ವಿಪಕ್ಷಗಳಿಗೆ ಕನಿಷ್ಟ ಮಾನ ಮರ್ಯಾದೆ ಇಲ್ಲ : ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್

| N/A | Published : Apr 15 2025, 12:51 AM IST / Updated: Apr 15 2025, 01:30 PM IST

ವಿಪಕ್ಷಗಳಿಗೆ ಕನಿಷ್ಟ ಮಾನ ಮರ್ಯಾದೆ ಇಲ್ಲ : ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್
Share this Article
  • FB
  • TW
  • Linkdin
  • Email

ಸಾರಾಂಶ

ಜಾತಿ ಗಣತಿ ಸಮೀಕ್ಷೆಯಲ್ಲಿ ನಿರೀಕ್ಷೆಯಂತೆ ಲಿಂಗಾಯತರು ಪ್ರಥಮ, ಅಲ್ಪಸಂಖ್ಯಾತರು ದ್ವಿತೀಯ ಹಾಗೂ ಒಕ್ಕಲಿಗರು ತೃತೀಯ, ಕುರುಬ ಸಮುದಾಯದವರು ನಾಲ್ಕನೇ ಸ್ಥಾನದಲ್ಲಿದ್ದಾರೆ. ಸಮೀಕ್ಷೆಯ ವರದಿ ಎಲ್ಲಾ ಜಾತಿಯ ಮುಖಂಡರು ಸಮ್ಮತಿಸಿದ್ದಾರೆ.

 ಕೋಲಾರ :  ಜಾತಿಗಣತಿ ಜಾರಿ ಮಾಡಿಲ್ಲ ಎಂಬ ಆರೋಪ ಮಾಡುತ್ತಿದ್ದ ವಿಪಕ್ಷಗಳು ಈಗಾ ಜಾತಿ ಗಣತಿ ವರದಿ ಜಾರಿ ಮಾಡಲು ಮುಂದಾದರೆ ಅದನ್ನು ಸಿದ್ದರಾಮಯ್ಯ ಪ್ರಾಯೋಜಿತ ಎಂಬ ಆರೋಪಗಳು ಮಾಡುತ್ತಿದೆ. ಇವರಿಗೆ ಕನಿಷ್ಟ ಮಾನ ಮರ್ಯಾದೆ ಇಲ್ಲವಾಗಿದೆ ಎಂದು ನಗರಾಭಿವೃದ್ಧಿ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಸುರೇಶ್ ಅಸಮಾಧಾನ ವ್ಯಕ್ತ ಪಡಿಸಿದರು. 

ನಗರದ ಅಂಬೇಡ್ಕರ್ ಜಯಂತಿ ಕಾರ್ಯಕ್ರಮಕ್ಕೆ ಆಗಮಿಸಿದ್ದ ಅವರು ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಜಾತಿ ಗಣತಿ ಸಮೀಕ್ಷೆಯಲ್ಲಿ ನಿರೀಕ್ಷೆಯಂತೆ ಲಿಂಗಾಯತರು ಪ್ರಥಮ, ಅಲ್ಪಸಂಖ್ಯಾತರು ದ್ವಿತೀಯ ಹಾಗೂ ಒಕ್ಕಲಿಗರು ತೃತೀಯ, ಕುರುಬ ಸಮುದಾಯದವರು ನಾಲ್ಕನೇ ಸ್ಥಾನದಲ್ಲಿದ್ದಾರೆ. ಸಮೀಕ್ಷೆಯ ವರದಿ ಎಲ್ಲಾ ಜಾತಿಯ ಮುಖಂಡರು ಸಮ್ಮತಿಸಿದ್ದಾರೆಂದು ತಿಳಿಸಿದರು.

ಆದರೆ ಇದನ್ನು ನಿಯಮಾನುಸಾರ ಮುಂದಿನ ಸದನದಲ್ಲಿ ಚರ್ಚೆಗೆ ಇಟ್ಟು ಅಂಗೀಕರಿಸಲಾಗುವುದು. ಸರ್ಕಾರ ಜಾರಿಗೆ ತರುವ ಈ ಯೋಜನೆಯನ್ನು ಎಲ್ಲರೂ ಸಮ್ಮತಿಸಬೇಕಾಗಿದೆ. ಸುಮಾರು 1.60 ಲಕ್ಷ ಮಂದಿ ಶಿಕ್ಷಕರು ಜಾತ್ಯಾತೀತವಾಗಿ ಮಾಡಿರುವ ಸಮೀಕ್ಷೆಯಾಗಿದೆ. ಸ್ವಾತಂತ್ರ್ಯ ನಂತರ ಮಾಡಿರುವ ಜಾತಿಗಣತಿಯ ಸಮೀಕ್ಷೆಯು ಶೇ.95ರಷ್ಟು ಯಶಸ್ವಿಯಾಗಿದೆ. ಕ್ಷುಲಕ ಆರೋಪಗಳು ಸಮಂಜಸವಲ್ಲ, ಒಳ್ಳೆಯ ಕಾರ್ಯಗಳನ್ನು ಮಾಡಿದಾಗ ಒಳ್ಳೆಯದನ್ನು ಮಾತನಾಡುವ ಯೋಗ್ಯತೆ ಇರಬೇಕು, ಆದರೆ ವಿಪಕ್ಷದವರನ್ನು ಅದನ್ನು ಕಳೆದು ಕೊಂಡಿದ್ದಾರೆ ಎಂದರು.

