ಸಾರಾಂಶ
ಮಹಿಳೆಯರು ತಮ್ಮಲ್ಲಿನ ಪ್ರತಿಭೆ ಪ್ರದರ್ಶಿಸಲು ಸೌಂದರ್ಯ ಸ್ಪರ್ಧೆಗಳು ವೇದಿಕೆಯಾಗಿವೆ ಎಂದು ಆಯೋಜಕಿ ಪ್ರತಿಭಾ ಸೌಂಶಿಮಠ ಅಭಿಪ್ರಾಯಪಟ್ಟರು.
ಕನ್ನಡಪ್ರಭ ವಾರ್ತೆ ಬೆಂಗಳೂರು
ಮಹಿಳೆಯರು ತಮ್ಮಲ್ಲಿನ ಪ್ರತಿಭೆ ಪ್ರದರ್ಶಿಸಲು ಸೌಂದರ್ಯ ಸ್ಪರ್ಧೆಗಳು ವೇದಿಕೆಯಾಗಿವೆ ಎಂದು ಆಯೋಜಕಿ ಪ್ರತಿಭಾ ಸೌಂಶಿಮಠ ಅಭಿಪ್ರಾಯಪಟ್ಟರು.ವಿದ್ಯಾರಣ್ಯಪುರದ ಹೋಟೆಲ್‌ವೊಂದರಲ್ಲಿ ಆಯೋಜಿಸಿದ್ದ ‘ಮಿಸ್ ಅಂಡ್ ಮಿಸೆಸ್ ಇಂಡಿಯಾ ಕರ್ನಾಟಕ’ 8ನೇ ಆವೃತ್ತಿಯ ಗ್ರ್ಯಾಂಡ್ ಫಿನಾಲೆಯಲ್ಲಿ ವಿಜೇತರಿಗೆ ಬಹುಮಾನ ವಿತರಿಸಿ ಅವರು ಮಾತನಾಡಿದರು.
ಮಿಸ್ ಅಂಡ್ ಮಿಸೆಸ್ ಇಂಡಿಯಾ ಕರ್ನಾಟಕ ಕಾರ್ಯಕ್ರಮವು ವೈವಿಧ್ಯತೆಯಲ್ಲಿ ಪ್ರತಿಭೆಯನ್ನು ಅರಸುವ ಸೌಂದರ್ಯ ಸ್ಪರ್ಧೆಯಾಗಿದೆ. ಹಲವು ವರ್ಷಗಳಿಂದ ಈ ಸ್ಪರ್ಧೆಯನ್ನು ಆಯೋಜಿಸಲಾಗುತ್ತಿದ್ದು, ಎಲ್ಲಾ ವಯೋಮಾನದ ಮಹಿಳೆಯರಿಗೆ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಇದೊಂದು ಉತ್ತಮ ಅವಕಾಶವಾಗಿದೆ ಎಂದು ತಿಳಿಸಿದರು.ಡಾ। ಅಕ್ಷತಾ ಅಶೋಕ್ ಕುಲಕರ್ಣಿ (ಮಿಸ್ ಇಂಡಿಯಾ ಇಂಡಿಪೆಂಡೆಂಟ್ ಇಂಟರ್ ನ್ಯಾಷನಲ್), ಡಾ। ನಿಶಿತಾ ಶೆಟ್ಟಿಯಾನ್ (ಮಿಸೆಸ್ ಇಂಡಿಯಾ ಇಂಡಿಪೆಂಡೆಂಟ್ ಇಂಟರ್ ನ್ಯಾಷನಲ್), ಡಾ। ಶ್ರುತಿ ಬಲ್ಲಾಳ್ (ಮಿಸೆಸ್ ಇಂಡಿಯಾ ಅರ್ಥ್ ಇಂಟರ್ ನ್ಯಾಷನಲ್) ಮತ್ತು ಪ್ರಗತಿ ಅನೂನ್ ಅವರು ಕ್ಲಾಸಿಕ್ ಮಿಸೆಸ್ ಇಂಡಿಯಾ ಅರ್ಥ್ ಇಂಟರ್‌ನ್ಯಾಷನಲ್ ಕಿರೀಟಕ್ಕೆ ಭಾಜನರಾದರು. ಬಿಗ್‌ಬಾಸ್ ಮಾಜಿ ಸ್ಪರ್ಧಿ ಅವಿನಾಶ್, ಜಯಂತಿ ಬಲ್ಲಾಳ್, ಕರ್ನಲ್ ಡಾ। ಎಂ.ಸಿ.ಶರ್ಮಾ ತೀರ್ಪುಗಾರರಾಗಿ ಆಗಮಿಸಿದ್ದರು.