ಹಿರೇಕೆರೂರು: ನಮ್ಮ ಸಮಾಜದಲ್ಲಿ ಆರ್ಥಿಕ, ಸಾಮಾಜಿಕ, ಶೈಕ್ಷಣಿಕವಾಗಿ ಹಿಂದುಳಿದವರಿಗೆ ಸಹಾಯ, ಸಹಕಾರ, ಪ್ರೋತ್ಸಾಹ ಮಾಡುವ ಮೂಲಕ ಅವರಿಗೆ ಧೈರ್ಯ ಮತ್ತು ಧ್ವನಿ ನೀಡಲು ಸಂಘಟನೆ ಅತಿ ಅವಶ್ಯವಾಗಿದೆ ಎಂದು ತಾಲೂಕು ಬಣಜಿಗ ಸಮಾಜದ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಬಾಬಣ್ಣ ಹಂಚಿನ ಹೇಳಿದರು.ಪಟ್ಟಣದ ಬಯಲು ಬಸವೇಶ್ವರ ಕಲ್ಯಾಣ ಮಂಟಪದಲ್ಲಿ ತಾಲೂಕು ಬಣಜಿಗ ಸಮಾಜದ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಸಂಜೆ ಏರ್ಪಡಿಸಿದ್ದ ಬಣಜಿಗ ಸಮಾಜದ ಸಂಸ್ಥಾಪನಾ ದಿನಾಚರಣೆ ಮತ್ತು ನೂತನ ಮಹಿಳಾ ಘಟಕದ ರಚನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಈ ಸಮಾಜದ ಸಂಸ್ಥಾಪನೆ ಮಾಡಿರುವುದು ಇತರೇ ಸಮಾಜದವರ ವಿರುದ್ಧ ಅಲ್ಲ, ಬದಲಿಗೆ ನಮ್ಮಲ್ಲಿನ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ, ಸರ್ಕಾರದ ಸೌಲಭ್ಯ ಪಡೆಯಲು ಮತ್ತು ಆರ್ಥಿಕವಾಗಿ ಹಿಂದುಳಿದವರಿಗೆ ಧ್ವನಿ ನೀಡುವ ಮೂಲಕ, ನಮ್ಮ ಸಮಸ್ಯೆಗಳನ್ನು ಹೋಗಲಾಡಿಸುವುದು ಮುಖ್ಯ ಉದ್ದೇಶವಾಗಿದೆ. ಈಗಾಗಲೇ ನಮ್ಮ ನಮಾಜಕ್ಕೆ ಸಿಗಬೇಕಾದ 2ಎ ಮಿಸಲಾತಿ ನೀಡಲು ಹೋರಾಟ ನಡೆಸಲಾಗುತ್ತಿದೆ. ಸಮಾಜದ ಸಭೆ, ಸಮಾರಂಭಗಳಿಗೆ ಸ್ವಂತ ಸಮುದಾಯ ಭವನ ಅಥವಾ ಕಚೇರಿ ಕಟ್ಟಡ ಅತಿ ಅವಶ್ಯವಾಗಿದ್ದು, ಮುಂಬರುವ ದಿನಗಳಲ್ಲಿ ಭವನ ನಿರ್ಮಿಸಲು ಹೋರಾಟ ನಡೆಸಲಾಗುವುದು ಎಂದರು.ಶಿಕ್ಷಕ ಮಹೇಶ್ವರಪ್ಪ ಮೊಗಲಿ ಮಾತನಾಡಿ, ಸಂಘಟನೆ ಇದ್ದರೆ ಮಾತ್ರ ಅಸಾಧ್ಯವಾದುದನ್ನು ಸಾಧಿಸಿ ತೋರಿಸಬಹುದು. ನಮ್ಮ ಸಮಾಜ ಆರ್ಥಿಕವಾಗಿ, ಸಾಮಾಜಿಕವಾಗಿ, ರಾಜಕೀಯವಾಗಿ, ಶೈಕ್ಷಣಿಕವಾಗಿ ಹಿಂದುಳಿಯುತ್ತಾ ಬರುತ್ತಿರುವುದು ಅತಿ ನೋವಿನ ಸಂಗತಿಯಾಗಿದೆ. ಈ ಎಲ್ಲ ಸಮಸ್ಯೆಗಳನ್ನು ಹೋಗಲಾಡಿಸಲು ಒಗ್ಗಟ್ಟಿನ ಹೋರಾಟ ಅವಶ್ಯವಾಗಿದೆ ಎಂದರು.