ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ

ಹಿಂದೂ ಸಮಾಜವನ್ನು ಸದೃಢವಾಗಿ ಕಟ್ಟಿ ಬೆಳೆಸುವ ಶಕ್ತಿ ಇರುವುದು ಬಿಜೆಪಿ ಪಕ್ಷಕ್ಕೆ ಮಾತ್ರ ಎಂದು ಬಿಜೆಪಿ ಮುಖಂಡ ಚಿದಾನಂದ್ ತಿಳಿಸಿದರು.

ಅವರು ತಾಲೂಕಿನ ಕುಂದೂರಿನಲ್ಲಿ ನಡೆದ ರಾಮೋತ್ಸವದ ಕಾರ್ಯಕ್ರಮದ ಯಶಸ್ವಿಗೆ ಕಾರ್ಯಕರ್ತರಿಗೆ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿ ಈ ಬಾರಿ ರಾಮೋತ್ಸವವನ್ನು ತಾಲೂಕಿನಲ್ಲಿ ಅದ್ಧೂರಿಯಾಗಿ ನಡೆಸಲು ಸಹಕರಿಸಿದ ಕಾರ್ಯಕರ್ತರಿಗೆ ನಾವು ಸದಾ ಚಿರಋಣಿಯಾಗಿರುತ್ತೇವೆ, ಇದೇ ಪ್ರಥಮ ಬಾರಿಗೆ ತಾಲೂಕಿನಲ್ಲಿ ಒಂದು ಅದ್ಧೂರಿ ಹಿಂದೂ ಕಾರ್ಯಕ್ರಮವನ್ನು ಜರುಗಿಸಲು ಸಹಕರಿಸಿದ ತಾಲೂಕಿನ ಜನತೆಗೆ ನಾವು ಸದಾ ಆಭಾರಿಯಾಗಿದ್ದು ಯಾವುದೇ ಗೊಂದಲಗಳಿಲ್ಲದೆ ನಮ್ಮ ಹಿಂದೂ ಕಾರ್ಯಕರ್ತರು ಶ್ರಮಪಟ್ಟು ಈ ಬಾರಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದ್ದಾರೆ.ಇದೇ ರೀತಿ ಪ್ರತಿ ವರ್ಷವೂ ಕೂಡ ನಿಮ್ಮಗಳ ಸಹಕಾರದಿಂದ ಕಾರ್ಯಕ್ರಮವನ್ನು ಆಯೋಜಿಸಲಾಗುವುದು. ಈ ಬಾರಿ ಬಿಗ್‌ಬಾಸ್ ವಿನ್ನರ್‌ ನಟ ಗಿಲ್ಲಿ ಅವರನ್ನ ಕರೆಸಿ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿಸಿದ್ದೇವೆ. ಅದೇ ರೀತಿ ಪ್ರತಿವರ್ಷವೂ ಕೂಡ ಒಬ್ಬೊಬ್ಬ ಮುಖ್ಯ ಅತಿಥಿಗಳನ್ನು ಕರೆಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುತ್ತದೆ, ತಾಲೂಕಿನಲ್ಲಿ ಪಕ್ಷ ಸಂಘಟನೆ ಮಾಡುವುದು ನಮ್ಮ ಕರ್ತವ್ಯ ಮುಂಬರುವ ಚುನಾವಣೆಯಲ್ಲಿ ಇದೇ ರೀತಿ ಒಗ್ಗಟ್ಟಿನಿಂದ ಕೆಲಸ ಮಾಡಿದರೆ ಗೆಲುವು ನಮ್ಮ ಪಕ್ಷದ ಆಗುತ್ತದೆ ಆದ್ದರಿಂದ ತಾವೆಲ್ಲರೂ ಒಟ್ಟುಗೂಡಿ ತಾಲೂಕಿನಲ್ಲಿ ಸದೃಢವಾಗಿ ಪಕ್ಷ ಕಟ್ಟಲು ಮುಂದಾಗಬೇಕು ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಬಿಜೆಪಿ ಕಾರ್ಯಕರ್ತರುಗಳಾದ ರೂಪೇಶ್, ಜಗದೀಶ್ ಕೆರೆ ಬೀದಿ, ಮಂಜು ಗುಂಡಶೆಟ್ಟಿಹಳ್ಳಿ, ಆನಂದ್, ಜಯರಾಮ್ ಮಾರೇನಹಳ್ಳಿ, ರಘು ರಾಜೇಗೌಡ, ಶಾಂತರಾಜ್, ಸಿದ್ಧಾರ್ಥ, ನವೀನ್ ಮತ್ತಿತರಿದ್ದರು.