ರಾಜ್ಯ ಸರ್ಕಾರ ದ್ವೇಷ ಭಾಷಣ ವಿಧೇಯಕ ಜಾರಿಗೆ ತರುವ ಮೂಲಕ ಹಿಂದೂ ಧಾರ್ಮಿಕ ಆಚರಣೆ ಮತ್ತು ನಾಯಕತ್ವದ ಧ್ವನಿ ಕುಂಠಿತಗೊಳಿಸಲು ಹೊರಟಿದೆ. ಈ ಮಸೂದೆ ಹಿಂದೂ ಮುಖಂಡರು, ಮಠಾಧೀಶರು, ಶೋಭಾಯಾತ್ರೆಗಳಲ್ಲಿ ಮಾತನಾಡುವ ನಾಯಕರಿಗೆ ಕಾನೂನು ಕಟ್ಟಿಹಾಕಲು ದುರ್ವಿನಿಯೋಗವಾಗುವ ಸಾಧ್ಯತೆ ಹೆಚ್ಚಾಗಿದೆ.
ಹುಬ್ಬಳ್ಳಿ:
ಕರ್ನಾಟಕ ದ್ವೇಷ ಭಾಷಣ ವಿಧೇಯಕ-2025 ಜಾರಿಗೆ ಮುಂದಾಗಿರುವ ರಾಜ್ಯ ಸರ್ಕಾರದ ಕ್ರಮ ಖಂಡಿಸಿ ಬುಧವಾರ ನಗರದ ತಹಸೀಲ್ದಾರ್ ಕಚೇರಿ ಎದುರು ಶ್ರೀರಾಮಸೇನೆ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.ರಾಜ್ಯ ಸರ್ಕಾರ ಈ ಕಾಯ್ದೆ ಜಾರಿಗೆ ತರುವ ಮೂಲಕ ಹಿಂದೂ ಧಾರ್ಮಿಕ ಆಚರಣೆ ಮತ್ತು ನಾಯಕತ್ವದ ಧ್ವನಿ ಕುಂಠಿತಗೊಳಿಸಲು ಹೊರಟಿದೆ. ಈ ಮಸೂದೆ ಹಿಂದೂ ಮುಖಂಡರು, ಮಠಾಧೀಶರು, ಶೋಭಾಯಾತ್ರೆಗಳಲ್ಲಿ ಮಾತನಾಡುವ ನಾಯಕರಿಗೆ ಕಾನೂನು ಕಟ್ಟಿಹಾಕಲು ದುರ್ವಿನಿಯೋಗವಾಗುವ ಸಾಧ್ಯತೆ ಹೆಚ್ಚಾಗಿದೆ. ಹನುಮ ಜಯಂತಿ, ದತ್ತ ಜಯಂತಿ, ಶೋಭಾಯಾತ್ರೆ, ಸಂಕೀರ್ತನೆ, ಧಾರ್ಮಿಕ ಜಾಗೃತಿ ಭಾಷಣಗಳನ್ನೇ "ದ್ವೇಷ ಭಾಷಣ " ಎಂದು ತಪ್ಪಾಗಿ ಪ್ರಕರಣ ದಾಖಲಿಸಿ ಅವರ ಮೇಲೆ ಕಾನೂನು ಕ್ರಮಕೈಗೊಳ್ಳುವ ಹುನ್ನಾರ ಈ ವಿಧೇಯಕದಲ್ಲಿ ಅಡಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಮಸೂದೆ ಜಾರಿಗೆ ಬಂದಲ್ಲಿ ಹಿಂದೂ ಸಮಾಜದ ಧಾರ್ಮಿಕ ಸ್ವಾತಂತ್ರ್ಯ ಮತ್ತು ಜಾಗೃತಿ ಚಟುವಟಿಕೆಗಳಿಗೆ ಗಂಭೀರ ಪರಿಣಾಮ ಬೀರಲಿದೆ ಎಂದ ಪ್ರತಿಭಟನಾಕಾರರು, ಯಾವುದೇ ಕಾರಣಕ್ಕೂ ಈ ವಿಧೇಯಕ ಜಾರಿಗೊಳಿಸಬಾರದು ಎಂದು ಒತ್ತಾಯಿಸಿದರು. ಬಳಿಕ ತಹಸೀಲ್ದಾರ್ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು.ಈ ವೇಳೆ ಸಂಘಟನೆಯ ಜಿಲ್ಲಾಧ್ಯಕ್ಷ ಅಣ್ಣಪ್ಪ ದಿವಟಿ, ಜಿಲ್ಲಾ ಪ್ರಮುಖ ಮಂಜು ಕಾಟಕರ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಸು ದುರ್ಗದ, ಬಸು ಗೌಡರ, ಪ್ರವೀಣ ಮಾಳದಕರ, ಮಾಂತೇಶ ತೊಂಗಳಿ, ವೀರಯ್ಯ ಸಾಲಿಮಠ, ವಿಜಯ ದೇವರಮನಿ, ನಾಗರಾಜ ಸೌತಿಕಾಯಿ ಸೇರಿದಂತೆ ಹಲವರಿದ್ದರು.