ಇದಕ್ಕೂ ಮುನ್ನ ಬಸವೇಶ್ವರ, ಯಡಿಯೂರು ಸಿದ್ದಲಿಂಗೇಶ, ಅಕ್ಕಮಹಾದೇವಿ ಭಾವ ಚಿತ್ರಗಳಿಗೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ಸಮಾಜದ ಸಂಸ್ಥಾಪನಾ ದಿನ ಆಚರಿಸಲಾಯಿತು.ಶಿಕ್ಷಕ ಮಹೇಶ್ವರಪ್ಪ ಮೊಗಲಿ, ವಸತಿ ನಿಲಯದ ವಾರ್ಡನ್ ಶಿವಯೋಗಿ ಅಂಗಡಿ ಅವರಿಂದ ಸಂಗೀತ ಕಾರ್ಯಕ್ರಮ ಜರುಗಿತು.ಮದ್ವೀರಶೈವ ಮಹಾಸಮಾಜದ ಅಧ್ಯಕ್ಷ ವಿರೂಪಾಕ್ಷಪ್ಪ ಹಂಪಾಳಿ, ಬಣಜಿಗ ಸಮಾಜದ ಪದಾಧಿಕಾರಿಗಳಾದ ಇಂದುಧರ ಶೆಟ್ಟರ, ಶಿವಲಿಂಗಪ್ಪ ಕಲ್ಯಾಣಿ, ಪರಮೇಶಪ್ಪ ಶೆಟ್ಟರ, ಉಮೇಶ ಹಳಕಟ್ಟಿ, ಪ್ರಕಾಶ ಹಂಪಾಳಿ, ಸಂತೋಷ ವಾಲಿ, ಇರಣ್ಣ ಹಾದ್ರಿಹಳ್ಳಿ, ಮಾಲತೇಶ ಕೋರಿ, ಚಂದ್ರಣ್ಣ ಹಲವಾಲದ, ಚಂದ್ರಣ್ಣ ಕಲ್ಯಾಣಿ, ಬಸವರಾಜಪ್ಪ ಹಲವಾಗಿಲ, ವೀರೇಶ ಹಂಚಿನ, ಶೇಖಪ್ಪ ಬೇತೂರ, ಮಂಜುನಾಥ ಕಂಪ್ಲಿ, ಕೆ.ಪಿ.ಕಲ್ಯಾಣಿ, ಪರಮೇಶಪ್ಪ ಹಳಕಟ್ಟಿ, ಶಿವಣ್ಣ ಹಳಕಟ್ಟಿ, ಸಿದ್ದಲಿಂಗೇಶ ಹಾದ್ರಿಹಳ್ಳಿ, ಶಂಕ್ರಪ್ಪ ಕೋರಿ, ರುದ್ರೇಶ ಬೇತೂರ, ವಿಜಯಕುಮಾರ ಹಳಕಟ್ಟಿ, ರುದ್ರೇಶ ಹಳಕಟ್ಟಿ, ಸಂತೋಷ ಚಿಂಚಿ, ಕವಿತಾ ಕಲ್ಯಾಣಿ, ವೀಶಾಲಾಕ್ಷಿ ಹಳಕಟ್ಟಿ, ಶಶಿಕಲಾ ಹಾದ್ರಿಹಳ್ಳಿ, ಕವಿತಾ ಕಂಪ್ಲಿ ಹಾಗೂ ಸಮಾಜದವರು ಇದ್ದರು. ಉಪನ್ಯಾಸಕ ರಾಕೇಶ ಶೆಟ್ಟರ, ಪತ್ರಕರ್ತ ಇಂದುಧರ ಹಳಕಟ್ಟಿ, ಉದ್ಯಮಿ ಮಲ್ಲಿಕಾರ್ಜುನ ಹಳಕಟ್ಟಿ ನಿರ್ವಹಿಸಿದರು.
ಸಮಾಜದಲ್ಲಿ ಹಿಂದುಳಿದವರಿಗೆ ಧ್ವನಿಯಾಗಲು ಸಂಘಟನೆ ಅವಶ್ಯ
ನಮ್ಮ ಸಮಾಜದಲ್ಲಿ ಆರ್ಥಿಕ, ಸಾಮಾಜಿಕ, ಶೈಕ್ಷಣಿಕವಾಗಿ ಹಿಂದುಳಿದವರಿಗೆ ಸಹಾಯ, ಸಹಕಾರ, ಪ್ರೋತ್ಸಾಹ ಮಾಡುವ ಮೂಲಕ ಅವರಿಗೆ ಧೈರ್ಯ ಮತ್ತು ಧ್ವನಿ ನೀಡಲು ಸಂಘಟನೆ ಅತಿ ಅವಶ್ಯವಾಗಿದೆ ಎಂದು ತಾಲೂಕು ಬಣಜಿಗ ಸಮಾಜದ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಬಾಬಣ್ಣ ಹಂಚಿನ ಹೇಳಿದರು.
Latest Videos
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.