ಸಾರಾಂಶ
ಮೊಳಕಾಲ್ಮುರು: ರಾಜ್ಯದಲ್ಲಿ ಮನೆ ಮತ್ತು ಕಟ್ಟಡಗಳಿಗೆ ( ಟಿ.ವಿ ಮತ್ತು ಮೊಬೈಲ್ ಗಳಿಗೆ ) ಹೊಸ ಮೀಟರ್ ಅಳವಡಿಸುವ ಸರ್ಕಾರದ ನಿರ್ಧಾರ ಅವೈಜ್ಞಾನಿಕವಾದದು, ಇದು ವಿದ್ಯುತ್ ಖಾಸಗೀಕರಣ ಮಾಡುವ ಹುನ್ನಾರವಾಗಿದ್ದು ಸರ್ಕಾರ ಕೂಡಲೇ ಅಂತಹ ಪ್ರಕ್ರಿಯೆಗಳಿಗೆ ಆಸ್ಪದ ನೀಡಬಾರದಿಂದು ಆಗ್ರಹಿಸಿ ರಾಜ್ಯ ರೈತ ಸಂಘ ಹಾಗೂ ಪ್ರಾಂತ್ಯ ರೈತ ಸಂಘದ ಪದಾಧಿಕಾರಿಗಳು ಪ್ರತಿಭಟನೆ ನಡೆಸಿ ಬೆಸ್ಕಾಂ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.

ಇಲ್ಲಿನ ಬೆಸ್ಕಾಂ ಕಾರ್ಯಪಾಲಕ ಅಭಿಯಂತರರ ಕಚೇರಿ ಆವರಣದಲ್ಲಿ ಬುಧವಾರ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ರಾಜ್ಯ ರೈತ ಸಂಘದ ಉಪಾಧ್ಯಕ್ಷ ಬೇಡ ರೆಡ್ಡಿ ಹಳ್ಳಿ ಬಸವರೆಡ್ಡಿ, ಸರ್ಕಾರ ಮನೆ ಮತ್ತು ಕಟ್ಟಡಗಳಿಗೆ ಹೊಸ ಕರೆನ್ಸಿ ಮೀಟರ್ ಅಳವಡಿಸಲು ಸದ್ದಿಲ್ಲದೆ ಹುನ್ನಾರ ನಡೆಸುತ್ತಿದೆ. ಮನೆಗಳಿಗೆ ಹೊಸ ಕರೆನ್ಸಿ ಮೀಟರ್ ಅಳವಡಿಸುವುದರಿಂದ ಉಚಿತ ವಿದ್ಯುತ್ ನೆಪದಲ್ಲಿ ಬಡವರಿಗೆ ಹೊರೆ ಮಾಡಲಾಗುತ್ತಿದೆ. ಇದೊಂದು ಅವೈಜ್ಞಾನಿಕ ಕ್ರಮವಾಗಿದೆ. ಹಣ ಪಾವತಿಸದೇ ಇದ್ದಲ್ಲಿ ವಿದ್ಯುತ್ ಸಂಪರ್ಕಕಡಿತ ಗೊಳ್ಳುತ್ತದೆ. ಸರ್ಕಾರ ವಾಮ ಮಾರ್ಗದಲ್ಲಿ ಬಡವರನ್ನು ಶೋಷಣೆ ಮಾಡಲು ಪ್ರಮುಖ ವೇದಿಕೆಯನ್ನಾಗಿಸಲು ಸಂಚು ರೂಪಿಸಲಾಗುತ್ತಿದೆ ಎಂದು ಆರೋಪಿಸಿದರು.ಬಡವರ ಪಾಲಿಗೆ ಮರಣ ಶಾಸನದಂತಿರುವ ಈ ಯೋಜನೆಯನ್ನು ಸರ್ಕಾರ ಕೇವಲ ಪ್ರಾಯೋಗಿಕ ಎಂದು ಹೇಳುತ್ತಾ ನಗರ, ಪಟ್ಟಣ, ಗ್ರಾಮ ಮಟ್ಟಕ್ಕೆ ವಿಸ್ತರಿಸಿ ಕೃಷಿ ಪಂಪು ಸೆಟ್‌ಗಳಿಗೆ ಅಳವಡಿಸುವ ಮೂಲಕ ವಿದ್ಯುತ್ ಖಾಸಗೀ ಕರಣ ಮಾಡುವ ತಂತ್ರ ಇದಾಗಿದೆ. ಸರ್ಕಾರ ಖಾಸಗೀ ಕಂಪನಿಗಳ ಜೊತೆ ಶಾಮೀಲಾಗಿ ಮೀಟರ್ ಅಳವಡಿಸುವ ಒಪ್ಪಂದ ಮಾಡಿಕೊಂಡು ಬಡವರಿಗೆ ಹೊರೆ ಮಾಡುತ್ತಿದೆ. ಸರ್ಕಾರ ಕೂಡಲೇ ಇಂತಹ ನಿರ್ಧಾರದಿಂದ ಹೊರ ಬರಬೇಕೆಂದು ಆಗ್ರಹಿಸಿದರು.ಪ್ರತಿಭಟನೆಯಲ್ಲಿ ತಾಲೂಕು ಅಧ್ಯಕ್ಷ ಕೋನಸಾಗರ ಮಂಜುನಾಥ, ಪ್ರಾಂತ್ಯ ರೈತ ಸಂಘದ ಉಪಾಧ್ಯಕ್ಷ ದಾನಸೂರಯ್ಯ, ಡಿ.ಬಿ.ಕೃಷ್ಣ ಮೂರ್ತಿ, ಎಸ್.ಟಿ.ಚಂದ್ರಣ್ಣ, ಎಚ್.ವಿ.ವೀರಣ್ಣ, ಸಣ್ಣಪ್ಪ, ಬಸವರಾಜ, ಕುರಕಲ ಹಟ್ಟಿ ನಾಗರಾಜ, ಮಹೇಶ್ ಮಲ್ಲಯ್ಯ ಗುರುಸ್ವಾಮಿ, ನೇರ್ಲಹಳ್ಳಿ ನಾಗೇಶ್, ಕೊಂಡ್ಲಹಳ್ಳಿ ನಾಗರಾಜ ಇದ್ದರು.