ವಿಶ್ವ ಬಾಯಿ ಆರೋಗ್ಯ ದಿನಾಚರಣೆ

| Published : Mar 21 2025, 12:30 AM IST

ಸಾರಾಂಶ

ಆರೋಗ್ಯ ದಿನವನ್ನು ಆಚರಿಸಲಾಗುತ್ತದೆ, ಇದರ ಮುಖ್ಯ ಉದ್ದೇಶ ಜನರಿಗೆ ಬಾಯಿ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸುವುದು

ಕನ್ನಡಪ್ರಭ ವಾರ್ತೆ ಎಚ್‌.ಡಿ. ಕೋಟೆಪಟ್ಟಣದ ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ಆವರಣದಲ್ಲಿ ತಾಲೂಕು ಆರೋಗ್ಯಾಧಿಕಾರಿಗಳಕಚೇರಿ ಎಚ್.ಡಿ. ಕೋಟೆ ಮತ್ತು ಸಾರ್ವಜನಿಕ ಆಸ್ಪತ್ರೆ ಎಚ್.ಡಿ. ಕೋಟೆ ವತಿಯಿಂದ ಬಾಯಿ ಆರೋಗ್ಯ ದಿನಾಚರಣೆ ಕಾರ್ಯಕ್ರಮ ಆಯೋಜಿಸಿತ್ತು.ಕಾರ್ಯಕ್ರಮವನ್ನು ತಾಲೂಕು ಆರೋಗ್ಯಾಧಿಕಾರಿ ಡಾ. ರವಿಕುಮಾರ್, ಸಾರ್ವಜನಿಕ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ. ಶ್ರೀನಿವಾಸ್ ಮತ್ತು ಹಿರಿಯ ವೈದ್ಯಾಧಿಕಾರಿಗಳಾದ ಡಾ. ಸೋಮಣ್ಣ, ದಂತ ತಜ್ಞ ಡಾ. ಸಮೀವುಲ್ಲಾ ಷರೀಫ್ ಉದ್ಘಾಟಿಸಿದರು.ಡಾ. ಸಮೀವುಲ್ಲಾ ಶರೀಫ್ ಮಾತನಾಡಿ, ಮಾ. 20ರಂದು ವಿಶ್ವದಲ್ಲೆಡೆ ವಿಶ್ವಬಾಯಿ ಆರೋಗ್ಯ ದಿನವನ್ನು ಆಚರಿಸಲಾಗುತ್ತದೆ, ಇದರ ಮುಖ್ಯ ಉದ್ದೇಶ ಜನರಿಗೆ ಬಾಯಿ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸುವುದು ಮತ್ತು ಬಾಯಿ ಆರೋಗ್ಯದ ಮಹತ್ವವನ್ನು ತಿಳಿಸಿಕೊಡುವುದು ಎಂದರು. ನಮ್ಮ ಬಾಯಿ ನಮ್ಮ ದೈಹಿಕ ಆರೋಗ್ಯಕ್ಕೆ ಕನ್ನಡಿ ಇದ್ದ ಹಾಗೆ ಏಕೆಂದರೆ ಅನೇಕ ಕಾಯಿಲೆಗಳ ರೋಗಲಕ್ಷಣಗಳು ಮೊದಲಿಗೆ ಬಾಯಲ್ಲಿ ಕಾಣಿಸಿಕೊಳ್ಳುತ್ತವೆ, ಒಬ್ಬ ವ್ಯಕ್ತಿಯ ಬಾಯಿಯನ್ನು ಪರೀಕ್ಷಿಸಿ ಅವನು ಎಷ್ಟು ಆರೋಗ್ಯಕರವಾಗಿದ್ದಾನೆಂದು ಗುರುತಿಸಬಹುದು, ನಾವು ಸೇವಿಸುವ ಆಹಾರವು ಎಷ್ಟೇ ಶುಚಿಯಾಗಿದ್ದು, ಎಷ್ಟೇ ಪೌಷ್ಟಿಕಾಂಶದಿಂದ ಕೂಡಿದರು, ನಮ್ಮ ಬಾಯಿ ಆರೋಗ್ಯಕರವಾಗಿಲ್ಲದಿದ್ದರೆ ನಮ್ಮ ಬಾಯಿಯಲ್ಲಿನ ಕ್ರಿಮಿ ಕೀಟಗಳೊಂದಿಗೆ ಆಹಾರ ನಮ್ಮ ದೇಹಕ್ಕೆ ಸೇರಿ ನಮಗೆ ಅನೇಕ ಕಾಯಿಲೆಗಳು ಬರುವ ಸಂಭವವಿರುತ್ತದೆ, ನಾವು ಪ್ರತಿನಿತ್ಯ ಎರಡು ಬಾರಿ ಹಲ್ಲನ್ನು ಸ್ವಚ್ಛಗೊಳಿಸಬೇಕು, ಬಿಡಿ, ಸಿಗರೇಟ್, ತಂಬಾಕು, ಸೇವನೆಯಿಂದ ದೂರವಿರಬೇಕು, ಇದರಿಂದ ಬಾಯಿ ಕ್ಯಾನ್ಸರ್ ಬರುವ ಸಂಭಾವನೆ ಬಹಳ ಹೆಚ್ಚು ದುಶ್ಚಟಗಳಿಂದ ದೂರವಿದ್ದು ಬಾಯಿ ಆರೋಗ್ಯ ಕಾಪಾಡಿಕೊಳ್ಳಬೇಕು.ಆಡಳಿತ ವೈದ್ಯಾಧಿಕಾರಿ ಡಾ. ಶ್ರೀನಿವಾಸ್ ಮಾತನಾಡಿ, ಬಾಯಿ ಶುದ್ಧವಾಗಿದ್ದರೆ ಮನಸ್ಸು ಸಹ ಶುದ್ಧವಾಗಿರುತ್ತದೆ, ಬಾಯಿಯಲ್ಲಿ ವಾಸನೆ ಬಂದರೆ ಅವನ ಮನಸ್ಸು ಶುದ್ಧವಾಗಿ ಇರೋದಿಲ್ಲ, ಬಾಯಿ ಆಹಾರವನ್ನು ಚೆನ್ನಾಗಿ ಆಗಿಯುವುದರಿಂದ ಅದ್ದು ದೇಹದಲ್ಲಿ ಚೆನ್ನಾಗಿ ಜೀರ್ಣವಾಗುತ್ತದೆ ಎಂದರು.ಟಿಎಚ್‌ಒ ಡಾ.ಟಿ. ರವಿಕುಮಾರ್‌ ಮಾತನಾಡಿ, ನಮ್ಮ ತಾಲೂಕಿನಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಸಹ ವಿಶ್ವ ಬಾಯಿ ಆರೋಗ್ಯ ದಿನಾಚರಣೆ ಕಾರ್ಯಕ್ರಮವನ್ನು ಆಚರಿಸುತಿದ್ದೇವೆ, ಎಲ್ಲರೂ ದಿನನಿತ್ಯ ದೇಹವನ್ನು ಸ್ವಚ್ಛಗೊಳಿಸುವ ಹಾಗೆ ದಂತವನ್ನು ಸ್ವಚ್ಛಗೊಳಿಸಬೇಕು, ದಿನಕ್ಕೆರಡು ಬಾರಿ ದಂತವನ್ನು ಸ್ವಚ್ಛಗೊಳಿಸಬೇಕು ಎಂದು ತಿಳಿಸಿದರು.ಎಒ ಮೋಹನ್, ಕಚೇರಿ ಅಧೀಕ್ಷಕ ತಾರದೇವಿ, ಶುಶ್ರೂಷಕ ಮೇಲ್ವಿಚಾರಕ ಪರಿಮಳ ಗಾಳಂಕಿ, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಟಿ. ರವಿರಾಜ್, ಅರಲಪ್ಪ, ಶುಶ್ರೂಷಕ ಅಧಿಕಾರಿಗಳಾದ ಸರೋಜಿನಿ, ಸುನೀತ, ಕಲಾವತಿ, ಸಿಬ್ಬಂದಿ ವರ್ಗದವರು ಇದ್ದರು.