ಸಾರಾಂಶ
ದಾಬಸ್‌ಪೇಟೆ: ಆಡಳಿತಕ್ಕೆ ಬರುವ ಸರ್ಕಾರಗಳು ರೈತರ ಭೂಮಿಯನ್ನು ಕಸಿಯಲು ಮುಂದಾಗುತ್ತವೆ ಹೊರೆತು ಉಳಿಸುವಲ್ಲಿ ಯಾವ ಸರ್ಕಾರಗಳು ಮುಂದಾಗುತ್ತಿಲ್ಲ, ರೈತರ ಸಮಸ್ಯೆಗಳಿಗೆ ಅಧಿಕಾರಿಗಳಾಗಲಿ, ಜನಪ್ರತಿನಿಧಿಯಾಗಲಿ, ಯಾವ ಮಠಾಧೀಶರಾಗಲಿ ಧ್ವನಿ ಎತ್ತುತ್ತಿಲ್ಲ ಇಂದು ದುರಂತವೇ ಸರಿ ಎಂದು ರಾಜ್ಯ ಕಿಸಾನ್ ಸಂಘದ ಪ್ರಧಾನ ಕಾರ್ಯದರ್ಶಿ ಕಾಸರಘಟ್ಟ ಗಂಗಾಧರ್ ಹೇಳಿದರು.
ತ್ಯಾಮಗೊಂಡ್ಲು ಹೋಬಳಿಯ ಕೋಡಿಗೇಹಳ್ಳಿ ಗ್ರಾಪಂ ವ್ಯಾಪ್ತಿಯಲ್ಲಿನ ಭೂಸ್ವಾಧೀನಕ್ಕೆ ಮುಂದಾಗಿರುವ ಕೆಎಡಿಬಿಐ ವಿರುದ್ಧ ಬಳ್ಳಗೆರೆ, ಕೆಂಚಿನಪುರ ಹಾಗೂ ಕೋಡಿಗೇಹಳ್ಳಿ ರೈತರು ಹಮ್ಮಿಕೊಂಡಿದ್ದ ಕಾಲ್ನಡಿಗೆ ಜಾಥಾದಲ್ಲಿ ರೈತರನ್ನು ಉದ್ದೇಶಿಸಿ ಮಾತನಾಡಿದರು.ರಾಜ್ಯದಲ್ಲಿ ಈಗಾಗಲೇ ಕೈಗಾರಿಕೆಗಳ ಹೆಸರಿನಲ್ಲಿ ಸ್ವಾಧೀನಪಡಿಸಿಕೊಂಡಿರುವ ಪ್ರದೇಶಗಳಲ್ಲಿ ಸಂಪೂರ್ಣವಾಗಿ ಕೈಗಾರಿಕೆಗಳು ಸ್ಥಾಪನೆಯಾಗಿಲ್ಲ, ಹತ್ತಿರದ ಸೋಂಪುರ ಕೈಗಾರಿಕಾ ಪ್ರದೇಶದಲ್ಲಿ ಸಾವಿರಾರು ಎಕರೆ ಪ್ರದೇಶ ಖಾಲಿ ಇದೆ, ರಾಜಕಾರಣಿಗಳು ಮತ್ತು ಅಧಿಕಾರಿಗಳು ಸೇರಿ ಭೂಮಾಫಿಯದ ಹೆಸರಿನಲ್ಲಿ ರೈತರ ಭೂಮಿಯನ್ನು ಭೂಗಳ್ಳರಿಗೆ ನೀಡಿ ಹಣ ಮಾಡುತ್ತಿದ್ದಾರೆ, ರೈತರು ಹೋರಾಟದ ಮೊದಲ ದಿನ ಬಂದು ನಂತರ ಕಾಣೆಯಾಗುತ್ತಿದ್ದಾರೆ, ಒಗ್ಗಟ್ಟಿನಿಂದ ಎಲ್ಲಾ ರೈತರು ಭೂಮಿಯನ್ನು ಬಿಡದೇ ಸ್ವಾಧೀನದ ವಿರುದ್ಧ ಹೋರಾಟ ಮಾಡಿದ್ದಲ್ಲಿ ಗೆಲುವು ಸಾಧ್ಯವಾಗುತ್ತದೆ ಎಂದರು.
