ಪ್ರಕೃತಿ ಮೇಲಿನ ದಬ್ಬಾಳಿಕೆ ಮನುಕುಲಕ್ಕೆ ಮಾರಕ

| Published : Nov 19 2024, 12:47 AM IST

ಸಾರಾಂಶ

ದೊಡ್ಡಬಳ್ಳಾಪುರ: ಪ್ರಕೃತಿಯ ಮೇಲೆ ಮನುಷ್ಯನ ದಾಳಿ, ಅಸಹಜ ಜೀವನ ಕ್ರಮಗಳಿಂದಾಗಿ ಇಂದು ಜಗತ್ತಿನಲ್ಲಿ ಹಲವಾರು ವಿಸ್ಮಯಗಳನ್ನು ಕಾಣುತ್ತಿದ್ದೇವೆ. ಈ ಜಗತ್ತಿನಲ್ಲಿ ನಾವು ನಿರೀಕ್ಷಿಸಲಾಗದ ಬದಲಾವಣೆಗಳು ಸಂಭವಿಸಲಿದ್ದು, ಯುದ್ದ ಹಾಗೂ ವೈರಸ್‌ಗಳ ದಾಳಿ ಮನುಕುಲವನ್ನು ವಿನಾಶದತ್ತ ಕೊಂಡೊಯ್ಯಲಿದೆ ಎಂದು ಪರಿಸರವಾದಿ, ವಿಚಿತ್ರ ವಿಸ್ಮಯಗಳ ಸಂಗ್ರಹಕಾರ ಕೆ.ಗುರುದೇವ್ ತಿಳಿಸಿದರು.

ತಾಲೂಕಿನ ತಳಗವಾರ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಅರಸು ವಿವಿ ರಾಷ್ಟ್ರೀಯ ಸೇವಾ ಯೋಜನೆ ಘಟಕದ ವತಿಯಿಂದ ನಡೆದ ವಿಶೇಷ ಯುವಜನ ಸೇವಾ ಶಿಬಿರದ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕಾಲಜ್ಞಾನಿ ವೀರಬ್ರಹ್ಮೇಂದ್ರಸ್ವಾಮಿ ಮುಂದಾಗುವ ಹಲವಾರು ವಿಚಿತ್ರಗಳನ್ನು ಶತಮಾನಗಳ ಹಿಂದೆಯೇ ತಿಳಿಸಿದ್ದರು. ವಿಜ್ಞಾನಿಗಳು ಸಹ ಇಂದು ಪ್ರಕೃತಿಯ ಸವಾಲುಗಳ ಬಗ್ಗೆ ಚಿಂತಿಸುತ್ತಿದ್ದಾರೆ. ಮಾನವನ ವಿಕಾಸ, ಆಧುನಿಕ ಜೀವನ ಪದ್ಧತಿಗಳು ನಮ್ಮ ಏಳಿಗೆಗಾಗಿ ಇರಬೇಕೇ ಹೊರತು ನಾಶಕ್ಕಲ್ಲ. ಮಾನವನ ವಿಕಾಸದ ಪ್ರತಿ ಹಂತಗಳನ್ನು 400 ವರ್ಷಗಳ ಹಿಂದೆಯೇ ವೀರಬ್ರಹ್ಮೇಂದ್ರಸ್ವಾಮಿ ಹೇಳಿದ್ದರು. ಈಗಾಗಲೇ ಮಾನವ ಹಲವಾರು ಕ್ರಾಂತಿಕಾರಕ ಸಂಶೋಧನೆಗಳನ್ನು ಕೈಗೊಂಡಿದ್ದಾನೆ. ಆದರೆ ಪ್ರಕೃತಿಯ ಮೇಲಿನ ದಬ್ಬಾಳಿಕೆ, ಕಲುಷಿತ ವಾತಾವರಣಗಳಿಂದ ಸೃಷ್ಟಿಯಲ್ಲಿ ಏರುಪೇರುಗಳಾದರೆ, ಮಾನವನ ಹಾರ್ಮೋನ್ಗಳ ಬದಲಾವಣೆಗಳು ವಿಚಿತ್ರ ಸೃಷ್ಟಿಗಳಿಗೆ ಕಾರಣವಾಗುತ್ತಿವೆ. ಪರಿಸರ ಸಂರಕ್ಷಣೆಗೆ ಒತ್ತು ನೀಡುವುದು ಹಾಗೂ ಆರೋಗ್ಯಕರ ಜೀವನ ವಿಧಾನ ರೂಪಿಸಿಕೊಳ್ಳದಿದ್ದರೆ ಮುಂದೆ ಇನ್ನೂ ಹಲವಾರು ಅಪಾಯಗಳನ್ನು ಎದುರಿಸಬೇಕಾಗುತ್ತದೆ ಎಂದರು.

ತಾಲೂಕು ಕಸಾಪ ಮಾಜಿ ಅಧ್ಯಕ್ಷ ಡಿ.ಶ್ರೀಕಾಂತ, ಎನ್ನೆಸ್ಸೆಸ್ ಅಧಿಕಾರಿ ಕೆ.ಸಿ.ಲಕ್ಷ್ಮೀಶ, ಸಹಾಯಕ ಅಧಿಕಾರಿಗಳಾದ ವೆಂಕಟೇಶ್, ಪೂಜಾ, ತಳಗವಾರ ಸರ್ಕಾರಿ ಪ್ರಾಥಮಿಕ ಶಾಲೆಯ ಶಿಕ್ಷಕ ಮಂಜುನಾಥ್, ಉಪನ್ಯಾಸಕರಾದ ಸಂಧ್ಯಾ, ದೀಪಾ, ಮಾಲಾ, ಸುಷ್ಮಾ, ನಯನ ಇತರರು ಉಪಸ್ಥಿತರಿದ್ದರು.

15ಕೆಡಿಬಿಪಿ4 -

ದೊಡ್ಡಬಳ್ಳಾಪುರದ ತಳಗವಾರದಲ್ಲಿ ದೇವರಾಜ ಅರಸ್ ವ್ಯವಹಾರ ನಿರ್ವಹಣಾ ಮಹಾವಿದ್ಯಾಲಯದ ಎನ್ಎಸ್ಎಸ್ ಶಿಬಿರದಲ್ಲಿ ವಿಚಿತ್ರ ವಿಸ್ಮಯಗಳ ಸಂಗ್ರಹಕಾರ ಕೆ.ಗುರುದೇವ್ ಮಾತನಾಡಿದರು.