ಸಾರಾಂಶ
ವಿದ್ಯಾರ್ಥಿಗಳು ತಮ್ಮ ಶೈಕ್ಷಣಿಕ ಜೀವನದಲ್ಲಿ ನಿರಂತರ ಹಾಗೂ ಕಠಿಣ ಪರಿಶ್ರಮದಿಂದ ಓದಿ, ನಿರ್ಭಯ ಹಾಗೂ ಸಮರ್ಥವಾಗಿ ಪರೀಕ್ಷೆಗಳನ್ನು ಎದುರಿಸಿದರೆ ತಮ್ಮ ಭವಿಷ್ಯ ರೂಪಿಸಿಕೊಳ್ಳಲು ಸಾಧ್ಯವಿದೆ ಎಂದು ಜಿಲ್ಲಾಧಿಕಾರಿ ಟಿ.ಭೂಬಾಲನ್ ಹೇಳಿದರು.
ಕನ್ನಡಪ್ರಭ ವಾರ್ತೆ ವಿಜಯಪುರ
ವಿದ್ಯಾರ್ಥಿಗಳು ತಮ್ಮ ಶೈಕ್ಷಣಿಕ ಜೀವನದಲ್ಲಿ ನಿರಂತರ ಹಾಗೂ ಕಠಿಣ ಪರಿಶ್ರಮದಿಂದ ಓದಿ, ನಿರ್ಭಯ ಹಾಗೂ ಸಮರ್ಥವಾಗಿ ಪರೀಕ್ಷೆಗಳನ್ನು ಎದುರಿಸಿದರೆ ತಮ್ಮ ಭವಿಷ್ಯ ರೂಪಿಸಿಕೊಳ್ಳಲು ಸಾಧ್ಯವಿದೆ ಎಂದು ಜಿಲ್ಲಾಧಿಕಾರಿ ಟಿ.ಭೂಬಾಲನ್ ಹೇಳಿದರು.ನಗರದ ಪ್ರತಿಷ್ಠಿತ ಶ್ರೀ ಶರಣಬಸವೇಶ್ವರ ಪದವಿ ಪೂರ್ವ ವಿಜ್ಞಾನ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಟ್ಯಾಲೆಂಟ್ ಹಂಟ್ ಸ್ಪರ್ಧಾ ವಿಜೇತರ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಸಾಧನೆಗೆ ಒಳದಾರಿಗಳಿಲ್ಲ. ಪರಿಶ್ರಮದಿಂದ ಸಾಧಿಸಿದ್ದು ಮಾತ್ರ ಶಾಶ್ವತವಾಗಿ ಇರಲಿದೆ ಎಂದು ಮಕ್ಕಳಿಗೆ ಕಿವಿಮಾತು ಹೇಳಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ನಿರ್ದೇಶಕ ಸತ್ಯಜೀತ ಪಾಟೀಲ ಮಾತನಾಡಿ, ಆದರ್ಶ ವ್ಯಕ್ತಿಗಳ ಜೀವನ ಚರಿತ್ರೆ ವಿದ್ಯಾರ್ಥಿಗಳು ಪ್ರೇರಣೆ ಹಾಗೂ ಬಾಳಿನಲ್ಲಿ ಬಹು ಮುಖ್ಯಪಾತ್ರ ವಹಿಸುತ್ತದೆ ಎಂದು ವಿವರಿಸಿದರು.ಟ್ಯಾಲೆಂಟ್ ಹಂಟ್ ಸ್ಪರ್ಧೆಯಲ್ಲಿ ಅಶ್ವಿನಿ ಬಿ.ಬಿ ಪ್ರಥಮ ಸ್ಥಾನ, ಅಮೀತ.ಎಂ ದ್ವಿತೀಯ ಸ್ಥಾನ, ಉತ್ತಮ ರಾಠೋಡ ತೃತೀಯ ಸ್ಥಾನ, ಸಮೃದ್ಧ ಅಂಗಡಿ 4ನೇ ಸ್ಥಾನ, ಪ್ರೀತಮ್ ಪತ್ತಾರ 5ನೇ ಸ್ಥಾನ, ಮತ್ತು 6ರಿಂದ 10ನೇ ಸ್ಥಾನ ಪಡೆದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪ್ರದಾನ ಮಾಡಿ, ಸನ್ಮಾನಿಸಲಾಯಿತು.
ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಸಿ.ಕೆ.ಹೊಸಮನಿ, ಶಾಖಾಧಿಕಾರಿ ಪ್ರಕಾಶ ಗೊಂಗಡಿ, ಸಂಸ್ಥೆಯ ಸಲಹಾ ಸಮಿತಿಯ ಅದ್ಯಕ್ಷ ಎಸ್.ಕೆ.ಪಾಟೀಲ, ರವಿಕಾಂತ ಜಾಹಾಗೀರ್ದಾರ, ಫೀರೋಜ್ ಕರ್ಲೆಕರ, ಪ್ರಾಚಾರ್ಯರಾದ ಪ್ರಜ್ವಲ್.ಎಸ್, ಈರಣ್ಣ ಶಿರಾಳಶೆಟ್ಟಿ, ಶಿವಕುಮಾರ ಹೂಗಾರ ವೇದಿಕೆ ಮೇಲಿ ಉಪಸ್ಥಿತರಿದ್ದರು.