ಸರ್ಕಾರದ ಮೇಲೆ ಒತ್ತಡ : ಶಾಂತಾಲ ರೈತ ಉತ್ಪಾದಕ ಕಂಪನಿಯ ಅಧ್ಯಕ್ಷ ಕೋಡಿಗೇಹಳ್ಳಿಮಂಜುನಾಥ್ ಮಾತನಾಡಿ ನಮ್ಮ ಗ್ರಾಮದಲ್ಲಿ ಯಾವುದೇ ಬಂಜರು ಭೂಮಿಯಿಲ್ಲ, ಈಗಾಗಲೇ ಪ್ರಭಾವಿ ರಾಜಕಾರಣಿಗಳು ಸುತ್ತಮುತ್ತ ಗ್ರಾಮಗಳಲ್ಲಿ 50 ರಿಂದ 100 ಎಕರೆ ಭೂಮಿಯನ್ನು ಖರೀದಿ ಮಾಡುತ್ತಿದ್ದಾರೆ, ಅಂದರೆ ಇವರೇ ಭೂಮಿಯನ್ನು ರೈತರಿಂದ ಕಡಿಮೆ ಬೆಲೆಗೆ ಖರೀದಿ ಮಾಡಿ ನಂತರ ಸರ್ಕಾರದ ಮೇಲೆ ಒತ್ತಡ ತಂದು ಭೂಮಿಯನ್ನು ಕೈಗಾರಿಕೆಗಳ ಹೆಸರಿನಲ್ಲಿ ಸ್ವಾÃನಪಡಿಸಿಕೊಳ್ಳುವಂತೆ ರೈತರ ವಿರುದ್ಧ ಕೆಲಸ ಮಾಡುತ್ತಿದ್ದಾರೆ, ಪ್ರಭಾವಿಗಳ ಭೂಮಿಯನ್ನು ಕೈಬಿಡುವ ಹುನ್ನಾರವು ನಡೆಯುತ್ತಿದೆ, ರೈತರು ಯಾವುದೇ ಆಮಿಷಗಳಿಗೆ ಒಳಗಾಗಗದೇ ನಮ್ಮ ಭೂಮಿಯನ್ನು ಉಳಿಸುವಲ್ಲಿ ನಾವೆಲ್ಲರೂ ಹೋರಾಟ ಮಾಡೋಣ ಎಂದರು.ಕೃಷಿ ಭೂಮಿ ಬಿಡುವುದಿಲ್ಲ: ಕೋಡಿಗೇಹಳ್ಳಿ, ಕೆಂಚಿನಪುರ ಹಾಗೂ ಬಳ್ಳಗೆರೆ ಗ್ರಾಮಗಳಲ್ಲಿಒಟ್ಟು 1500 ಎಕರೆ ಭೂಮಿಯನ್ನು ಕೈಗಾರಿಕಾ ಪ್ರದೇಶಕ್ಕೆ ಭೂಸ್ವಾಧೀನ ಪ್ರಕ್ರಿಯೆ ಆರಂಭವಾಗಿದೆ, ಇದರಲ್ಲಿ ರೈತರ ಒಪ್ಪಿಗೆಯನ್ನು ಪಡೆಯದೇ ಏಕಾಏಕಿ ಕೃಷಿ ಭೂಮಿಯಲ್ಲಿ ಕೈಗಾರಿಕಾ ಸ್ಥಾಪನೆ ಮಾಡಲು ಹೊರಟಿರುವುದು ಸರ್ವಾಧಿಕಾರಣದ ಧೋರಣೆಯಾಗಿದೆ, ಭೂಸ್ವಾಧೀÃನಕ್ಕೆಒಳಪಟ್ಟ ಪ್ರದೇಶದಲ್ಲಿನ ಶೇಕಡ 70ರಷ್ಟು ರೈತರ ಒಪ್ಪಿಗೆ ಅಗತ್ಯವಾಗಿ ಬೇಕು, ಈ ನಿಯಮವನನು ಪಾಲನೆ ಮಾಡಿಲ್ಲ, ನಮ್ಮ ರೈತರು ಕೃಷಿ ಭೂಮಿಯನ್ನು ಬಿಟ್ಟು ಕೈಗಾರಿಕೆಗಳಲ್ಲಿ ವಾಚ್‌ಮ್ಯಾನ್ ಆಗಲು ತಯಾರಿಲ್ಲ, ಯಾವುದೇ ಕಾರಣಕ್ಕೂ ಕೃಷಿ ಭೂಮಿಯನ್ನು ಬಿಟ್ಟುಕೊಡುವುದಿಲ್ಲ ಎಂದು ರೈತರು ಆಗ್ರಹಿಸಿದರು.
