿದ್ಯಾಲಯದ ಸಹ ಪ್ರಾಧ್ಯಾಪಕ ಡಾ.ಮಂಜುನಾಥ ಕೋರಿ ಹೇಳಿದರು.ನಗರದ ಬಿಎಲ್‌ಡಿಇ ಸಂಸ್ಥೆಯ ಎಸ್.ಬಿ.ಕಲಾ ಮತ್ತು ಕೆಸಿಪಿ ವಿಜ್ಞಾನ ಮಹಾವಿದ್ಯಾಲಯದಲ್ಲಿ ಐಕ್ಯೂಎಸಿ, ಶಿಕ್ಷಣಶಾಸ್ತ್ರ ಹಾಗೂ ಇತಿಹಾಸ ವಿಭಾಗದ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ ರಾಷ್ಟ್ರೀಯ ಶಿಕ್ಷಕರ ದಿನ ಕಾರ್ಯಕ್ರಮದಲ್ಲಿ ಮಾತನಾಡಿದರು. ಶಾಲೆಗೆ ಬಂದ ಮಗುವನ್ನು ಕೈ ಹಿಡಿದು ದಡ ಸೇರಿಸುವ, ಅವರ ಬದುಕು ಬೆಳಗಿಸುವ ಏಕೈಕ ವ್ಯಕ್ತಿ ಯಾರಾದರೂ ಇದ್ದರೆ ಅದು ಶಿಕ್ಷಕ. ಶಿವ ಪಥವನ್ನು ಅರಿಯಬೇಕಾದರೆ ನಮ್ಮ ಜೊತೆ ಗುರು ಇರಬೇಕು ಎಂದರು.
ಕನ್ನಡ ವಿಭಾಗದ ಮುಖ್ಯಸ್ಥ ಡಾ.ಶ್ರೀನಿವಾಸ ದೊಡಮನಿ ಮಾತನಾಡಿ, ಆಧುನಿಕ ಶಿಕ್ಷಣ ವ್ಯವಸ್ಥೆ ಹಾಗೂ ಪರಿಸ್ಥಿತಿ ಕುರಿತು 12ನೇ ಶತಮಾನದಲ್ಲಿಯೇ ಶರಣ ಅಲ್ಲಮ ಪ್ರಭುಗಳು ಅಂದೆ ಭವಿಷ್ಯ ನುಡಿದಿದ್ದಾರೆ. ಪ್ರತಿಯೊಬ್ಬ ಶಿಕ್ಷಕ ವಿದ್ಯಾರ್ಥಿಗಳ ಶೈಕ್ಷಣಿಕ, ಮಾನಸಿಕ ಹಾಗೂ ದೈಹಿಕ ವಿಚಾರಗಳು ಸೇರಿದಂತೆ ಸರ್ವಾಂಗೀಣ ಅಭಿವೃದ್ಧಿಗೆ ಗಮನ ನೀಡುತ್ತೇವೆ ಎಂದರು.ಭಾಷಣ ಸ್ಪರ್ಧೆಯಲ್ಲಿ ವಿಜೇತರಿಗೆ ಪ್ರಶಸ್ತಿ ಪತ್ರ ವಿತರಿಸಲಾಯಿತು. ಸಾಂಸ್ಕೃತಿಕ ನೃತ್ಯ ಆಯೋಜಿಸಲಾಯಿತು. ಐಕ್ಯೂಎಸಿ ನಿರ್ದೇಶಕ ಡಾ.ಪಿ.ಎಸ್.ಪಾಟೀಲ, ನ್ಯಾಕ್ ಸಂಯೋಜಕ ಡಾ.ಮಹೇಶಕುಮಾರ.ಕೆ, ಪ್ರೊ.ಐ.ಎಸ್.ಹೂಗಾರ, ಡಾ.ಗಿರೀಶ ಹಣಮರೆಡ್ಡಿ, ಪ್ರೊ.ಜೆ.ಬಿ.ಬಿರಾದಾರ, ಪ್ರೊ.ಎನ್.ಕುನ್ನೂರ, ಎಸ್.ಕೆ.ಪಾಟೀಲ ಮಹಾವಿದ್ಯಾಲಯದ ಬೋಧಕ, ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಪ್ರೊ.ಐ.ಎಸ್.ಹೂಗಾರ ಸ್ವಾಗತಿಸಿದರು. ಪ್ರೊ.ಸಿ.ಎನ್.ಕನ್ನೂರ ನಿರೂಪಿಸಿದರು, ಪ್ರೊ.ಜೆ.ಬಿ.ಬಿರಾದಾರ ವಂದಿಸಿದರು.