ನಮ್ಮ ಮಣ್ಣಿನ ಮಗ ರಾಷ್ಟ್ರೀಯ ಅಧ್ಯಕ್ಷ ಹೆಮ್ಮೆ ಸಂಗತಿ: ಮಾಜಿ ಸಚಿವ ರಾಜಶೇಖರ ಪಾಟೀಲ್

| Published : Feb 21 2024, 02:03 AM IST

ನಮ್ಮ ಮಣ್ಣಿನ ಮಗ ರಾಷ್ಟ್ರೀಯ ಅಧ್ಯಕ್ಷ ಹೆಮ್ಮೆ ಸಂಗತಿ: ಮಾಜಿ ಸಚಿವ ರಾಜಶೇಖರ ಪಾಟೀಲ್
Share this Article
  • FB
  • TW
  • Linkdin
  • Email

ಸಾರಾಂಶ

ಮಲ್ಲಿಕಾರ್ಜುನ ಖರ್ಗೆ ಕಲ್ಯಾಣ ಕರ್ನಾಟಕಕ್ಕೆ ಅಲ್ಲ ಇಡಿ ದೇಶಕ್ಕೆ ಅವರ ಕೊಡುಗೆ ಇದೆ. ಕಲ್ಯಾಣ ಕರ್ನಾಟಕ ಭಾಗಕ್ಕೆ ಘೋಷಣೆ ಮಾಡಿದ್ದು ಎಲ್ಲವು ಇಡೇರಿವೆ

ಬೀದರ್:

ಬ್ಲಾಕ್ ಕಮಿಟಿ ಅಧ್ಯಕ್ಷ ಸ್ಥಾನದಿಂದ ಎಐಸಿಸಿ ರಾಷ್ಟ್ರೀಯ ಅದ್ಯಕ್ಷ ಸ್ಥಾನಕ್ಕೆರಿದ ನಮ್ಮ ಮಣ್ಣಿನ ಮಗ ಎಂಬುದು ಹೆಮ್ಮೆಯ ಸಂಗತಿಯಾಗಿದೆ ಎಂದು ಮಾಜಿ ಸಚಿವ ರಾಜಶೇಖರ ಪಾಟೀಲ್ ನುಡಿದರು.

ಮಲ್ಲಿಕಾರ್ಜುನ ಖರ್ಗೆ ಕಲ್ಯಾಣ ಕರ್ನಾಟಕಕ್ಕೆ ಅಲ್ಲ ಇಡಿ ದೇಶಕ್ಕೆ ಅವರ ಕೊಡುಗೆ ಇದೆ. ಕಲ್ಯಾಣ ಕರ್ನಾಟಕ ಭಾಗಕ್ಕೆ ಘೋಷಣೆ ಮಾಡಿದ್ದು ಎಲ್ಲವು ಇಡೇರಿವೆ. 371(ಜೆ) ಜಾರಿಗೆ ತರುವಲ್ಲಿ ಖರ್ಗೆ ಶ್ರಮ ಬಹಳಷ್ಟಿದೆ. ಖರ್ಗೆ ಅವರ ಛತ್ರ ಛಾಯೆಯಲ್ಲಿಯೇ ನಾನು ಸಚಿವನಾಗಿದ್ದೆ. ನಂತರ ಕೆಕೆಆರ್ಡಿಬಿ ಅದ್ಯಕ್ಷನಾಗಿ ಕೂಡ ಕೆಲಸ ಮಾಡಿದ್ದೇನೆ. ಜನರ ಮಧ್ಯದಲ್ಲಿ ನಾವು ಹೇಗೆ ಹೋಗಬೇಕು ಎಂಬುದರ ಬಗ್ಗೆ ನಮಗೆ ತೋರಿಸಿಟ್ಟಿದ್ದಾರೆ. ಸೋಲು ಗೆಲವು ಇದ್ದೆ ಇರುತ್ತದೆ ಮುಂಬರುವ ಲೋಕಸಭೆ ಚುನಾವಣೆ ಖರ್ಗೆ ಅವರ ನೇತೃತ್ವದಲ್ಲಿ ನಡೆಯಲಿದ್ದು ಯಾರೆ ಅಭ್ಯರ್ಥಿಯಾಗಲಿ ಗೆಲವಿಗೆ ಎಲ್ಲರು ಕೂಡಿ ಪ್ರಯತ್ನಿಸೋಣ ಎಂದರು. ಬೀದರ್‌ನ ಕೆಂಪು ಮಣ್ಣಿನ ಶಕ್ತಿ ಎನೆಂಬುದನ್ನು ದೇಶಕ್ಕೆ ತೋರಿಸುವ ಕಾರ್ಯ ಖರ್ಗೆ ಮಾಡಿದ್ದಾರೆ. ಅವರು ಇನ್ನು ನೂರು ವರ್ಷ ಬಾಳಲಿ ಎಂದರು.

ಪೌರಾಡಳಿತ ಸಚಿವ ರಹೀಂ ಖಾನ್ ಮಾತನಾಡಿ, ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಬೀದರ್‌ನಿಂದ ಕಾಂಗ್ರೆಸ್‌ನ ಸಂಸದ ಮಾಡಲು ಎಲ್ಲರು ಕೂಡಿ ಪ್ರಯತ್ನಿಸೋಣ ಎಂದರು.