ಕುಕನೂರು: ಸರ್ಕಾರದ ಸೌಲಭ್ಯ ಪಡೆಯಲು ಸಂಘಟನೆ ಅವಶ್ಯವಾಗಿದ್ದು, ಬಣಜಿಗ ಸಮಾಜ ಬಾಂಧವರು ಸಣ್ಣಪುಟ್ಟ ಭಿನ್ನಾಭಿಪ್ರಾಯ ಬದಿಗೊತ್ತಿ ಗ್ರಾಮ ಮಟ್ಟದಿಂದ ಸಮಾಜದ ಸಂಘಟನೆಗೆ ಒತ್ತು ನೀಡಬೇಕು ಎಂದು ಸಮಾಜದ ಯುವ ಮುಖಂಡ ಸಂಗಮೇಶ ಗುತ್ತಿ ಹೇಳಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಜರುಗಿದ ಬಣಜಿಗ ಸಮಾಜದ ಸಭೆಯಲ್ಲಿ ನಗರ ಘಟಕದ ನೂತನ ಪದಾಧಿಕಾರಿಗಳ ಆಯ್ಕೆ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಬಣಜಿಗ ಸಮಾಜದ ಶೈಕ್ಷಣಿಕ, ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ಬೆಳವಣಿಗೆ ಸಂಘಟನೆ ಶ್ರಮಿಸಬೇಕು. ಯುವಪೀಳಿಗೆಯಲ್ಲಿ ಸಂಘಟನಾತ್ಮಕ ಶಕ್ತಿ ವೃದ್ಧಿಸುವುದಕ್ಕೆ ನೂತನ ಪದಾಧಿಕಾರಿಗಳು ಮುತುವರ್ಜಿ ವಹಿಸಬೇಕು ಎಂದು ಹೇಳಿದರು.ನೂತನ ಅಧ್ಯಕ್ಷರಾಗಿ ಆಯ್ಕೆಯಾದ ರವಿ ನಾಲ್ವಾಡ ಮಾತನಾಡಿ, ಸಮಾಜ ನೀಡಿರುವ ಜವಾಬ್ದಾರಿ ಸಮರ್ಪಕವಾಗಿ ನಿಭಾಯಿಸುತ್ತೇನೆ, ಹಿರಿಯರ ಮಾರ್ಗದರ್ಶನ, ಯುವಕರ ಸಲಹೆಗಳೊಂದಿಗೆ ಸಮಾಜದಲ್ಲಿ ಬಣಜಿಗ ಸಮುದಾಯದ ಗೌರವ ಹೆಚ್ಚಿಸಲು ಪ್ರಯತ್ನ ನಡೆಸುತ್ತೇನೆ ಎಂದರು.
ಪದಾಧಿಕಾರಿಗಳ ಆಯ್ಕೆ: ಬಣಜಿಗ ಸಮಾಜ ಕ್ಷೇಮಾಭಿವೃದ್ಧಿ ಸಂಘದ ನಗರ ಘಟಕದ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ರವಿ ನಾಲ್ವಾಡ (ಅಧ್ಯಕ್ಷ), ನಂದೀಶಪ್ಪ ಗುತ್ತಿ (ಗೌರವಾಧ್ಯಕ್ಷ), ರವಿ ಗದಗ (ಉಪಾಧ್ಯಕ್ಷ), ಮಹಾಂತೇಶ ಜೋಳದ (ಪ್ರಧಾನ ಕಾರ್ಯದರ್ಶಿ), ವೀರೇಶ್ ವಾರದ ( ಸಂಘಟನಾ ಕಾರ್ಯದರ್ಶಿ), ವೀರೇಶ್ ಯಕ್ಲಾಸ್ಪುರ್ (ಖಜಾಂಚಿ). ಪದಾಧಕಾರಿಗಳಾಗಿ ಮಲ್ಲಪ್ಪ ಗುತ್ತಿ, ಬಸವರಾಜ ಮಂಡಲಗೇರಿ, ಈಶಪ್ಪ ನಾಲವಾಡ, ಮಹೇಶ ಯಾಕ್ಲಾಸಪುರ್, ಪಂಚಾಕ್ಷರಿ ಯಾಕ್ಲಾಸಪುರ, ಮಂಜುನಾಥ್ ಗದಗ್, ಸಿ.ಎಸ್.ಅಂಗಡಿ, ಮಹಾಂತೇಶ ಅಂಗಡಿ, ಎಫ್.ಜಿ.ಅಂಗಡಿ, ರಾಜು ಹುಲ್ಲೂರ, ಮಹೇಶ್ ಗುತ್ತಿ, ಪ್ರವೀಣ್ ಮಾನ್ ಶೆಟ್ಟರ, ಚನ್ನಪ್ಪ ವಾಲಿ, ಬಸವರಾಜ್ ಗದ್ದಿ, ಶಿವರಾಜ ಗುತ್ತಿ, ನಾಗರಾಜ್ ಶೆಟ್ಟರ್, ಮಂಜುನಾಥ್ ಮಟ್ಟಿ, ಸಿದ್ದು ಆಯ್ಕೆಯಾಗಿದ್ದಾರೆ.