ಸಾರಾಂಶ
ಕರ್ನಾಟಕ ತನ್ನದೇಯಾದ ಶ್ರೀಮಂತ ಪರಂಪರೆ, ಸಂಸ್ಕೃತಿ, ಇತಿಹಾಸ ಹೊಂದಿರುವ ಪಾವನ ಭೂಮಿ. ಕಲೆ, ಸಾಹಿತ್ಯಕ್ಕೆ ತವರೂರಿದು. ಕನ್ನಡ ಬರೀ ಭಾಷೆಯಲ್ಲ, ಅದು ನಮ್ಮ ಉಸಿರು ಎಂದು ತಹಸೀಲ್ದಾರ ಬಸಲಿಂಗಪ್ಪ ನೈಕೋಡಿ ಹೇಳಿದರು.
ಕನ್ನಡಪ್ರಭ ವಾರ್ತೆ ಹುಣಸಗಿ
ಕರ್ನಾಟಕ ತನ್ನದೇಯಾದ ಶ್ರೀಮಂತ ಪರಂಪರೆ, ಸಂಸ್ಕೃತಿ, ಇತಿಹಾಸ ಹೊಂದಿರುವ ಪಾವನ ಭೂಮಿ. ಕಲೆ, ಸಾಹಿತ್ಯಕ್ಕೆ ತವರೂರಿದು. ಕನ್ನಡ ಬರೀ ಭಾಷೆಯಲ್ಲ, ಅದು ನಮ್ಮ ಉಸಿರು ಎಂದು ತಹಸೀಲ್ದಾರ ಬಸಲಿಂಗಪ್ಪ ನೈಕೋಡಿ ಹೇಳಿದರು.ಶುಕ್ರವಾರ, ಪಟ್ಟಣದ ಬಾಲಕಿಯರ ಪ್ರೌಢಶಾಲಾ ಆವರಣದಲ್ಲಿ ನಡೆದ 69 ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೇರವೆರಿಸಿ ಮಾತನಾಡಿದ ಅವರು, ನವೆಂಬರ್ 1 ಕನ್ನಡಿಗರ ಪಾಲಿನ ಅತ್ಯಂತ ಸಂಭ್ರಮ, ಸಡಗರದ ಕ್ಷಣ. ಇದು ಕರ್ನಾಟಕ ರಾಜ್ಯ ರಚನೆಯ ಐತಿಹಾಸಿಕ ದಿನವಾಗಿದೆ ಇದೇ ಕಾರಣದಿಂದ ನವೆಂಬರ್‌ನಲ್ಲಿ ಎಲ್ಲೆಲ್ಲೂ ಕನ್ನಡದ ಕಂಪು ಅನುರಣಿಸುತ್ತಿರುತ್ತದೆ ಎಂದು ಹೇಳಿದರು.ವಿಶೇಷ ಉಪನ್ಯಾಸಕ ಕೋರಿ ಸಂಗಯ್ಯ ಗಡ್ಡಡ ಮಾತನಾಡಿ, ಈ ಮಣ್ಣಿಗೊಂದು, ಈ ನುಡಿಗೊಂದು ಸೊಗಸಿದೆ, ಸೌಂದರ್ಯವಿದೆ, ಬೆಡಗಿದೆ, ಆದ್ದರಿಂದ ಪ್ರಾದೇಶಿಕ ಸಂಸ್ಕೃತಿಯನ್ನು ಎತ್ತಿಹಿಡಿಯುವ ಕಾರ್ಯವನ್ನು ನಾವು ಮಾಡಬೇಕಿದೆ ಇಂದು ಹೆಮ್ಮೆಯಿಂದ ಆಚರಿಸುತ್ತಿರುವ ಕನ್ನಡ ರಾಜ್ಯೋತ್ಸವದ ಹಿಂದೆ ನಾಡಿನ ಏಕೀಕರಣಕ್ಕಾಗಿ ಶ್ರಮಿಸಿದ ಮಹನೀಯರ ಹೋರಾಟವಿದೆ. ಸಹಸ್ರಾರು ಜನ ಕನ್ನಡಿಗರು ಆಡಳಿತಾತ್ಮಕ ಹಾಗೂ ಭಾವನಾತ್ಮಕ ಐಕ್ಯತೆಗಾಗಿ ಹಗಲಿರುಳು ದುಡಿದಿದ್ದಾರೆ. ಆ ಮಹಾನ್ ಚೇತನಗಳನ್ನೆಲ್ಲಾ ಇಂದು ಕೃತಜ್ಞತೆಯಿಂದ ಸ್ಮರಿಸಬೇಕು.ಕನ್ನಡ ಭಾಷೆಯನ್ನು ಉಳಿಸಿ ಹಾಗೂ ಬೆಳೆಸಿಕೊಂಡು ಹೋಗುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದು ಹೇಳಿದರು. ಕಸಾಪ ಅಧ್ಯಕ್ಷ ವೆಂಕಟಗಿರಿ ದೇಶಪಾಂಡೆ ಮಾತನಾಡಿದರು. ಇದಕ್ಕೂ ಮುಂಚೆ ತಾಯಿ ನಾಡದೇವತೆ ಭುವನೇಶ್ವರಿ ಭಾವಚಿತ್ರವನ್ನು ತಾಲೂಕು ಆಡಳಿತ ಹಾಗೂ ವಿವಿಧ ಕನ್ನಡಪರ ಸಂಘಟನೆಗಳು ಹಾಗೂ ಶಾಲಾ ಕಾಲೇಜು ವಿದ್ಯಾರ್ಥಿಗಳಿಂದ ಪ್ರಮುಖ ಬೀದಿಯಲ್ಲಿ ಬೃಹತ್ ಮೆರವಣಿಗೆ ಮಾಡಲಾಯಿತು.ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚಂದ್ರಶೇಖರ ದಂಡಿನ್, ಪಟ್ಟಣ ಪಂಚಾಯತ್ ಅಧ್ಯಕ್ಷ ತಿಪ್ಪಣ್ಣ ನಾಯಕ, ಉಪಾಧ್ಯಕ್ಷ ಶಾಂತಣ್ಣ ಮಲಗಲದಿನ್ನಿ, ಮಹಾದೇವಿ ಬೇನಾಳಮಠ, ಸಿಪಿಐ ಸಚಿನ್ ಚಲುವಾದಿ, ಉಪ ಖಜಾನೆ ಅಧಿಕಾರಿ ಶಿವಶರಣಪ್ಪ ಸೇರಿದಂತೆ ಇನ್ನಿತರರು ಇದ್ದರು. ಅಕ್ಕಮಹಾದೇವಿ ದೇಶಮುಖ ನಿರೂಪಿಸಿ, ವೆಂಕಟೇಶ ದಾಸರ್ ಸ್ವಾಗತಿಸಿ, ನಾಗನಗೌಡ ವಂದಿಸಿದರು.)
;Resize=(128,128))
;Resize=(128,128))
;Resize=(128,128))
;Resize=(128,128))