ಆಪರೇಷನ್ ಸಿಂದೂರ ಯಶಸ್ವಿ: ಭಕ್ತರಿಂದ ವಿಷ್ಣು ಸಹಸ್ರನಾಮ ಪಠಣ

| N/A | Published : May 15 2025, 01:42 AM IST / Updated: May 15 2025, 01:10 PM IST

ಆಪರೇಷನ್ ಸಿಂದೂರ ಯಶಸ್ವಿ: ಭಕ್ತರಿಂದ ವಿಷ್ಣು ಸಹಸ್ರನಾಮ ಪಠಣ
Share this Article
  • FB
  • TW
  • Linkdin
  • Email

ಸಾರಾಂಶ

ಆಪರೇಷನ್ ಸಿಂದೂರ ಕಾರ್ಯಾಚರಣೆಯಲ್ಲಿ ಸಂಪೂರ್ಣ ಯಶಸ್ಸು ಸಾಧಿಸಿ ದೇಶದ ಜನರ ಮೆಚ್ಚುಗೆಗೆ ಪಾತ್ರರಾದ ಭಾರತೀಯ ಸೈನಿಕರಿಗೆ ಶುಭಕೋರಿ ಕೆ.ಆರ್.ಪೇಟೆ  ಪುರಸಭಾ ವ್ಯಾಪ್ತಿಯ ಹೊಸಹೊಳಲು ಗ್ರಾಮದ ಶ್ರೀಲಕ್ಷ್ಮೀನಾರಾಯಣಸ್ವಾಮಿ ದೇವಾಲಯದ ಆವರಣದಲ್ಲಿ ವಿಷ್ಣ ಸಹಸ್ರನಾಮ ಪಠಣ ನಡೆಯಿತು.

  ಕೆ.ಆರ್.ಪೇಟೆ : ಆಪರೇಷನ್ ಸಿಂದೂರ ಕಾರ್ಯಾಚರಣೆಯಲ್ಲಿ ಸಂಪೂರ್ಣ ಯಶಸ್ಸು ಸಾಧಿಸಿ ದೇಶದ ಜನರ ಮೆಚ್ಚುಗೆಗೆ ಪಾತ್ರರಾದ ಭಾರತೀಯ ಸೈನಿಕರಿಗೆ ಶುಭಕೋರಿ ಪುರಸಭಾ ವ್ಯಾಪ್ತಿಯ ಹೊಸಹೊಳಲು ಗ್ರಾಮದ ಶ್ರೀಲಕ್ಷ್ಮೀನಾರಾಯಣಸ್ವಾಮಿ ದೇವಾಲಯದ ಆವರಣದಲ್ಲಿ ವಿಷ್ಣು ಸಹಸ್ರನಾಮ ಪಠಣ ನಡೆಯಿತು.

ದೇಗುಲಕ್ಕೆ ಆಗಮಿಸಿದ ನೂರಾರು ಭಕ್ತರು ಪಹಲ್ಗಾಂನಲ್ಲಿ ಧರ್ಮ ಕೇಳಿ ಹಿಂದೂ ಸಮುದಾಯದ ಮೇಲೆ ದಾಳಿ ನೆಡಸಿ ಹಿಂದೂ ಮಹಿಳೆಯರ ಸಿಂದೂರ ಅಳಿಸಿದ ಪಾತಕಿಗಳಿಗೆ ನಮ್ಮ ಹೆಮ್ಮೆಯ ಭಾರತೀಯ ಸೈನಿಕರು ಮುಟ್ಟಿ ನೋಡಿಕೊಳ್ಳುವ ಪೆಟ್ಟು ನೀಡಿ ಭಯೋತ್ಪಾನೆಯನ್ನು ರಾಷ್ಟ್ರ ಧರ್ಮವನ್ನಾಗಿಸಿಕೊಂಡಿರುವ ಪಾಕಿಸ್ತಾನಕ್ಕೆ ನಮ್ಮ ಕೆಚ್ಚೆದೆಯ ಸೈನಿಕರು ತಕ್ಕ ಉತ್ತರ ನೀಡಿದ್ದಾರೆ ಎಂದರು.

