ಸಾರಾಂಶ
ಉಪನ್ಯಾಸಕರು ನಿಸ್ವಾರ್ಥ ಸೇವೆ ಮಾಡಿದಾಗ ವಿದ್ಯಾರ್ಥಿಗಳ ಭವಿಷ್ಯ ರೂಪಿಸಬಹುದು
ಕನ್ನಡಪ್ರಭ ವಾರ್ತೆ ಸಿಂಧನೂರು
ಉಪನ್ಯಾಸಕರ ಸಮಸ್ಯೆಗಳ ಪರಿಹಾರ ಹಾಗೂ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಉಪನ್ಯಾಸಕರು ಒಗ್ಗೂಡಿ ಸಂಘಟಿತರಾಗುವುದು ಅಗತ್ಯವಾಗಿದೆ ಎಂದು ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರಾಚಾರ್ಯ ಡಾ.ಎಸ್.ಶಿವರಾಜ ಹೇಳಿದರು.ನಗರದ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ತಾಲೂಕು ಪದವಿ ಪೂರ್ವ ಕಾಲೇಜುಗಳು ಉಪನ್ಯಾಸಕರ ಸಂಘದಿಂದ ಹಮ್ಮಿಕೊಂಡಿದ್ದ ಶಿಕ್ಷಕರ ದಿನಾಚರಣೆ, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪುರಸ್ಕಾರ ಸಮಾರಂಭದಲ್ಲಿ ಮಾತನಾಡಿ, ಡಾ.ಸರ್ವೆಪಲ್ಲಿ ರಾಧಾಕೃಷ್ಣ ಅವರು ಒಬ್ಬ ಆದರ್ಶ ಶಿಕ್ಷಕರಾಗಿ ಕಾರ್ಯನಿರ್ವಹಿಸುವ ಜೊತೆಗೆ ರಾಷ್ಟಪತಿ ಹುದ್ದೆ ಅಲಂಕರಿಸಿ ಗೌರವ ಹೆಚ್ಚಿಸಿದ್ದಾರೆ. ಉಪನ್ಯಾಸಕರು ನಿಸ್ವಾರ್ಥ ಸೇವೆ ಮಾಡಿದಾಗ ವಿದ್ಯಾರ್ಥಿಗಳ ಭವಿಷ್ಯ ರೂಪಿಸಬಹುದು ಎಂದರು.
ಸಂಘದ ತಾಲೂಕು ಘಟಕದ ಅಧ್ಯಕ್ಷ ಶೇಖರಯ್ಯಸ್ವಾಮಿ ಗುಡದೂರು ಅಧ್ಯಕ್ಷತೆ ವಹಿಸಿದ್ದರು. ಪ್ರಧಾನ ಕಾರ್ಯದರ್ಶಿ ಬಸವರಾಜ ಯಲಬುರ್ಗಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಾಚಾರ್ಯರಾದ ಬಸಪ್ಪ, ಮುರಡಯ್ಯ, ಶಿವಶಂಕರಪ್ಪ, ಮಲ್ಲಪ್ಪ ಬೆಳಗುರ್ಕಿ, ಬಸಲಿಂಗಯ್ಯ, ಮಹಿಬೂಬ ಕೆ, ಉಪಸ್ಥಿತರಿದ್ದರು. ಶ್ರೀದೇವಿ ಪ್ರಾರ್ಥಿಸಿದರು. ಹುಡಸಪ್ಪ ಸ್ವಾಗತಿಸಿದರು. ದುರಗಪ್ಪ ವಂದಿಸಿದರು.