ನಾತ್ಸುಮೆ ಸೋಸೆಕಿ ಅವರ ''ಕೊಕೊರೊ'' ಅನುವಾದಿತ ಕೃತಿ ''ಹೃದಯ''

| Published : Sep 13 2024, 01:33 AM IST

ನಾತ್ಸುಮೆ ಸೋಸೆಕಿ ಅವರ ''ಕೊಕೊರೊ'' ಅನುವಾದಿತ ಕೃತಿ ''ಹೃದಯ''
Share this Article
  • FB
  • TW
  • Linkdin
  • Email

ಸಾರಾಂಶ

ಈ ಕಾದಂಬರಿಯು ಸೆನ್ಸೈ ಮತ್ತು ನಾನು, ಅಪ್ಪ- ಅಮ್ಮ ಮತ್ತು ನಾನು, ಸೈನ್ಸೈ ಮತ್ತು ಅವರ ಕೊನೆಯ ಪತ್ರ ಎಂಬ ಮೂರು ಭಾಗಗಳಲ್ಲಿದೆ

ಕನ್ನಡಪ್ರಭ ವಾರ್ತೆ ಮೈಸೂರು

ಜಪಾನಿನಿ ನಾತ್ಸುಮೆ ಸೋಸೆಕಿ ಅವರ ''ಕೊಕೊರೊ'''' ಕಾದಂಬರಿಯನ್ನು ಜಿ. ವಿಜಯನಾಗ್‌ ಅವರು ''''''''ಹೃದಯ'''''''' ಹೆಸರಿನಲ್ಲಿ ಕನ್ನಡಕ್ಕೆ ಅನುವಾದಿಸಿದ್ದಾರೆ. ಇದನ್ನು ಎಡ್ವಿನ್‌ ಮೆಕಲೆನ್‌ ಅವರು ಆಂಗ್ಲ ಭಾಷೆಗೆ ಅನುವಾದಿಸಿದ್ದಾರೆ.

ಮೂಲತಃ ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆಯವರಾದ ವಿಜಯನಾಗ್‌ ಪ್ರಸ್ತುತ ಮಡಿಕೇರಿಯ ಜಿಲ್ಲಾ ಗ್ರಂಥಾಲಯದಲ್ಲಿ ಸಹ ಗ್ರಂಥಪಾಲಕರಾಗಿದ್ದಾರೆ. ಅನುವಾದ ಸಾಹಿತ್ಯದಲ್ಲಿ ಕೃಷಿ ಮಾಡುತ್ತಿದ್ದಾರೆ. ಈವರೆಗೆ ಹತ್ತು ಕೃತಿಗಳನ್ನು ಪ್ರಕಟಿಸಿದ್ದಾರೆ. ಎಲ್ಲವೂ ಅನುವಾದಿತ ಕೃತಿಗಳೇ.

ಈ ಕಾದಂಬರಿಯು ಸೆನ್ಸೈ ಮತ್ತು ನಾನು, ಅಪ್ಪ- ಅಮ್ಮ ಮತ್ತು ನಾನು, ಸೈನ್ಸೈ ಮತ್ತು ಅವರ ಕೊನೆಯ ಪತ್ರ ಎಂಬ ಮೂರು ಭಾಗಗಳಲ್ಲಿದೆ. ಎರಡು ತಲೆಮಾರುಗಳ ವೈರುಧ್ಯ, ಒಂದು ಕಾಲದಿಂದ ಮತ್ತೊಂದು ಕಾಲಕ್ಕ ಆಗುತ್ತಿರುವ ಸಾಮಾಜಿಕ ಬಿನ್ನತೆ, ಬೇರೆ ಬೇರೆ ಕಾಲಘಟ್ಟದಲ್ಲಿಯೂ ಒಂದು ಪ್ರದೇಶದ ಜನಸಾಮಾನ್ಯರ ಆಲೋಚನೆಗಳಲ್ಲಿರುವ ಸಾಮ್ಯತೆಯನ್ನು ಅನಾವರಣ ಮಾಡುತ್ತದೆ. ವಿಶ್ವವಿದ್ಯಾನಿಲಯದ ವಿದ್ಯಾರ್ಥಿಯೊಬ್ಬ ಸೆನ್ಸೈ ಎಂಬ ಹಿರಿಯರನ್ನು ಪರಿಚಯಿಸಿಕೊಂಡು ಅವರ ಬದುಕನ್ನು ತೆರೆದಿಡುವುದು ಕಾದಂಬರಿಯ ಹಂದರ. ಆ ಹಿರಿಯ ವ್ಯಕ್ತಿಯು ತನ್ನ ಚಿಕ್ಕಪ್ಪನಿಂದಲೇ ಮೋಸ ಹೋಗಿರುತ್ತಾರೆ.

