ಚಿಕ್ಕಮಗಳೂರುಸಮಾಜಸೇವೆ ಹಾಗೂ ಸಾರ್ವಜನಿಕ ಬದುಕಿನಲ್ಲಿ ಸಲ್ಲಿಸಿರುವ ಸೇವೆಯನ್ನು ಪರಿಗಣಿಸಿ ನರಸಿಂಹರಾಜಪುರದ ಹಿರಿಯ ಸಮಾಜಸೇವಕ ಹಾಗೂ ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷ ಪಿ.ಜೆ. ಅಂಟೋನಿ ಅವರನ್ನು ಅಮ್ಮ ಫೌಂಡೇಶನ್‌ನ ಪ್ರಧಾನ ಸಂಚಾಲಕರಾಗಿ ನೇಮಕ ಮಾಡಲಾಗಿದೆ ಎಂದು ಅಮ್ಮ ಫೌಂಡೇಶನ್ ಅಧ್ಯಕ್ಷ ಸುಧಾಕರ್ ಎಸ್. ಶೆಟ್ಟಿ ತಿಳಿಸಿದರು.

ಅಮ್ಮ ಫೌಂಡೇಶನ್ ಅಧ್ಯಕ್ಷ ಸುಧಾಕರ್ ಎಸ್. ಶೆಟ್ಟಿ ಮಾಹಿತಿ । ಪೂರ್ಣಾವಧಿ ಕಾರ್ಯಕರ್ತರ ಸಮ್ಮೇಳನ

ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು

ಸಮಾಜಸೇವೆ ಹಾಗೂ ಸಾರ್ವಜನಿಕ ಬದುಕಿನಲ್ಲಿ ಸಲ್ಲಿಸಿರುವ ಸೇವೆಯನ್ನು ಪರಿಗಣಿಸಿ ನರಸಿಂಹರಾಜಪುರದ ಹಿರಿಯ ಸಮಾಜಸೇವಕ ಹಾಗೂ ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷ ಪಿ.ಜೆ. ಅಂಟೋನಿ ಅವರನ್ನು ಅಮ್ಮ ಫೌಂಡೇಶನ್‌ನ ಪ್ರಧಾನ ಸಂಚಾಲಕರಾಗಿ ನೇಮಕ ಮಾಡಲಾಗಿದೆ ಎಂದು ಅಮ್ಮ ಫೌಂಡೇಶನ್ ಅಧ್ಯಕ್ಷ ಸುಧಾಕರ್ ಎಸ್. ಶೆಟ್ಟಿ ತಿಳಿಸಿದರು.

ಕೊಪ್ಪದಲ್ಲಿ ನಡೆದ ಅಮ್ಮ ಫೌಂಡೇಶನ್ ಪೂರ್ಣಾವಧಿ ಕಾರ್ಯಕರ್ತರ ಸಮ್ಮೇಳನದಲ್ಲಿ ಪಿ.ಜೆ. ಅಂಟೋನಿ ಅವರು ಪ್ರಧಾನ ಸಂಚಾಲಕರಾಗಿ ಅಧಿಕಾರ ಸ್ವೀಕರಿಸಿದರು.

ಈ ವೇಳೆ ಮಾತನಾಡಿ ಸುಧಾಕರ್ ಎಸ್. ಶೆಟ್ಟಿ, ಫೌಂಡೇಶನ್ ರಾಜಕೀಯದ ಆಚೆಗೆ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸೇವೆ ತಲುಪಿಸುವ ಉದ್ದೇಶದಿಂದ ಕಾರ್ಯನಿರ್ವಹಿಸುತ್ತಿದ್ದು, ಅಂಟೋನಿ ಅವರ ಸಾರ್ವಜನಿಕ ಅನುಭವ, ಸಮಾಜಸೇವೆಯ ಮನೋಭಾವ ಮತ್ತು ಜನಸಂಪರ್ಕ ದಿಂದ ಫೌಂಡೇಶನ್ ಚಟುವಟಿಕೆಗಳಿಗೆ ಮತ್ತಷ್ಟು ಬಲ ಸಿಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಶೃಂಗೇರಿ ಕ್ಷೇತ್ರ ಸೇರಿದಂತೆ ಮಲೆನಾಡು ಭಾಗದಲ್ಲಿ ಸಮಾಜಮುಖಿ ಕಾರ್ಯಕ್ರಮ ಪರಿಣಾಮಕಾರಿಯಾಗಿ ಮುನ್ನಡೆಸಲು ಕರೆ ನೀಡಿದರು.

ಅಧಿಕಾರ ಸ್ವೀಕರಿಸಿ ಮಾತನಾಡಿ ಪಿ.ಜೆ. ಅಂಟೋನಿ, ಕಾಯ, ವಾಚ, ಮನಸಾ ಅಮ್ಮ ಫೌಂಡೇಶನ್‌ನ ಉದ್ದೇಶಗಳನ್ನು ಸಾಕಾರಗೊಳಿಸಲು ಸಂಪೂರ್ಣ ಸಮರ್ಪಣೆಯಿಂದ ಕೆಲಸ ಮಾಡುತ್ತೇನೆ. ಸಮಾಜಸೇವೆಯೇ ನನ್ನ ಜೀವನದ ಧ್ಯೇಯ. ಫೌಂಡೇಶನ್ ಕೈಗೊಂಡ ಸಮಾಜಮುಖಿ ಕಾರ್ಯಕ್ರಮಗಳಿಂದ ಪ್ರೇರಿತನಾಗಿದ್ದು, ಜನಸೇವೆ ಇನ್ನಷ್ಟು ವಿಸ್ತರಿಸಲು ನನ್ನ ಸಂಪೂರ್ಣ ಸಹಕಾರ ನೀಡುತ್ತೇನೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಫೌಂಡೇಶನ್ ಯೋಜನಾಧಿಕಾರಿ ಡಾ. ವೆಂಕಪ್ಪ ಆಚಾರ್, ಕಾರ್ಯನಿರ್ವಾಹಕ ಅಧಿಕಾರಿ ಗುರುಪ್ರಸಾದ್ ಹಾಗೂ ಮಲ್ಲೇಶ್ ಹೆಗಡೆ, ಕ್ಷೇತ್ರ ಮತ್ತು ಹೋಬಳಿ ಸಂಚಾಲಕರಾದ ಚಂದ್ರಶೇಖರ್, ಸುಧಾ ಪೈ ಹಾಗೂ ಮಂಜುಳ ಸಂದೇಶ್ ಉಪಸ್ಥಿತರಿದ್ದರು.