ನಾಳೆ ‘ಕರಾಳ ಅಧ್ಯಾಯ-50 ವರ್ಷ’ ಬಹಿರಂಗ ಸಭೆ

| Published : Jul 24 2025, 12:52 AM IST

ಸಾರಾಂಶ

ಶಿವಮೊಗ್ಗದ ಶ್ರೀಗಂಧ ಸಂಸ್ಥೆ ಹಾಗೂ ಮಂಥನ ಟ್ರಸ್ಟ್ ಸಹಯೋಗದಲ್ಲಿ ಜು.25ರಂದು ಸಂಜೆ 5.30ಕ್ಕೆ ಶುಭಮಂಗಳ ಸಮುದಾಯ ಭವನದಲ್ಲಿ 1975ರಲ್ಲಿ ಭಾರತ ಎದುರಿಸಿದ ಸಂವಿಧಾನ ವಿರೋಧಿ ತುರ್ತು ಪರಿಸ್ಥಿತಿಯ ಅಧ್ಯಾಯಕ್ಕೆ 50 ವರ್ಷಗಳು ಸಂದ ಹಿನ್ನೆಲೆ ‘ಕರಾಳ ಅಧ್ಯಾಯ-50 ವರ್ಷ’ ಎಂಬ ವಿಶೇಷ ಬಹಿರಂಗ ಸಭೆಯನ್ನುಆಯೋಜಿಸಲಾಗಿದೆ ಎಂದು ಶ್ರೀಗಂಧ ಸಂಸ್ಥೆಯ ಖಜಾಂಚಿ ಕೆ.ಈ. ಕಾಂತೇಶ್ ತಿಳಿಸಿದರು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಈ ಸಭೆಯಲ್ಲಿ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಸೆರೆಮನೆಯ ಶಿಕ್ಷೆ ಅನುಭವಿಸಿದ ಶಿವಮೊಗ್ಗದ ಹಿರಿಯ ನಾಗರಿಕರಿಗೆ ಗೌರವ ಸಮರ್ಪಿಸಲಾಗುವುದು ಎಂದರು.

ಸೈನ್ಯದಲ್ಲಿ ಸೇವೆ ಸಲ್ಲಿಸಿದ ನಿವೃತ್ತ ಯೋಧರನ್ನು ಸನ್ಮಾನಿಸಲಾಗುವುದು, ತುರ್ತು ಪರಿಸ್ಥಿತಿಯ 50 ವರ್ಷದ ಸ್ಮರಣೆಗಾಗಿ ಶಿವಮೊಗ್ಗ ನಗರದ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳಿಗೆ ಕಳೆದವಾರ ನಡೆದ ದೇಶಭಕ್ತಿಗೀತೆಯ ಸಮೂಹ ಗಾಯನ ಸ್ಫರ್ಧೆಯಲ್ಲಿ ವಿಜೇತರಾದ ತಂಡಗಳಿಗೆ ಬಹುಮಾನ ವಿತರಣೆ ಮತ್ತು ವಿಜೇತ ತಂಡಗಳಿಂದ ದೇಶಭಕ್ತಿಗೀತೆಗಳ ಸಮೂಹ ಗಾಯನ ನಡೆಯಲಿದೆ ಎಂದರು.

ಶ್ರೀಗಂಧ ಸಂಸ್ಥೆಯ ಅಧ್ಯಕ್ಷ ಕೆ.ಎಸ್. ಈಶ್ವರಪ್ಪ ಮಾತನಾಡಿ, ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಸೆರೆಮನೆಯ ಶಿಕ್ಷೆ ಅನುಭವಿಸಿದ ಶಿವಮೊಗ್ಗದ ಹಿರಿಯರು ಹಾಗೂ ಎಂ.ಎ.ಡಿ.ಬಿ. ಮಾಜಿ ಅಧ್ಯಕ್ಷ ಎ.ಎಸ್. ಪದ್ಮನಾಭ ಭಟ್ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಖ್ಯಾತ ವಾಗ್ಮಿ ಹಾಗೂ ಸಾಹಿತಿ ಜಿ.ಬಿ. ಹರೀಶ್ ಮುಖ್ಯ ಭಾಷಣ ಮಾಡಲಿದ್ದು, ಅಜೇಯ ಖ್ಯಾತಿಯ ಲೇಖಕ ಹಾಗೂ ಹಿರಿಯ ಸಾಹಿತಿ, ರಾಷ್ಟ್ರವಾದಿ ಚಿಂತಕ ಬಾಬು ಕೃಷ್ಣಮೂರ್ತಿ ಅವರನ್ನು ನಗರದ ಸಮಸ್ತ ದೇಶಭಕ್ತ ನಾಗರೀಕರ ಪರವಾಗಿ ಸನ್ಮಾನಿಸಲಾಗುವುದು. ಮಂಥನ ಟ್ರಸ್ಟ್‌ನ ಟ್ರಸ್ಟಿ ವಾಸುದೇವ್, ಶ್ರೀಗಂಧ ಸಂಸ್ಥೆಯ ಖಜಾಂಚಿ ಕೆ.ಈ. ಕಾಂತೇಶ್ ಉಪಸ್ಥಿತರಿರುವರು ಎಂದರು.

ದೇಶದ ಇತಿಹಾಸವನ್ನು ಅವಲೋಕಿಸುವ ಮತ್ತು ದೇಶಭಕ್ತಿಯನ್ನು ಜಾಗೃತಿಗೊಳಿಸುವ ಈ ಅಪರೂಪದ ಕಾರ್ಯಕ್ರಮಕ್ಕೆ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಮನವಿ ಮಾಡಿಕೊಂಡರು.

ಗೋಷ್ಠಿಯಲ್ಲಿ ಪ್ರಮುಖರಾದ ಉಮೇಶ್ ಆರಾಧ್ಯ, ಟಿ.ಆರ್. ಅಶ್ವತ್ಥ್‌ನಾರಾಯಣ ಶೆಟ್ಟಿ, ಕುಬೇರಪ್ಪ, ರಾಜು, ಹರೀಶ್ ಪುರಾಣಿಕ್, ಶ್ರೀಕಾಂತ್, ಜಾದವ್, ಕಾಚಿನಕಟ್ಟೆ ಸತ್ಯನಾರಾಯಣ್ ಉಪಸ್ಥಿತರಿದ್ದರು.