ಬಿಜೆಪಿ-ಜೆಡಿಎಸ್‌ ಸೋಲಿಸಲು ಸಂಘಟನೆಯ ಹೋರಾಟ: ಸಿಐಟಿಯು ಮುಖ್ಯಸ್ಥ ಗೊಲ್ಲರಹೊಸಹಳ್ಳಿ ಮಂಜುನಾಥ್

| Published : Apr 06 2024, 12:56 AM IST

ಬಿಜೆಪಿ-ಜೆಡಿಎಸ್‌ ಸೋಲಿಸಲು ಸಂಘಟನೆಯ ಹೋರಾಟ: ಸಿಐಟಿಯು ಮುಖ್ಯಸ್ಥ ಗೊಲ್ಲರಹೊಸಹಳ್ಳಿ ಮಂಜುನಾಥ್
Share this Article
  • FB
  • TW
  • Linkdin
  • Email

ಸಾರಾಂಶ

ದುಷ್ಟ ಬಿಜೆಪಿ ತೊಲಗಿಸಿ ಸ್ವಾರ್ಥ ಜೆಡಿಎಸ್ ಸೋಲಿಸಿ ಪ್ರಜಾಪ್ರಭುತ್ವ ಉಳಿಸಿ ಎಂದು ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ವಿವಿಧ ಕಾರ್ಯಕ್ರಮ ರೂಪಿಸಲಾಗುವುದು ಎಂದು ಸಿಐಟಿಯು ಮುಖ್ಯಸ್ಥ ಗೊಲ್ಲರಹೊಸಹಳ್ಳಿ ಮಂಜುನಾಥ್ ತಿಳಿಸಿದರು. ಚನ್ನರಾಯಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು.

ಬಿಜೆಪಿ-ಜೆಡಿಎಸ್‌ ಅಪವಿತ್ರ ಮೈತ್ರಿ

ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ

ದುಷ್ಟ ಬಿಜೆಪಿ ತೊಲಗಿಸಿ ಸ್ವಾರ್ಥ ಜೆಡಿಎಸ್ ಸೋಲಿಸಿ ಪ್ರಜಾಪ್ರಭುತ್ವ ಉಳಿಸಿ ಎಂದು ಹೋರಾಟಗಾರರ ಸಮಾನ ಮನಸ್ಕರ, ಪ್ರಗತಿಪರ ಸಂಘಟನೆಗಳ ಘೋಷಣೆಯಾಗಿ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ವಿವಿಧ ಕಾರ್ಯಕ್ರಮ ರೂಪಿಸಲಾಗುವುದು ಎಂದು ಸಿಐಟಿಯು ಮುಖ್ಯಸ್ಥ ಗೊಲ್ಲರಹೊಸಹಳ್ಳಿ ಮಂಜುನಾಥ್ ತಿಳಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿ, ‘ಬಿಜೆಪಿ ಜೆಡಿಎಸ್ ಅಪವಿತ್ರ ಮೈತ್ರಿಯಾಗಿದೆ. ಮಾಜಿ ಪ್ರಧಾನ ಮಂತ್ರಿ ಎಚ್.ಡಿ.ದೇವೇಗೌಡ ಹಿಂದೆ ಮೋದಿಯವರು ಪ್ರಧಾನ ಮಂತ್ರಿಯಾದರೆ ರಾಜಕೀಯ ನಿವೃತ್ತಿಯಾಗಿ ದೇಶ ಬಿಟ್ಟು ಹೋಗುತ್ತೇನೆ ಎಂದು ಹೇಳಿದ್ದರು. ನಾನು ಮುಂದೆ ಮುಸ್ಲಿಂ ಆಗಿ ಹುಟ್ಟಲು ಬಯಸುವೆ, ಕಾಂಗ್ರೆಸ್‌ನವರು ಸರಿಯಿಲ್ಲ ಬಿಜೆಪಿಯವರು ಮನುಸಂಸ್ಕೃತಿ ಪಾಲಿಸುತ್ತಿದ್ದಾರೆ ಎಂದು ವಿರೋಧಿಸಿದ್ದ ಎಚ್.ಡಿ.ದೇವೇಗೌಡ ನಮ್ಮದು ಜಾತ್ಯತೀತ ಜನತಾ ಪಕ್ಷ ಎಂದೆಲ್ಲಾ ಹೇಳಿ ಈಗ ಮೋದಿ ಹಾಗೂ ನಮ್ಮ ಸಂಬಂಧ ಅಣ್ಣತಮ್ಮಂದಿರು ಇದ್ದಂತೆ ಎಂದು ಹೇಳುತ್ತಿದ್ದಾರೆ’ ಎಂದು ವ್ಯಂಗ್ಯವಾಡಿದರು.

