1872 ಪ್ರಕರಣಗಳಲ್ಲಿ 805 ಪ್ರಕರಣಗಳು ರಾಜಿ-ಸಂಧಾನದ ಇತ್ಯರ್ಥ

| N/A | Published : Mar 09 2025, 01:52 AM IST / Updated: Mar 09 2025, 08:14 AM IST

ಸಾರಾಂಶ

ಸವದತ್ತಿ ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ ಸಹಯೋಗದೊಂದಿಗೆ ಶನಿವಾರ ಸವದತ್ತಿಯ ಎಲ್ಲ ನ್ಯಾಯಾಲಯಗಳಲ್ಲಿ ರಾಷ್ಟ್ರೀಯ ಲೋಕ್‍ ಅದಾಲತ್‍ ಹವ್ಮಿುಕೊಳ್ಳಲಾಗಿತ್ತು.

 ಬೆಳಗಾವಿ : ಸವದತ್ತಿ ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ ಸಹಯೋಗದೊಂದಿಗೆ ಶನಿವಾರ ಸವದತ್ತಿಯ ಎಲ್ಲ ನ್ಯಾಯಾಲಯಗಳಲ್ಲಿ ರಾಷ್ಟ್ರೀಯ ಲೋಕ್‍ ಅದಾಲತ್‍ ಹವ್ಮಿುಕೊಳ್ಳಲಾಗಿತ್ತು. ವಿಶೇಷವಾಗಿ ಈ ಬಾರಿ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಥೀಮ್‍ ಸಾಂಗ್‍ ಆಡಿಯೋ/ವಿಡಿಯೋ ಪ್ಲೇ ಮಾಡುವ ಮೂಲಕ ರಾಷ್ಟ್ರೀಯ ಲೋಕ್‍ ಅದಾಲತ್‍ನ್ನು ಪ್ರಾರಂಭಿಸಲಾಯಿತು.

ರಾಷ್ಟ್ರೀಯ ಲೋಕ್‍ ಅದಾಲತ್‍ನಲ್ಲಿ ಸವದತ್ತಿಯ ಎಲ್ಲ ನ್ಯಾಯಾಲಯಗಳಲ್ಲಿನ 8610 ಬಾಕಿವಿರುವ ಪ್ರಕರಣಗಳ ಪೈಕಿ ಒಟ್ಟು 1872 ಪ್ರಕರಣಗಳನ್ನು ಕೈಗೆತ್ತಿಕೊಳ್ಳಲಾಗಿತ್ತು. ಅದರಲ್ಲಿ 805 ಪ್ರಕರಣಗಳನ್ನು ರಾಜಿ-ಸಂಧಾನದ ಮೂಲಕ ಇತ್ಯರ್ಥಪಡಿಸಲಾಗಿದೆ. ಅದೇ ರೀತಿ ಒಟ್ಟು ₹1,50,48,887 ಕ್ಕೂ ಹೆಚ್ಚು ಹಣ ವಸೂಲಾತಿಯಾಗಿದೆ ಎಂದು ಪ್ರಧಾನ ಹಿರಿಯ ಶ್ರೇಣಿ ದಿವಾಣಿ ನ್ಯಾಯಾಧೀಶರಾದ ಶಶಿಧರ ಎಂ.ಗೌಡ ತಿಳಿಸಿದರು. 

ಪತಿ-ಪತ್ನಿ ಮನಸ್ತಾಪದ ಪರಿಣಾಮ ದಾಂಪತ್ಯ ಜೀವನದಿಂದ ಸುಮಾರು ವರ್ಷಗಳಿಂದ ಬೇರೆ ಬೇರೆಯಾಗಿ ನ್ಯಾಯಾಲಯಕ್ಕೆ ಅಲೆದಾಡುತ್ತಿದ್ದ ಸುಮಾರು 6 ಜೋಡಿ ಪತಿ-ಪತ್ನಿಯರನ್ನು ಮನಮೊಲಿಸಿ ಪುನಃ ಒಗ್ಗೂಡಿಲಾಯಿತು. ಎರಡೂ ಕಡೆಯ ಪಕ್ಷಗಾರರು, ವಕೀಲರು ಹಾಗೂ ಊರಿನ ಹಿರಿಯರು ಸಂತಸ ವ್ಯಕ್ತಪಡಿಸಿದರು. 

ರಾಷ್ಟ್ರೀಯ ಲೋಕ್‍ ಅದಾಲತನಲ್ಲಿ ಹೆಚ್ಚುವರಿ ದಿವಾಣಿ ನ್ಯಾಯಾಧೀಶರಾದ ಸಿದ್ರಾಮ ರೆಡ್ಡಿ, ನ್ಯಾಯವಾದಿಗಳ ಸಂಘದ ಅಧ್ಯಕ್ಷ ಜೆ.ಬಿ,ಮುನವಳ್ಳಿ, ಕಾರ್ಯದರ್ಶಿಗಳಾದ ಎಸ್.ಎಸ್.ಕಾಳಪ್ಪನವರ ಸಹಾಯಕ ಸರ್ಕಾರಿ ಅಭಿಯೋಜಕರಾದ ಎ.ಎ.ನೇಸರಿಕರ, ಎಸ್.ಎಸ್.ಅಂಗಡಿ, ವಕೀಲ ಸಂಧಾನಕಾರರಾದ ಎ.ಎ.ಪಠಾಣ, ಎಸ್.ಎಂ.ಪೆಂಡಾರಿ ಹಾಗೂ ನ್ಯಾಯವಾದಿಗಳಾದ ಎಂ,ಎಂ.ಯಲಿಗಾರ, ಎಂ.ಬಿ.ದ್ಯಾಮನಗೌಡರ, ಎಂ.ಎನ್.ಮುತ್ತಿನ, ಎಂ.ಎಸ್.ಕುರಿ, ಎಂ.ಕೆ.ಹೊಸಮಠ, ಸಿ.ಬಿ.ದುಂಡಿ, ಎ.ಎಂ.ಭಾಗೋಜಿಕೊಪ್ಫ, ಸಿ.ಎಸ್.ಮುತ್ತಗಿ, ಎಸ್.ಎಸ್.ಮಾನೆ, ಬಿ.ಕೆ.ಕಡಕೋಳ, ಎಂ.ಎಫ್.ಬಾಡಿಗೇರ, ಟಿ.ಎಂ.ಸೂರ್ಯವಂಶಿ, ಎಂ.ಎಸ್.ಪಂಚಿನವರ, ಎಂ.ಎಸ್,ಹತ್ತಿ, ಎಸ್.ಎಸ್.ದೇವನಗಾಂವಿ ಮುಂತಾದವರು ಉಪಸ್ಥಿತರಿದ್ದರು.