ಸಾರಾಂಶ
ಕನ್ನಡಪ್ರಭ ವಾರ್ತೆ ಸಿಂದಗಿ
ನಮ್ಮ ಸಾಂಸ್ಕೃತಿಕ ದೇಶದಲ್ಲಿ ಹಬ್ಬಗಳ ಆಚರಣೆಗೆ ಅದರದ್ದೇ ಆದ ವಿಶೇಷ ಹಿನ್ನಲೆಗಳನ್ನು ಹೊಂದಿವೆ. ನಮ್ಮ ಭಾರತೀಯ ಸಂಸ್ಕೃತಿ ಜಗತ್ತಿಗೆ ಮಾದರಿಯಾಗಿದೆ ಎಂದು ಸಾರಂಗಮಠದ ಉತ್ತರಾಧಿಕಾರಿಗಳಾದ ಡಾ.ವಿಶ್ವ ಪ್ರಭುದೇವ ಶಿವಾಚಾರ್ಯರು ಹೇಳಿದರು.ಪಟ್ಟಣದ ಜ್ಞಾನಭಾರತಿ ವಿದ್ಯಾ ಮಂದಿರದಲ್ಲಿ ರಕ್ಷಾ ಬಂಧನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ರಕ್ಷಾ ಬಂಧನ ಉತ್ಸಾಹ, ಸಂಪ್ರದಾಯ ಮತ್ತು ನಂಬಿಕೆಯೊಂದಿಗೆ ಬೆಸೆದಿರುವ ಹಬ್ಬವಾಗಿದೆ ಎಂದರು.ಎಚ್.ಜಿ.ಕಾಲೇಜಿನ ಪ್ರಾಚಾರ್ಯ ಎ.ಆರ್.ಹೆಗ್ಗನದೊಡ್ಡಿ ಮಾತನಾಡಿ, ಭಾರತೀಯರು ಜಗತ್ತಿನಲ್ಲೇ ವಿಶಿಷ್ಟವಾದ ಹೃದಯವಂತಿಕೆ ಮೆರೆಯುತ್ತಿದ್ದಾರೆ. ಭಾರತದ ಸಂಸ್ಕೃತಿ ಆಚಾರ ವಿಚಾರಗಳು ವಿದೇಶಿಯರು ಅನುಸರಿಸುತ್ತಿದ್ದಾರೆ. ಆದರೆ ನಮ್ಮ ಸಂಸ್ಕೃತಿಗಳನ್ನು ನಾವು ಮರೆಯುತ್ತಿರುವುದು ವಿಷಾದನೀಯ ಎಂದರು.ಈ ವೇಳೆ ತಹಸೀಲ್ದಾರ್ ಕರೆಪ್ಪ ಬೆಳ್ಳಿ, ಪಿಎಸ್ಐ ಆರೀಫ್ ಮುಷಾಪುರಿ ಮಾತನಾಡಿ, ರಕ್ತ ಸಂಬಂಧಕ್ಕೂ ಮೀರಿದ ಈ ರಕ್ಷಾ ಬಂಧನ ಅತ್ಯಂತ ವೈಶಿಷ್ಟತೆಯನ್ನು ಒಳಗೊಂಡಿದೆ ಎಂದು ಶ್ಲಾಘಿಸಿದರು. ಪುರಸಭೆ ಉಪಾಧ್ಯಕ್ಷ ಸಂದೀಪ್ ಚೌರ್, ರವಿ ಪೂಜಾರಿ, ಮಲ್ಲಿಕಾರ್ಜುನ ಕೋಬಾಳ, ಸತೀಶ ಹಿರೇಮಠ, ಕುಮಾರ ಮಠ, ಚೇತನ ಲೋಣಿ, ಡಾ.ಪ್ರಕಾಶ ರಾಗರಂಜಿನಿ, ಜಗದೀಶ ಪಾಟೀಲ, ಬಿ.ಸಿ.ಸಿರೋಳಕರ, ಪ್ರೇಮಾ ನಾಯ್ಕ, ಮಾಳು ಪೂಜಾರಿ, ಬುಳ್ಳಪ್ಪ.ಡಿ ಸೇರಿದಂತೆ ಇತರರು ಇದ್ದರು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿನಿಯರು ವಿದ್ಯಾರ್ಥಿಗಳಿಗೆ ರಾಖಿ ಕಟ್ಟುವ ಮೂಲಕ ಸಿಹಿ ಹಂಚುವ ಮೂಲಕ ಸಹೋದರತ್ವ ಬಾಂಧವ್ಯವನ್ನು ಮೆರೆದರು.