ರಾಜದ 5 ಗ್ಯಾರಂಟಿ ಯೋಜನೆಗಳು ಬಡ ಜನತೆ ಪರವಾದ ಯೋಜನೆಗಳಾಗಿದ್ದು, ಸುಮಾರು 70 ಲಕ್ಷ ಜನತೆ ಇದರ ಪ್ರಯೋಜನ ಪಡೆಯುತ್ತಿದ್ದಾರೆ, ಆದರೆ ಇದನ್ನು ಸಹ ವಿಪಕ್ಷವು ಟೀಕೆ ಮಾಡುತ್ತಿರುವುದರಲ್ಲಿ ಯಾವುದೇ ಅರ್ಥವಿಲ್ಲ, ವಿಪಕ್ಷಗಳ ಟೀಕೆಗಳು, ಆರೋಪಗಳಲ್ಲಿ ನೈಜಕತೆ ಇಲ್ಲವಾದರೆ ಅದಕ್ಕೆ ಸಾರ್ವಜನಿಕವಲಯದಲ್ಲಿ ಯಾವುದೇ ಮೌಲ್ಯವು ಇಲ್ಲದ ಅರ್ಥಹೀನಾ ಟೀಕೆಗಳಾಗುತ್ತದೆ ಎಂದು ವ್ಯಂಗವಾಡಿದರು.

ಕೋಲಾರ-ಚಿಕ್ಕಬಳ್ಳಾಪುರ ಸಹಕಾರಿ ಕೇಂದ್ರ ಬ್ಯಾಂಕ್ ಚುನಾವಣೆಯು ನಿಗದಿತ ಅವಧಿಯಲ್ಲಿ ನಡೆಸಲು ಎಲ್ಲಾ ಸಿದ್ಧತೆಗಳು ನಡೆದಿದೆ. ಈ ಸಂಬಂಧವಾಗಿ ಬಂಗಾರಪೇಟೆ ಶಾಸಕರಾಗಲಿ, ಕೆ.ಜಿ.ಎಫ್ ಶಾಸಕರಾಗಲಿ ಯಾವುದೇ ವಿರೋಧಗಳಿಲ್ಲ. ಸಭೆಗೆ ಅವರು ಗೈರು ಆಗುವ ಮೊದಲು ಅವರಿಗೆ ಇದ್ದ ತುರ್ತು ಕಾರ್ಯಗಳನ್ನು ನನಗೆ ತಿಳಿಸಿ ಹೋಗಿದ್ದರು. ಅದರ ಬಗ್ಗೆ ವಿನಾಕಾರಣ ಹಲವು ಗಾಳಿ ಸುದ್ದಿಗಳಿಗೆ ಮಹತ್ವಗಳನ್ನು ನೀಡುವುದು ಬೇಡ, ನಾವೆಲ್ಲಾ ಒಂದಾಗಿದ್ದೇವೆ. ನಮ್ಮಲ್ಲಿ ಇರುವುದು ಸಣ್ಣ ಪುಟ್ಟ ವಿಚಾರಗಳ ಬಗ್ಗೆ ಅಭಿಪ್ರಾಯಗಳು ಬೇರೆ ಬೇರೆಯಾಗಿದೆ ಇದೆ ಹೊರತು ಭಿನ್ನ ಮತಗಳಿಲ್ಲ. ಇಬ್ಬರು ಶಾಸಕರು ಸಭೆಯ ತೀರ್ಮಾನಕ್ಕೆ ತಮ್ಮ ಸಹಮತ ಇರುತ್ತದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದರು ಎಂದು ಸ್ಪಷ್ಪಪಡಿಸಿದರು.

ಅಂಬೇಡ್ಕರ್ ರಚಿಸಿದಂತ ಸಂವಿಧಾನದಿಂದಾಗಿ ನಮಗೆ ಇಂದು ಈ ಸ್ಥಾನಮಾನಗಳು ಸಿಗಲು ಕಾರಣವಾಗಿದೆ. ಸಾರ್ವಜನಿಕರಿಗೆ ಅನುಕೊಲ ಮಾಡಿಕೊಡಬೇಕೆಂಬುವುದು ನಮ್ಮ ಉದ್ದೇಶವಾಗಿದೆ, ನಮಗೂ ಎಸ್.ಎನ್ ಅವರಿಗೂ ಯಾವುದೇ ಭಿನ್ನಮತಗಳಿಲ್ಲ. ನಾವುಗಳೆಲ್ಲಾ ಚೆನ್ನಾಗಿಯೇ ಇದ್ದೇವೆ. ಯಾರೂ ನೀಡುವ ತಪ್ಪು ಮಾಹಿತಿಗಳ ಕುರಿತು ನೈಜಕತೆ ಅರಿತು ಮುಂದುವರೆಯಬೇಕು. 

