ಕುಶಾಲನಗರ ಶ್ರೀ ಮುತ್ತಪ್ಪ ಸ್ವಾಮಿ ದೇವಾಲಯದಲ್ಲಿ ತೆರೆ ಮಹೋತ್ಸವ ನಡೆಯಿತು.
ಕನ್ನಡಪ್ರಭ ವಾರ್ತೆ ಕುಶಾಲನಗರ
ಕುಶಾಲನಗರ ಶ್ರೀ ಮುತ್ತಪ್ಪ ಸ್ವಾಮಿ ದೇವಾಲಯದಲ್ಲಿ ತೆರೆ ಮಹೋತ್ಸವ ನಡೆಯಿತು.ದೇವಾಲಯದಲ್ಲಿ ಬೆಳಗ್ಗೆ 5.30ಕ್ಕೆ ಗಣಪತಿ ಹೋಮ. 10 30ಕ್ಕೆ ಧ್ವಜಾರೋಹಣ, ಮಧ್ಯಾಹ್ನ 2 ಗಂಟೆಗೆ ಮುತ್ತಪ್ಪನ ಮಲೈ ಇರಕ್ಕಲ್ ಸಂಜೆ 5 ಗಂಟೆಗೆ ಮುತ್ತಪ್ಪನ್ ವೆಳ್ಳಾಟಂ ನಡೆದು ಸಾವಿರಾರು ಭಕ್ತರು ಮುತ್ತಪ್ಪನ ದರ್ಶನ ಪಡೆದರು.ಸಂಜೆ 6 ಗಂಟೆಗೆ ನಗರದ ಅಯ್ಯಪ್ಪ ದೇವಾಲಯದಿಂದ ತಾಲಪೋಲಿ ಮೆರವಣಿಗೆ ನಡೆಯಿತು. ಕೇರಳದ ಚೆಂಡೆ, ಸುಡುಮದ್ದು ಪ್ರದರ್ಶನ ಭಕ್ತರ ಮನಸೂರೆಗೊಂಡಿತು.ದೇವಾಲಯದ ಮುಂಭಾಗದ ಭವ್ಯವಾದ ಕಲಾ ವೇದಿಕೆಯಲ್ಲಿ ಸ್ಥಳೀಯ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ತೆರೆಯಲ್ಲಿ ಪಾಲ್ಗೊಂಡಿದ್ದ ಭಕ್ತಾದಿಗಳಿಗೆ ದೇವಾಲಯ ಸೇವಾ ಟ್ರಸ್ಟ್ ವತಿಯಿಂದ ಅನ್ನದಾನ ಪ್ರಸಾದ ವಿನಿಯೋಗ ನಡೆಯಿತು.ಶ್ರೀ ಮುತ್ತಪ್ಪ ಸ್ವಾಮಿ ಸೇವಾ ಟ್ರಸ್ಟ್ ಅಧ್ಯಕ್ಷ ಕೆ. ವರದ, ಉತ್ಸವ ಸಮಿತಿ ಅಧ್ಯಕ್ಷ ಎಂ.ಡಿ. ರಂಜಿತ್ ಕುಮಾರ್, ಉಪಾಧ್ಯಕ್ಷ ವಿಮಲ್ ನಾಯರ್, ಸಂಚಾಲಕ ಮಣಿಕಂಠನ್ ಮತ್ತಿತರರು ಇದ್ದರು.