ದೇಶ ಸಂರಕ್ಷಣೆಯ ಜವಾಬ್ದಾರಿ ಹೊತ್ತಿರುವ ನಮ್ಮ ಸೈನಿಕರು ಮತ್ತು ಅವರ ಕುಟುಂಬಗಳಿಗೆ ಒಳಿತಾಗಬೇಕು. ಪ್ರಧಾನಿ ನರೇಂದ್ರ ಮೋದಿ ಮತ್ತು ಅವರ ತಂಡಕ್ಕೆ ಹಾಗೂ ಭಾರತದ ಎಲ್ಲಾ ಪ್ರಜೆಗಳಿಗೂ ಭಗವಂತನ ರಕ್ಷಾಕವಚ ದೊರಕಲಿ ಎಂಬ ಸಂಕಲ್ಪದೊಡನೆ ಶ್ರೀವಿಷ್ಣು ಸಹಸ್ರನಾಮ ಪಾರಾಯಣ ನಡೆಸಲಾಗುತ್ತಿದೆ ಎಂದು ಭಕ್ತರು ತಿಳಿಸಿದರು.

ಈ ವೇಳೆ ವಿನಯ್ ಗುರುಗಳು, ರಾಜಭಟ್ಟರು, ಸುನಿತಾ ನಂದಕುಮಾರ್, ಶಾರದಾ ಸುಬ್ರಮಣ್ಯ, ರೇಖಾ ರವಿ, ಪುನೀತ್, ಎಚ್.ಡಿ. ರವಿ, ಬಾಲಕೃಷ್ಣ, ರಾಘು ಸೇರಿದಂತೆ ಅನೇಕರು ಪಾಲ್ಗೊಂಡು ಪ್ರಾರ್ಥನೆ ಸಲ್ಲಿಸಿದರು.

ಇಂದು ವಿದ್ಯುತ್ ವ್ಯತ್ಯಯ

ಮದ್ದೂರು:

ವಿದ್ಯುತ್ ವಿತರಣಾ ಕೇಂದ್ರದಲ್ಲಿ ತುರ್ತು ನಿರ್ವಹಣಾ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಮೇ 15 ರಂದು ಬೆಳಗ್ಗೆ 10 ರಿಂದ ಸಂಜೆ 4 ಗಂಟೆವರೆಗೆ ತಾಲೂಕಿನ ಕೊಪ್ಪ, ಹೊಸಗಾವಿ, ತಗ್ಗಹಳ್ಳಿ, ನಂಬಿನಾಯಕನಹಳ್ಳಿ, ಬಿದರಕೋಟೆ, ಗೂಳೂರು, ಟಿ.ಬಳ್ಳೆಕೆರೆ, ಡಿ.ಮಲ್ಲಿಗೆರೆ, ಚಿಕ್ಕದೊಡ್ಡಿ, ಡಿ.ಹೊಸಳ್ಳಿ, ಅರಗಿನಮಳೆ, ಚಿಕ್ಕನಹಳ್ಳಿ ಮತ್ತು ಅಬಲವಾಡಿ ಗ್ರಾಮಗಳ ಹಾಗೂ ಸುತ್ತಮುತ್ತಲ ಗ್ರಾಮಗಳಿಗೆ ವಿದ್ಯುತ್ ಸಂಪರ್ಕ ಸ್ಥಗಿತಗೊಳಲಿದೆ. ಸಾರ್ವಜನಿಕರು, ಗ್ರಾಹಕರು ಸಹಕರಿಸುವಂತೆ ಸೆಸ್ಕ್ ಅಧಿಕಾರಿಗಳು ಮನವಿ ಮಾಡಿದ್ದಾರೆ.