ಪಿ.ಬಿ. ಶ್ರೀನಿವಾಸ್ ಗೀತೆಗಳು ಎಂದೆಂದಿಗೂ ಅಮರ : ಡಾ. ರಮೇಶ್‌

| Published : Oct 05 2024, 01:30 AM IST

ಪಿ.ಬಿ. ಶ್ರೀನಿವಾಸ್ ಗೀತೆಗಳು ಎಂದೆಂದಿಗೂ ಅಮರ : ಡಾ. ರಮೇಶ್‌
Share this Article
  • FB
  • TW
  • Linkdin
  • Email

ಸಾರಾಂಶ

ಚಿಕ್ಕಮಗಳೂರು, ಗಾಯಕ ಡಾ.ಪಿ.ಬಿ. ಶ್ರೀನಿವಾಸ್ ಸಿರಿ ಕಂಠದಲ್ಲಿ ಮೂಡಿ ಬಂದಿರುವ ಕನ್ನಡ ಗೀತೆಗಳೂ ಎಂದೆಂದಿಗೂ ಅಮರ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಾ. ಸಿ. ರಮೇಶ್ ಹೇಳಿದರು.

ಮಾಧುರ್ಯ ನಿಧಿಯ ಮಧುರ ಗಾನ ಗೀತಗಾಯನ ಕಾರ್ಯಕ್ರಮ

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ಗಾಯಕ ಡಾ.ಪಿ.ಬಿ. ಶ್ರೀನಿವಾಸ್ ಸಿರಿ ಕಂಠದಲ್ಲಿ ಮೂಡಿ ಬಂದಿರುವ ಕನ್ನಡ ಗೀತೆಗಳೂ ಎಂದೆಂದಿಗೂ ಅಮರ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಾ. ಸಿ. ರಮೇಶ್ ಹೇಳಿದರು.ಮನೋರಂಜನಿ ಸಂಗೀತ ಮಹಾವಿದ್ಯಾಲಯದಿಂದ ನಗರದ ಬಸವನಹಳ್ಳಿ ಮುಖ್ಯ ರಸ್ತೆಯ ಚಂದ್ರಶೇಖರ ಭಾರತಿ ಸಭಾಂಗಣದಲ್ಲಿ ಗಾಯಕ ಡಾ. ಪಿ.ಬಿ.ಶ್ರೀನಿವಾಸ್ ರವರ 95ನೇ ವರ್ಷದ ಹುಟ್ಟುಹಬ್ಬದ ನೆನಪಿನಲ್ಲಿ ಹಮ್ಮಿಕೊಂಡಿದ್ದ ಮಾಧುರ್ಯ ನಿಧಿಯ ಮಧುರ ಗಾನ ಗೀತಗಾಯನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಪಿಬಿ ಶ್ರೀನಿವಾಸ್ ರವರ ಹೆಸರನ್ನು ಚಿರಸ್ಥಾಯಿಯಾಗಿಸಲು ಮನೋರಂಜನಿ ಸಂಗೀತ ಸಭಾ ಪ್ರತಿ ವರ್ಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿರುವುದು ಶ್ಲಾಘನೀಯ ಎಂದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಶಾಸ್ತ್ರೀಯ, ಜಾನಪದ, ಕಲಾಪ್ರಕಾರಗಳ ಸಂಘಟಿತ, ಅಸಂಘಟಿತ ಕಲಾವಿದರನ್ನು ಉತ್ತೇಜಿಸಲು ಹಲವು ಕಾರ್ಯಕ್ರಮಗಳನ್ನು ರೂಪಿಸಿದ್ದು, ಯೋಜನೆಗಳ ಸದುಪಯೋಗ ಪಡಿಸಿಕೊಳ್ಳುವಂತೆ ಕೋರಿದರು.

ಮನೋರಂಜನಿ ಸಂಗೀತ ಸಭಾದ ಸ್ಥಾಪಕ ಬಿ.ಸಿ. ಜಯರಾಮ್ ಮಾತನಾಡಿ, ಡಾ.ಪಿ.ಬಿ. ಶ್ರೀವಾಸ್ ದೇಶ ಕಂಡ ಅಪ್ರತಿಮ ಗಾಯಕರಾಗಿದ್ದು, ಅವರು ಬರೀ ಸಂಗೀತಗಾರರಷ್ಟೆ ಅಲ್ಲದೆ ಸಂಸ್ಕೃತವೂ ಸೇರಿದಂತೆ ಎಂಟು ಭಾಷೆಗಳಲ್ಲಿ ಪಾಂಡಿತ್ಯ ಹೊಂದಿದ್ದರು. ಅವರು ಅತ್ಯುತ್ತಮ ವಾಗ್ಗೇಯ ಕಾರರು ಆಗಿದ್ದರೂ ಎಂದು ಹೇಳಿದರು.ಕಾರ್ಯಕ್ರಮದಲ್ಲಿ ವಿದ್ಯಾಲಯದ ಪ್ರಾಂಶುಪಾಲೆ ಅಪರ್ಣ ಜಯರಾಮ್ ಹಾಜರಿದ್ದರು. ಗಾಯಕರಾದ ಸುರೇಂದ್ರ ನಾಯಕ್, ಅರ್ಚನಾ, ಶಾಲಿನಿ, ಶೃತಿ ಅವರು ಪಿ.ಬಿ. ಶ್ರೀನಿವಾಸ್ ಹಾಡಿರುವ ಗೀತೆಗಳನ್ನು ಹಾಡುವ ಮೂಲಕ ಶೋತೃಗಳನ್ನು ರಂಜಿಸಿದರು. 2 ಕೆಸಿಕೆಎಂ 3ಚಿಕ್ಕಮಗಳೂರಿನ ಚಂದ್ರಶೇಖರ ಭಾರತಿ ಸಭಾಂಗಣದಲ್ಲಿ ಗಾಯಕ ಡಾ. ಪಿ.ಬಿ.ಶ್ರೀನಿವಾಸ್ ಹುಟ್ಟುಹಬ್ಬದ ಹಿನ್ನಲೆಯಲ್ಲಿ ಹಮ್ಮಿಕೊಂಡಿದ್ದ ಮಾಧುರ್ಯ ನಿಧಿಯ ಮಧುರ ಗಾನ ಗೀತ ಗಾಯನ ಕಾರ್ಯಕ್ರಮವನ್ನು ಡಾ. ರಮೇಶ್‌ ಉದ್ಘಾಟಿಸಿ ಮಾತನಾಡಿದರು.