ಸಾರಾಂಶ
ದಲಿತ ಸಂಘರ್ಷ ಸಮಿತಿ ಸಂಯೋಜಕ ಜಿಲ್ಲಾ ಸಮಿತಿಯನ್ನು ರಾಜ್ಯದಲ್ಲಿ ಮಾದರಿ ಸಂಘಟನೆ ಮಾಡುವುದು ನಮ್ಮೆಲ್ಲರ ಆಶಯವಾಗಿದೆ ಎಂದು ಸಮಿತಿ ಜಿಲ್ಲಾ ಸಂಯೋಜಕ ಕೆ.ಎಂ. ನಾಗರಾಜು ಹೇಳಿದರು. ಚಾಮರಾಜನಗರದಲ್ಲಿ ದಲಿತ ಸಮಿತಿಯ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.
ಕನ್ನಡಪ್ರಭ ವಾರ್ತೆ ಚಾಮರಾಜನಗರ
ದಲಿತ ಸಂಘರ್ಷ ಸಮಿತಿ ಸಂಯೋಜಕ ಜಿಲ್ಲಾ ಸಮಿತಿಯನ್ನು ರಾಜ್ಯದಲ್ಲಿ ಮಾದರಿ ಸಂಘಟನೆ ಮಾಡುವುದು ನಮ್ಮೆಲ್ಲರ ಆಶಯವಾಗಿದೆ ಎಂದು ಸಮಿತಿ ಜಿಲ್ಲಾ ಸಂಯೋಜಕ ಕೆ.ಎಂ. ನಾಗರಾಜು ಹೇಳಿದರು.ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಮಿತಿ ಹಾಗೂ ತಾಲೂಕು ಸಮಿತಿಗಳ ಪುನಾರಚನೆ, ಬಲವರ್ಧನೆಗಾಗಿ ನಡೆದ ಪೂರ್ವಭಾವಿ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಸಂಘಟನೆಯು ಬಾಬಾ ಸಾಹೇಬ್ ಡಾ.ಅಂಬೇಡ್ಕರ್ ಅವರ ತತ್ವ, ಸಿದ್ಧಾಂತದಡಿಯಲ್ಲಿ ಕೆಲಸ ಮಾಡುತ್ತಿದೆ. ಜಿಲ್ಲೆಯ ಸಮಸ್ಯೆಗಳು, ದಲಿತ ಸಮುದಾಯ ಸಮಸ್ಯೆಗಳು, ದೌರ್ಜನ್ಯಗಳ ವಿರುದ್ಧ ಧ್ವನಿ ಎತ್ತುವ ಕೆಲಸ ಮಾಡುತ್ತಿದ್ದು ಜಿಲ್ಲಾ ಸಮಿತಿಯು ಇಡೀ ರಾಜ್ಯದಲ್ಲಿ ಮಾದರಿ ಸಂಘಟನೆ ಮಾಡಲು. ಶ್ರಮಿಸಲಾಗುತ್ತಿದೆ. ಸಂಘಟನೆಯ ಪದಾಧಿಕಾರಿಗಳು ಸಮುದಾಯ ಹಾಗೂ ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸಿ ಕೆಲಸ ಮಾಡಬೇಕಿದೆ ಎಂದರು.
ಪೂರ್ವಭಾವಿ ಸಭೆಯಲ್ಲಿ ಜಿಲ್ಲಾ ಸಮಿತಿ ಹಾಗೂ ಜಿಲ್ಲೆಯ 5 ತಾಲೂಕು. ಸಮಿತಿಗಳ ಪುನಾರಚನೆ, ಬಲವರ್ಧನೆಗೆ ಸರ್ವಾನುಮತದಿಂದ ತೀರ್ಮಾನಿಸಲಾಗಿದೆ ಎಂದರು. ಸಭೆಯಲ್ಲಿ ದಲಿತ ಸಂಘರ್ಷ ಸಮಿತಿಯ ಮುಖಂಡರಾದ ಬಂಗಾರಸ್ವಾಮಿ, ಹೊನ್ನೂರು ಕೃಷ್ಣಮೂರ್ತಿ, ಮರಿಯಾಲದಹುಂಡಿ ಕುಮಾರ್, ಕೃಷ್ಣರಾಜು ಬಿಸಲವಾಡಿ, ರವಿಚಂದ್ರ ಪ್ರಸಾದ್, ಆರ್. ಮಹದೇವಯ್ಯ, ಯಳಂದೂರು ಕೆಂಪರಾಜು, ರಘು, ಲೋಕೇಶ್, ಮಹೇಶ್ ಬದನಗುಪ್ಪೆ, ಹನೂರು ಮಂಟೇಸ್ವಾಮಿ, ಛತ್ರ ಕೃಷ್ಣಮೂರ್ತಿ, ಸೋಮಣ್ಣ, ನಾಗರಾಜು, ಮಹದೇವಯ್ಯ, ನಾಗಶೇಖರ್, ಬಸವರಾಜು, ಮಹದೇವಸ್ವಾಮಿ, ಕುದೇರು ಬಸವರಾಜು, ಬಸ್ತಿಪುರ ಶಂಕರ್, ರಾಮಾಪುರ ಗುರುದೇವು ಎಲ್. ಮಹದೇವ, ಕುಮಾರ್ ಭಾಗವಹಿಸಿದ್ದರು.18ಸಿಎಚ್ಎನ14ಚಾಮರಾಜನಗರದ ಡಾ.ಅಂಬೇಡ್ಕರ್ ಭವನದಲ್ಲಿ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಮಿತಿ ಹಾಗೂ ತಾಲೂಕು ಸಮಿತಿಗಳ ಪುನಾರಚನೆ ನಡೆಯಿತು.