ಸಾರಾಂಶ
ಭಾರತೀಯ ವಿಕಾಸ ಟ್ರಸ್ಟ್ (ಬಿವಿಟಿ) ಮತ್ತು ಉಡುಪಿಯ ರೋಬೋಸ್ವಾಫ್ಟ್ ಟೆಕ್ನಾಲಜೀಸ್ ಸಹಯೋಗದಲ್ಲಿ ಉಚಿತ ಸ್ವ-ಉದ್ಯೋಗ ಆಧಾರಿತ ೮ ದಿನಗಳ ‘ಅರ್ಗ್ಯಾನಿಕ್ ಹರ್ಬಲ್ ಕಾಸ್ಮೆಟಿಕ್ ಪ್ರಾಡಕ್ಟ್ ತಯಾರಿಕೆ’ ತರಬೇತಿ ಸಮಾರೋಪ ಸಮಾರಂಭ ಉಡುಪಿ ತಾಲೂಕಿನ ಬಡಾನಿಡಿಯೂರು ಗ್ರಾಮ ಪಂಚಾಯಿತಿ ಸಭಾಭವನದಲ್ಲಿ ನಡೆಯಿತು.
ಕನ್ನಡಪ್ರಭ ವಾರ್ತೆ ಮಣಿಪಾಲ
ಇಲ್ಲಿನ ಭಾರತೀಯ ವಿಕಾಸ ಟ್ರಸ್ಟ್ (ಬಿವಿಟಿ) ಮತ್ತು ಉಡುಪಿಯ ರೋಬೋಸ್ವಾಫ್ಟ್ ಟೆಕ್ನಾಲಜೀಸ್ ಸಹಯೋಗದಲ್ಲಿ ಉಚಿತ ಸ್ವ-ಉದ್ಯೋಗ ಆಧಾರಿತ ೮ ದಿನಗಳ ‘ಅರ್ಗ್ಯಾನಿಕ್ ಹರ್ಬಲ್ ಕಾಸ್ಮೆಟಿಕ್ ಪ್ರಾಡಕ್ಟ್ ತಯಾರಿಕೆ’ ತರಬೇತಿ ಸಮಾರೋಪ ಸಮಾರಂಭ ಉಡುಪಿ ತಾಲೂಕಿನ ಬಡಾನಿಡಿಯೂರು ಗ್ರಾಮ ಪಂಚಾಯಿತಿ ಸಭಾಭವನದಲ್ಲಿ ನಡೆಯಿತು.ಈ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಬಡಾನಿಡಿಯೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಯಶೋದಾ ಪಿ. ಆಚಾರ್ಯ ಮಾತನಾಡಿ, ಇಂದಿನ ದಿನಗಳಲ್ಲಿ ಇನ್ನಷ್ಟು ತರಬೇತಿ ಕಾರ್ಯಕ್ರಮಗಳನ್ನು ಗ್ರಾಮಮಟ್ಟದಲ್ಲಿ ಆಯೋಜಿಸಲು ಬೇಕಾದ ಎಲ್ಲ ರೀತಿಯ ಸಹಕಾರಗಳನ್ನು ನೀಡುತ್ತೇವೆ ಎಂದು ಶುಭಹಾರೈಸಿದರು.ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಸ್ವರ್ಣ ಸಂಜೀವಿನಿ ತಾಲೂಕುಮಟ್ಟದ ಒಕ್ಕೂಟ ಅಧ್ಯಕ್ಷೆ ಲತಾ ಅಶೋಕ್ ಹಾಗೂ ನವಶಕ್ತಿ ಸಂಜೀವಿನಿ ಗ್ರಾಮಮಟ್ಟದ ಒಕ್ಕೂಟ ಅಧ್ಯಕ್ಷೆ ತಾರಾ ತಿಂಗಳಾಯ ಮಾತನಾಡಿ, ಅಭ್ಯರ್ಥಿಗಳು ತರಬೇತಿಯ ಪ್ರಯೋಜನ ಪಡೆದುಕೊಂಡು ಸ್ವ-ಉದ್ಯೋಗ ಪ್ರಾರಂಭಿಸಲು ಹುರಿದುಂಬಿಸಿದರು.ಒಕ್ಕೂಟದ ತಾಲೂಕು ವ್ಯವಸ್ಥಾಪಕಿ ಸವಿತಾ ಮತ್ತು ವಲಯ ಮೇಲ್ವಿಚಾರಕರು, ಉತ್ಪನ್ನದ ಪ್ಯಾಕಿಂಗ್ ಬ್ರಾಂಡಿಂಗ್, ಮಾರುಕಟ್ಟೆ ವ್ಯವಸ್ಥೆ ಬಗ್ಗೆ ಮಾಹಿತಿ ನೀಡಿದರು. ಬಿವಿಟಿಯ ಪ್ರೋಗ್ರಾಂ ಆಫೀಸರ್ ಪ್ರತಿಮಾ, ಮುಂದಿನ ದಿನಗಳಲ್ಲಿ ಕೌಶಲ್ಯ ತರಬೇತಿಯನ್ನು ನೀಡುವ ಭರವಸೆಯನ್ನಿತ್ತರು.ಪಂಚಾಯಿತಿ ಕಾರ್ಯದರ್ಶಿ ಗುರುರಾಜ್, ತರಬೇತುದಾರರಾದ ಪೃಥಿಣಿ ಉಪಸ್ಥಿತಿದ್ದರು. ಎನ್‌ಆರ್‌ಎಲ್‌ಎಂ, ಬಿಆರ್‌ಪಿಇಪಿ, ಒಕ್ಕೂಟದ ಸಿಆರ್‌ಪಿಎಸ್ ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು. ಸುಮಾರು ೩೫ ಮಂದಿ ಮಹಿಳೆಯರು ಭಾಗವಹಿಸಿದ್ದರು.