ಮನೆ ಗಣತಿದಾರರಿಗೆ ತರಬೇತಿ ಕಾರ್ಯಕ್ರಮ
ಕನ್ನಡಪ್ರಭ ವಾರ್ತೆ , ತರೀಕೆರೆಜನಗಣತಿಯಂತಹ ಮಹತ್ವದ ಕಾರ್ಯಕ್ಕೆ ನಮ್ಮ ಸಹಕಾರ ಇರಲಿದೆ ಎಂದು ಉಪವಿಭಾಗಾಧಿಕಾರಿ ಎನ್.ವಿ.ನಟೇಶ್ ಹೇಳಿದ್ದಾರೆ.ಶನಿವಾರ ಪಟ್ಟಣದ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜು (ಪ್ರೌಢಶಾಲಾ ವಿಭಾಗ) ನಲ್ಲಿ ರಾಷ್ಟ್ರೀಯ ಜನಗಣತಿ ಅಂಗವಾಗಿ ನಡೆದ ಮೊದಲನೆ ಹಂತದ ಮನೆ ಗಣತಿದಾರರ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ತರಬೇತಿಯಲ್ಲಿ ಮಾರ್ಗದರ್ಶನ ಗಣನೆಗೆ ತೆಗೆದುಕೊಳ್ಳಬೇಕು. ಭಾರತ ಮತ್ತು ರಾಜ್ಯ ಸರ್ಕಾರದ ಸೂಚನೆ ಇದೆ. ನಿಗಧಿತ ಸಮಯದಲ್ಲಿ ಗಣತಿ ಪೂರೈಸಬೇಕು. ಈ ಜನಗಣತಿ ದೇಶದ ದೀರ್ಘಕಾಲಿನ ಯೋಜನೆ ರೂಪಿಸಲು, ಶೈಕ್ಷಣಿಕ ಸಾಮಾಜಿಕ ಮತ್ತು ಆರ್ಥಿಕ ಅಭಿವೃದ್ಧಿ ಪಡಿಸಲು ಪೂರಕವಾಗಿದೆ. ನೈಜ ಮಾಹಿತಿ ಸಂಗ್ರಹಿಸುವುದು ನಮ್ಮ ಅದ್ಯ ಕರ್ತವ್ಯ ಎಂದು ತಿಳಿಸಿದರು.
ತಹಸೀಲ್ದಾರ್ ರಶ್ಮಿ ಮಾತನಾಡಿ ಜನಗಣತಿ ಕಾರ್ಯ ದೇಶದ ಭವಿಷ್ಯ ನಿರ್ಧಾರ ಮಾಡುವ ಕಾರ್ಯವಾಗಿದೆ. ನಾವೆಲ್ಲರೂ ಅದರ ಭಾಗವಾಗಿ ಕರ್ತವ್ಯ ನಿರ್ವಹಿಸೋಣ ಎಂದು ತಿಳಿಸಿದರು.ಸಂಪನ್ಮೂಲ ವ್ಯಕ್ತಿ ಚೇತನ್ ಗೌಡ ಎಂ.ಎಸ್. ಮಾತನಾಡಿ ದೇಶದ ಜನಗಣತಿಯ ವಿವಿಧ ಹಂತದ ಚಟುವಟಿಕೆಪರಿಚಯಿಸಿದರು.ಕಾರ್ಯಕ್ರಮದಲ್ಲಿ ಜನಗಣತಿ 2027ರ ಮಾರ್ಗದರ್ಶಿ ಕೈಪಿಡಿ ಬಿಡುಗಡೆ ನೆರವೇರಿಸಲಾಯಿತು.ಸಂಪನ್ಮೂಲ ವ್ಯಕ್ತಿಗಳಾಗಿ ಶೇಖರಪ್ಪ, ವಿರೂಪಾಕ್ಷಪ್ಪ, ಪ್ರಭಾಕರ್ ಭಾಗವಹಿಸಿದ್ದರು. ಕ್ಷೇತ್ರ ಶಿಕ್ಷಣಾಧಿಕಾರಿ ಪರುಶುರಾಮಪ್ಪ, ಸರ್ಕಾರಿ ನೌಕರರ ಸಂಘದ ಕಾರ್ಯಧ್ಯಕ್ಷ ಎಂ.ಬಿ.ರಾಮಚಂದ್ರಪ್ಪ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಧರಣೇಶ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಉಪಾಧ್ಯಕ್ಷ ಕುಮಾರಸ್ವಾಮಿ, ಶಿರಸ್ತೆದಾರ್ ನಟರಾಜ್, ಮಂಜುನಾಥ್ ಭಾಗವಹಿಸಿದ್ದರು.4ಕೆಟಿಆರ್.ಕೆ.8ಃ
ತರೀಕೆರೆಯಲ್ಲಿ ನಡೆದ ಮನೆ ಗಣತಿದಾರರಿಗೆ ತರಬೇತಿ ಕಾರ್ಯಕ್ರಮವನ್ನು ಉಪವಿಭಾಗಾಧಿಕಾರಿ ಎನ್.ವಿ.ನಟೇಶ್ ಉದ್ಘಾಟಸಿದರು. ತಹಸೀಲ್ದಾರ್ ರಶ್ಮಿ ಮತ್ತಿತರರು ಇದ್ದರು.