ಮೂಲ್ಕಿ : ಕಿನ್ನಿಗೋಳಿ ಪಟ್ಟಣ ಪಂಚಾಯತ್ ಸ್ವಚ್ಚತೆಗೆ ಮಹತ್ವ ನೀಡುತ್ತಿದ್ದು, ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ಪ್ಲಾಸ್ಟಿಕ್ ನಿಷೇಧ ಮಾಡಿದ್ದು, ಸ್ವಚ್ಚತೆ ಮೂಲಕ ರಾಷ್ಟ್ರವ್ಯಾಪ್ತಿ ಗಮನ ಸೆಳೆಯಲೆಂದು ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಹೇಳಿದರು.

ಮೂಲ್ಕಿ : ಕಿನ್ನಿಗೋಳಿ ಪಟ್ಟಣ ಪಂಚಾಯತ್ ಸ್ವಚ್ಚತೆಗೆ ಮಹತ್ವ ನೀಡುತ್ತಿದ್ದು, ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ಪ್ಲಾಸ್ಟಿಕ್ ನಿಷೇಧ ಮಾಡಿದ್ದು, ಸ್ವಚ್ಚತೆ ಮೂಲಕ ರಾಷ್ಟ್ರವ್ಯಾಪ್ತಿ ಗಮನ ಸೆಳೆಯಲೆಂದು ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಹೇಳಿದರು.

ಕಿನ್ನಿಗೋಳಿ ಪಟ್ಟಣ ಪಂಚಾಯತ್ ಮತ್ತು ವಿವಿಧ ಸಂಘ ಸಂಸ್ಥೆಗಳ ಸಹಕಾರದಲ್ಲಿ ಕಿನ್ನಿಗೋಳಿಯಿಂದ ಕಟೀಲು ದೇವಳದವರೆಗೆ ನಡೆದ ನಮ್ಮ ನಡಿಗೆ, ಸ್ವಚ್ಚತೆ ಕಡೆಗೆ ಕಾಲ್ನಡಿಗೆ ಜಾಥ ಕಾರ್ಯಕ್ರಮಕ್ಕೆ ಚಾಲನೆ ನೀಡಿ‌ ಮಾತನಾಡಿದರು.

ಕರ್ನಾಟಕ ಪರಿಸರ ಪ್ರವಾಸೋದ್ಯಮ‌ ಅಭಿವೃದ್ದಿ‌ ಮಂಡಳಿಯ ಅಧ್ಯಕ್ಷೆ ಶಾಲೆಟ್ ಪಿಂಟೋ ಮಾತನಾಡಿ ನಮ್ಮ ಪರಿಸರವನ್ನು ಸ್ವಚ್ಚವಾಗಿಡುವುದು ನಮ್ಮ ಜವಾಬ್ದಾರಿಯೆಂದು ಹೇಳಿದರು. ಕಿನ್ನಿಗೋಳಿ ವಸಂತ ಮಂಟಪದಿಂದ ಕಟೀಲು ದೇವಳದವರೆಗೆ ಜಾಥ ನಡೆದು‌ ನಂತರ ಕಟೀಲು ದೇವಳದ ರಥಬೀದಿಯಲ್ಲಿ ಸಮಾರೋಪಗೊಂಡಿತು.

ಸಮಾರೋಪ ಸಮಾರಂಭದಲ್ಲಿ ಕಟೀಲು ಕ್ಷೇತ್ರದ ಅರ್ಚಕರಾದ ಅನಂತಪದ್ಮನಾಭ ಆಸ್ರಣ್ಣ ಮತ್ತು ಶ್ರಿ ಹರಿನಾರಾಯಣ ದಾಸ ಆಸ್ರಣ್ಣ ಭಾಗವಹಿಸಿದ್ದು ,ಸುಮಾರು 45 ಸಂಘ ಸಂಸ್ಥೆಗಳ 500 ಸದಸ್ಯರು ಜಾಥಾದಲ್ಲಿ ಭಾಗವಹಿಸಿದರು. ಕಿನ್ನಿಗೋಳಿ ಪಟ್ಟಣ ಪಂಚಾಯತ್ ಅಧ್ಯಕ್ಷ ಗುರುರಾಜ್ ಮಲ್ಲಿಗೆಯಂಗಡಿ ಮಾತನಾಡಿ ಕಿನ್ನಿಗೋಳಿ ಪಟ್ಟಣ ಪಂಚಾಯತ್‌ ವ್ಯಾಪ್ತಿಯಲ್ಲಿ ಸ್ವಚ್ಚತೆಯ ಬಗ್ಗೆ ಗಮನಹರಿಸುತ್ತಿದ್ದು, ಪ್ಲಾಸ್ಟಿಕ್ ನಿಷೇಧ ಮಾಡಿದ್ದು ಹಂತ ಹಂತವಾಗಿ ಸಂಪೂರ್ಣ ನಿಷೇಧ ಮಾಡುತ್ತಿದ್ದೇವೆ, ತ್ಯಾಜ್ಯ ವಿಂಗಡನೆಗಾಗಿ ಎಂ.ಆರ್.ಎಫ್ ಘಟಕ ಕಾರ್ಯಾರಂಭವಾಗುತ್ತಿದೆಯೆಂದು ಹೇಳಿದರು.

ಕಿನ್ನಿಗೋಳಿ ಪಟ್ಟಣ ಪಂಚಾಯತ್ ಉಪಾಧ್ಯಕ್ಷೆ ಪದ್ಮಲತಾ ರಾವ್, ಮುಖ್ಯಾಧಿಕಾರಿ ಜಯಶಂಕರ ಪ್ರಸಾದ್, ಸಾಹಸ್ ಎನ್.ಜಿ.ಒ ನ ಪೀಲ್ಡ್ ಸುಪರ್ ವೈಸರ್ ರವೀಂದ್ರ ಡಿ.ಎಸ್, ಕೆ ಭುವನಾಭಿರಾಮ ಉಡುಪ,ಉದ್ಯಮಿ ಧನಂಜಯ ರೈ ಎಕ್ಕಾರು, ಟರ್ಕಿಯ ಇಸ್ತಾಂಬುಲ್ ನಲ್ಲಿ. ನಡೆದ ಏಷ್ಯನ್ ಬೆಂಚ್ ಪ್ರೆಸ್ ಪವರ್ ಲಿಫ್ಟಿಂಗ್ ನಲ್ಲಿ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಿ ಚಿನ್ನದ ಪದಕ ಪಡೆದ ಜಯಲಕ್ಷೀ ಆಚಾರ್ಯ, ಬೆಳ್ಳಿ ಪದಕ ಪಡೆದ ಸಾತ್ವಿ ಪಿ ಸಾಲಿಯಾನ್ ,ಕಿನ್ನಿಗೋಳಿ ಪಟ್ಟಣ ಪಂಚಾಯತ್ ಸದಸ್ಯರು ಇದ್ದರು.