ಬೇಡ್ತಿ- ವರದಾ ಜೋಡಣೆ ಯೋಜನೆಗೆ ವಿರೋಧ ಸರಿಯಲ್ಲ: ಎಸ್.ಎಂ. ಕೋತಂಬರಿ

| Published : Aug 05 2025, 11:45 PM IST

ಸಾರಾಂಶ

ಉತ್ತರಕನ್ನಡ ಜಿಲ್ಲೆಯ ಕೆಲವರು ಪರಿಸರದ ಹೆಸರಿನಲ್ಲಿ ಯೋಜನೆಗೆ ಅಡ್ಡಗಾಲು ಹಾಕುತ್ತಿರುವುದು ಖಂಡನೀಯ.

ಹಾನಗಲ್ಲ: ವರದಾ ಬೇಡ್ತಿ ನದಿ ಜೋಡಣೆಗೆ ಸಕಾರಣವಿಲ್ಲದೆ ವಿರೋಧಿಸುವ ಬೇಡ್ತಿ ಆಘನಾಶಿನಿ ಕೊಳ್ಳ ಸಮಿತಿಗೆ ಅನ್ನದಾತನಿಗೆ ಒಳಿತಾಗುವುದನ್ನು ಸಹಿಸಲಾಗುತ್ತಿಲ್ಲ. ಸಮುದ್ರ ಸೇರುವ ನೀರನ್ನು ಅನ್ನ ಬೆಳೆಯುವ ಭೂಮಿ ತಾಯಿಗೆ ನೀಡಬೇಕೆನ್ನುವ ಕಿಂಚಿತ್ತೂ ಮಾನವೀಯತೆಯೂ ಇಲ್ಲ ಎಂದು ಉತ್ತರ ಕರ್ನಾಟಕ ಹಾಗೂ ವರದಾ ಬೇಡ್ತಿ ನದಿ ಜೋಡಣಾ ಹೋರಾಟ ಸಮಿತಿ ಅಧ್ಯಕ್ಷ ಎಸ್.ಎಂ. ಕೋತಂಬರಿ ಕಿಡಿಕಾರಿದ್ದಾರೆ.ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಉತ್ತರಕನ್ನಡ ಜಿಲ್ಲೆಯ ಕೆಲವರು ಪರಿಸರದ ಹೆಸರಿನಲ್ಲಿ ಯೋಜನೆಗೆ ಅಡ್ಡಗಾಲು ಹಾಕುತ್ತಿರುವುದು ಖಂಡನೀಯ. ರೈತನ ಹಿತಕ್ಕಾಗಿ ನೀರಾವರಿಗೆ ಬೇಕಾಗುವ ಯೋಜನೆಗಳನ್ನು ಸಮರ್ಪಕವಾಗಿ ಕಾರ್ಯರೂಪಕ್ಕೆ ತರಲು ಬೆಂಬಲಿಸಬೇಕೆ ಹೊರತು, ಕುಂಟುನೆಪಗಳನ್ನು ಮುಂದು ಮಾಡಿ ಅಡ್ಡಪಡಿಸುವುದು ಸರಿ ಅಲ್ಲ. ಈಗಾಗಲೇ ಕೇಂದ್ರ ಹಾಗೂ ರಾಜ್ಯ ಸರ್ಕಾರದಲ್ಲಿ ಈ ಯೋಜನೆ ಅತ್ಯಂತ ಪ್ರಯೋಜನಕಾರಿ ಎಂದು ಸಾಬೀತಾಗಿ, ವಿಸ್ತೃತ ಯೋಜನಾ ವರದಿ ಸಿದ್ಧವಾಗಿದೆ. ಈ ಯೋಜನೆಯ ಕುರಿತು ಪ್ರಾಥಮಿಕ ಹಂತದ ಸಮೀಕ್ಷೆಯೂ ಪೂರ್ಣಗೊಂಡಿದೆ. ಈಗಾಗಲೇ ಈ ಯೋಜನೆ ಕಾರ್ಯಾರಂಭ ಮಾಡಬೇಕಾಗಿತ್ತು. ಈಗ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಇದಕ್ಕೆ ಪೂರ್ಣ ಬೆಂಬಲ ನೀಡುತ್ತಿರುವಾಗ, ಯೋಜನೆಗೆ ಅನುದಾನ ಬಿಡುಗಡೆಯ ಹಂತದಲ್ಲಿರುವಾಗ ತಕರಾರು ಮಾಡುವವರಿಗೆ ವಾಸ್ತವದ ಅರಿವಿಲ್ಲ ಎಂದು ಸಾಬೀತಾಗುತ್ತದೆ ಎಂದರು.ಫೋನ್‌ ಪೇ ಮೂಲಕ ಹಣ ವರ್ಗಾವಣೆ ಮಾಡಿ ವಂಚನೆ

ಹಾವೇರಿ: ಅಪರಿಚಿತ ವ್ಯಕ್ತಿಯೊಬ್ಬ ಸ್ಮಾರ್ಟ್‌ಫೋನ್ ಕಳ್ಳತನ ಮಾಡಿಕೊಂಡು ಫೋನ್ ಪೇ ಮೂಲಕ ₹5.66 ಲಕ್ಷ ಹಣವನ್ನು ವರ್ಗಾಯಿಸಿಕೊಂಡು ಮೋಸವೆಸಗಿರುವ ಘಟನೆ ನಡೆದಿದೆ.

ಸವಣೂರು ತಾಲೂಕು ಕಡಕೋಳ ಗ್ರಾಮದ ತಿಪ್ಪಣ್ಣ ಸುಬ್ಬಣ್ಣನವರ(54) ಎಂಬವರಿಗೆ ಸೇರಿದ ಮೊಬೈಲ್‌ನ್ನು ಅಪರಿಚಿತ ವ್ಯಕ್ತಿಯು ಕಳ್ಳತನ ಮಾಡಿದ್ದಾನೆ. ಅದರಲ್ಲಿರುವ ಮೊಬೈಲ್ ನಂಬರ್ ಉಪಯೋಗಿಸಿ ಫೋನ್‌ ಪೇ ಕ್ರಿಯೆಟ್ ಮಾಡಿಕೊಂಡು ಬ್ಯಾಂಕ್ ಅಕೌಂಟ್‌ನಲ್ಲಿದ್ದ ₹5,66,622 ಹಣವನ್ನು ವಿವಿಧ ಖಾತೆಗಳಿಗೆ ವರ್ಗಾಯಿಸಿಕೊಂಡು ಮೋಸ ಮಾಡಿದ್ದಾರೆ ಎಂದು ದೂರು ನೀಡಿದ್ದು, ಹಾವೇರಿ ಸಿಇಎನ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.