ಕಥಾ ನಿರೂಪಕನಾದ ವಿದ್ಯಾರ್ಥಿ ಹಾಗೂ ಹಿರಿಯ ವ್ಯಕ್ತಿಯ ಕಥೆ ಜಪಾನಿನಲ್ಲಿ ಆಯಾ ಕಾಲದ ಘನತೆ, ದೌರ್ಬಲ್ಯವನ್ನು ತೆರೆದಿಡುತ್ತದೆ. ನಿರೂಪಣೆಕಾರನ ತಾಯಿ, ಹಿರಿಯ ವ್ಯಕ್ತಿಯ ಪತ್ನಿ ಮತ್ತು ಅತ್ತೆ ಪಾತ್ರಗಳು ಇಲ್ಲಿ ಬರುತ್ತವೆ. ಜೊತೆಗೆ ಜಪಾನಿನ ಚಕ್ರವರ್ತಿ ಮೆಇಜಿ ಅವರ ಅನಾರೋಗ್ಯ ಮತ್ತು ಸಾವು ಮೊದಲಾದ ಘಟನೆಗಳು ಅಲ್ಲಿನ ಜನಜೀವನದ ಚಿತ್ರಣವನ್ನು ತಿಳಿಸುತ್ತವೆ. ಮೆಇಜಿ ಕಾಲದ ದುರಂತವನ್ನು ಪರಿಚಯ ಮಾಡಿಕೊಡುತ್ತದೆ. ಆಶಾವಾದದಲ್ಲಿ ಆರಂಭವಾಗಿ, ಶೋಕದಲ್ಲಿ ಅಂತ್ಯವಾಗುತ್ತದೆ. ಪರಸ್ವರ ವೈರುಧ್ಯಗಳನ್ನು ಒಪ್ಪಿಕೊಳ್ಳುವಂತೆ ಕಾದಂಬರಿಯನ್ನು ಹೆಣೆಯಲಾಗಿದೆ. ಮನುಷ್ಯನ ಅಂತರಾತ್ಮದ ಭ್ರಷ್ಚತೆ ಬಗ್ಗೆ ಆಧ್ಯಾತ್ಮಿಕ ಅನ್ವೇಷಣೆ ಮಾಡುತ್ತದೆ.

ಕಾದಂಬರಿಯನ್ನು ಅರ್ಥ ಮಾಡಿಕೊಳ್ಳಲು ಅನುಕೂಲವಾಗುವಂತೆ ಕೊನೆಯಲ್ಲಿ ಪರಿಭಾಶೆಗಳ ಅರ್ಥ ವಿವರಿಸಲಾಗಿದೆ. ಸೃಷ್ಟಿ ಪಬ್ಲಿಕೇಷನ್ಸ್‌ ಈ ಕೃತಿಯನ್ನು ಪ್ರಕಟಿಸಿದ್ದು, ಶ್ರೀದೇವಿ ಕೆರೆಮನೆ ಅವರು ಮುನ್ನುಡಿ ಬರೆದಿದ್ದಾರೆ. ಆಸಕ್ತರು ಪ್ರಕಾಶಕ ನಾಗೇಶ್‌, ಮೊ. 98450 96668

ಅನುವಾದಕ ಜಿ. ವಿಜಯ್‌ ನಾಗ್‌ ಮೊ.94805 59969 ಅವರನ್ನು ಸಂಪರ್ಕಿಸಬಹುದು.