ಕೋಡಿಗೇಹಳ್ಳಿ ಗ್ರಾ.ಪಂ. ವ್ಯಾಪ್ತಿಯಲ್ಲಿ ಕೆಂಚಿನಪುರ, ಬಳ್ಳಗೆರೆ ಹಾಗೂ ಕೋಡಿಗೇಹಳ್ಳಿ ಗ್ರಾಮದ 100ಕ್ಕೂ ಹೆಚ್ಚು ರೈತರು ಗ್ರಾಮದ ಮಠದ ಆವರಣದಿಂದ ಗ್ರಾಮ ಪಂಚಾಯತಿವರೆಗೂ ಕಾಲ್ನೆಡಿಗೆಯಲ್ಲಿ ಬಂದು ಸರ್ಕಾರದ ಗಮನಕ್ಕೆ ರೈತರ ಮನವಿಯನ್ನು ತಲುಪಿಸಲು ಪಿಡಿಓರವರಿಗೆ ಮನವಿಸಲ್ಲಿಸಿದರು.ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯಸಮಿತಿ ಸದಸ್ಯರಾದ ಚಂದ್ರತೇಜಸ್ವಿ, ಎನ್. ಪ್ರಭ, ಗ್ರಾ.ಪಂ.ಸದಸ್ಯರಾದ ನರಸಿಂಹಮೂರ್ತಿ, ಗಂಗಮ್ಮ ಚನ್ನೇಗೌಡ, ಕೃಷಿಕ ಸಮಾಜದ ಪ್ರಧಾನ ಕಾರ್ಯದರ್ಶಿ ಚನ್ನೇಗೌಡ, ಸಿಐಟಿಯು ಜಿಲ್ಲಾಧ್ಯಕ್ಷ ನರಸಿಂಹಮೂರ್ತಿ, ರೈತಮುಖಂಡರಾದ ರಾಜು, ನಾರಾಯಣಗೌಡ, ಗೌಡಪ್ಪ, ಕೆಂಪಣ್ಣ, ಸುರೇಶ್, ಜಯರಾಮಯ್ಯ, ಕೆಂಪಯ್ಯ ಹಾಗೂ ರೈತರು ಭಾಗವಹಿಸಿದ್ದರು.
ಪೋಟೋ 2 : ತ್ಯಾಮಗೊಂಡ್ಲು ಹೋಬಳಿಯ ಕೋಡಿಗೇಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿನ ಭೂಸ್ವಾಧೀನಕ್ಕೆಮುಂದಾಗಿರುವ ಕೆಎಡಿಬಿಐ ವಿರುದ್ದ ಬಳ್ಳಗೆರೆ, ಕೆಂಚಿನಪುರ ಹಾಗೂ ಕೋಡಿಗೇಹಳ್ಳಿ ಗ್ರಾಮದ ರೈತರು ಪಂಚಾಯತಿ ಪಿಡಿಓ ಅವರಿಗೆ ಭುಸ್ವಾಧೀನ ಮಾಡದಂತೆ ಸರ್ಕಾರಕ್ಕೆ ಗಮನಕ್ಕೆ ತರಬೇಕೆಂದು ಮನವಿ ಮಾಡಿದರು.