ಕಾರಿನ ಸೈಲೆನ್ಸರ್‌ ಮಾರ್ಪಾಡು ಮಾಡಿ ಬೆಂಕಿ ಉಗುಳುವಂತೆ ಮಾಡಿದ್ದ ಕಾರಿನ ಮಾಲೀಕನಿಗೆ ಆರ್‌.ಟಿ.ಒ ಅಧಿಕಾರಿಗಳು ಹಾಗೂ ಹೆಣ್ಣೂರು ಸಂಚಾರ ಪೊಲೀಸರು ಬರೋಬ್ಬರಿ 1.11 ಲಕ್ಷ ರು. ದಂಡ ವಿಧಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಕಾರಿನ ಸೈಲೆನ್ಸರ್‌ ಮಾರ್ಪಾಡು ಮಾಡಿ ಬೆಂಕಿ ಉಗುಳುವಂತೆ ಮಾಡಿದ್ದ ಕಾರಿನ ಮಾಲೀಕನಿಗೆ ಆರ್‌.ಟಿ.ಒ ಅಧಿಕಾರಿಗಳು ಹಾಗೂ ಹೆಣ್ಣೂರು ಸಂಚಾರ ಪೊಲೀಸರು ಬರೋಬ್ಬರಿ 1.11 ಲಕ್ಷ ರು. ದಂಡ ವಿಧಿಸಿದ್ದಾರೆ.ಇಲ್ಲಿ ಗಮನ ಸೆಳೆಯುವ ವಿಷಯ ಏನೆಂದರೆ ಕಾರಿನ ಬೆಲೆ 70 ಸಾವಿರದ್ದಾಗಿದ್ದು, ಆದರೆ ನಿಯಮ ಉಲ್ಲಂಘಿಸಿದಕ್ಕಾಗಿ 1.11 ಲಕ್ಷ ದಂಡವನ್ನು ಮಾಲೀಕನಿಂದ ಆರ್‌ಟಿಒ ಅಧಿಕಾರಿಗಳು ಮತ್ತು ಪೊಲೀಸರು ವಸೂಲಿ ಮಾಡಿದ್ದಾರೆ.

ಸೈಲೆನ್ಸರ್‌ ಮಾರ್ಪಾಡು ಮಾಡಿದ್ದ ಕೆಎಲ್‌-07ಎಬಿ8764 ಕಾರಿನಲ್ಲಿ ಬೆಂಕಿ ಉಗುಳುತ್ತಿತ್ತು. ಇದರ ವಿಡಿಯೋವನ್ನು ಕೆಲವರು ತಮ್ಮ ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದರು. ಆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿತ್ತು. ಕಾರಿನ ನೋಂದಣಿ ಸಂಖ್ಯೆ ಆಧರಿಸಿ ಪೊಲೀಸರು ಕೇರಳ ಮೂಲದ ಮಾಲೀಕನನ್ನು ಪತ್ತೆ ಹಚ್ಚಿ 1,11,500 ರು. ದಂಡ ಹಾಕಿದ್ದಾರೆ.