ಯಾರೇ ತಪ್ಪು ಮಾಡಿದ್ದರೂ ಶಿಕ್ಷೆ ಅನುಭವಿಸುತ್ತಾರೆಂದ ಅವರು, ಬಿಜೆಪಿ ಮತ್ತು ಜೆ.ಡಿ.ಎಸ್ ಪಕ್ಷಗಳು ಪರಸ್ಪರ ಬದ್ದ ವೈರಿಗಳಾಗಿದ್ದವರು ಲೋಕಸಭಾ ಚುನಾವಣೆಯಲ್ಲಿ ಕೈಜೋಡಿಸಿದರು ಇನ್ನು ನಮ್ಮ ನಮ್ಮಲ್ಲಿನ ಸಣ್ಣಪುಟ್ಟ ವ್ಯತ್ಯಾಸಗಳನ್ನೂ ಸರಿಪಡಿಸಿಕೊಳ್ಳಲು ನಮಗೆ ಆಗುವುದಿಲ್ಲವೇ ಎಂದು ಪ್ರಶ್ನಿಸಿದರು, ನಾವು ಸಹ ರಾಜ್ಯಾದಾದ್ಯಂತ ಏ.17ರಂದು ಬೃಹತ್ ಪ್ರತಿಭಟನೆ ಕೇಂದ್ರ ಸರ್ಕಾರದ ವಿರುದ್ದ ಹಮ್ಮಿಕೊಳ್ಳಲಾಗುವುದು. ಸರ್ಕಾರದ ಸೌಲಭ್ಯಗಳನ್ನು ಜನರಿಗೆ ಸಾಮೂಹಿಕವಾಗಿ ತಲುಪಿಸಲು ಎಲ್ಲಾ ಇಲಾಖೆಗಳ ಪಟ್ಟಿ ಸಿದ್ದಪಡಿಸಬೇಕೆಂದು ಈಗಾಗಲೇ ಜಿಲ್ಲಾಡಳಿತಕ್ಕೆ ಸೂಚಿಸಲಾಗಿದ್ದು ಶೀಘ್ರದಲ್ಲಿ ಕಾರ್ಯಕ್ರಮ ಆಯೋಜಿಸಲಾಗುವುದು ಎಂದು ತಿಳಿಸಿದರು.

ಸುದ್ದಿಗೋಷ್ಟಿಯಲ್ಲಿ ಶಾಸಕ ಕೊತ್ತೂರು ಮಂಜುನಾಥ್, ಎಂಎಲ್ಸಿ ಎಂ.ಎಲ್.ಅನಿಲ್ ಕುಮಾರ್, ಕೆಪಿಸಿಸಿ ಮುಖಂಡರಾದ ಗೌತಮ್, ಜಿಲ್ಲಾಧ್ಯಕ್ಷ ಲಕ್ಷ್ಮೀನಾರಾಯಣ, ಕಾರ್ಯಾಧ್ಯಕ್ಷ ಊರುಬಾಗಿಲು ಶ್ರೀನಿವಾಸ್, ಎಸ್.ಸಿ ಘಟಕದ ಜಿಲ್ಲಾಧ್ಯಕ್ಷ ಜಯದೇವ್, ಗ್ಯಾರಂಟಿ ಅನುಷ್ಠಾನಾ ಪ್ರಾಧಿಕಾರದ ಅಧ್ಯಕ್ಷ ವೈ.ಶಿವಕುಮಾರ್, ಕುಡಾ ಅಧ್ಯಕ್ಷ ಮಹ್ಮದ್ ಷರೀಫ್, ನಗರಸಭೆ ಅಧ್ಯಕ್ಷೆ ಲಕ್ಷ್ಮೀದೇವಮ್ಮ, ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ರತ್ನಮ್ಮ, ನಗರಸಭೆ ಸದಸ್ಯ ಅಂಬರೀಶ್, ಸುರೇಶ್ ಇದ್ದರು.

ಈಗಾಗಲೇ ಜಾತಿಗಣತಿ ವರದಿ ಅಧ್ಯಯನ ಮಾಡಲು ಎಲ್ಲರಿಗೂ ಪುಸ್ತಕವನ್ನು ಕೊಟ್ಟಿದ್ದಾರೆ ಅವುಗಳನ್ನು ಅಧ್ಯಯನ ಮಾಡಿ ಸದನದಲ್ಲಿ ಚರ್ಚಿಸಲು ಅವಕಾಶವಿರುವುದು. ಈಗಾಗಲೇ ನಾನು ಸಹ ಪೂರ್ಣವಾಗಿ ಅಧ್ಯಯನ ಮಾಡಿಲ್ಲ. ಸದನಕ್ಕೆ ಮುಂಚೆ ಅಧ್ಯಯನ ಮಾಡುತ್ತೇನೆ.

ಬೈರತಿ ಸುರೇಶ್, ಜಿಲ್ಲಾ ಉಸ್ತುವಾರಿ ಸಚಿವ