‘ಕಾಂಗ್ರೆಸ್ ಜತೆಗೂಡಿ ಪ್ರಧಾನಿ, ಮುಖ್ಯಮಂತ್ರಿ ಅಧಿಕಾರದ ಹುದ್ದೆಯನ್ನು ಅನುಭವಿಸಿ ಈಗ ಕಾಂಗ್ರೆಸ್ ಸರಿಯಲ್ಲ ಬಿಜೆಪಿ ಮಾತ್ರ ಸುಭದ್ರ ಎಂಬುದು ಎಷ್ಟರ ಮಟ್ಟಿಗೆ ಸರಿ. ನಿಮ್ಮ ಮಕ್ಕಳು ಮೊಕ್ಕಳನ್ನು ಉಳಿಸಲು ಬಿಜೆಪಿ ಜತೆ ಮೈತ್ರಿ ಮಾಡಿಕೊಂಡಿದ್ದಾರೆಯೇ ವಿನಹ ಪಕ್ಷದ ಕಾರ್ಯಕರ್ತರನ್ನು ಉಳಿಸಲು ಅಲ್ಲ. ತಾವು ತಮ್ಮ ಕುಟುಂಬದವರೆಲ್ಲ ಅಧಿಕಾರ ನಡೆಸಿದ್ದಾರೆ. ಈ ಬಾರಿ ಚುನಾವಣೆ ಮಹತ್ತರ ಚುನಾವಣೆಯಾಗಲಿದೆ. ನಮ್ಮ ತಂಡಗಳು ಜನ ಆಂದೋಲನ ಸಂದೇಶವಾಗಿ ಸ್ವಯಂ ಪ್ರೇರಿತ ಸ್ವಾಭಿಮಾನಿಗಳಾಗಿ ಜಿಲ್ಲಾದ್ಯಂತ ಜನರ ಹತ್ತಿರ ಹೋಗಲು ತೀರ್ಮಾನಿಸಿದೆ’ ಎಂದು ಹೇಳಿದರು.

ಜಿಲ್ಲಾ ಸಿಪಿಐನ ಮುಖಂಡ ಎಚ್.ಕೆ.ಸಂದೇಶ್, ಧರ್ಮೇಶ್, ಸಿಐಟಿಯುನ ಲೋಕೇಶ್, ಶ್ರೀನಿವಾಸ್, ಸತೀಶ್‌ಕುಮಾರ್ ಮಾತನಾಡಿದರು.

ದಲಿತ ಮುಖಂಡ ಗೋವಿಂದರಾಜ್‌ ದಿಂಡಗೂರು, ಬಾಗೂರು ನವಿಲೆ, ಹೋರಾಟಗಾರ ಎಚ್.ಸಿ.ಶಂಕರಲಿಂಗೇಗೌಡ, ಶಿವರಾಜ್‌ ಬಾಗೂರು, ಜಿಲ್ಲಾ ರೈತ ಸಂಘದ ಮುಖಂಡ ಮಾಳೇನಹಳ್ಳಿ ಹರೀಶ್, ಕುಮಾರ್‌ ಹೊಸೂರು, ಬೀದಿ ಬದಿ ವ್ಯಾಪರಸ್ಥರ ಸಂಘದ ಅಧ್ಯಕ್ಷ ಜಾವಿದ್ ಮತ್ತಿತರಿದ್ದರು.

ಸಿಐಟಿಯು ಮುಖ್ಯಸ್ಥ ಗೊಲ್ಲರಹೊಸಹಳ್ಳಿ ಮಂಜುನಾಥ್ ಚನ್ನರಾಯಪಟ್ಟಣದಲ್ಲಿ ಸಂಘಟನೆ ಸದಸ್ಯರ ಸಭೆ ನಡೆಸಿದರು.