ಜಿ.ವಿ.ಪೈ ಸ್ಮಾರಕ ಆಸ್ಪತ್ರೆಯಲ್ಲಿ ಪಿ.ಎಸ್.ಭಟ್ ಬ್ಲಾಕ್ ಉದ್ಘಾಟನೆ

| Published : Jul 16 2025, 12:45 AM IST

ಸಾರಾಂಶ

ಮೂಡುಬಿದಿರೆ ಜಿ.ವಿ.ಪೈಆಸ್ಪತ್ರೆಯಲ್ಲಿ ನೂತನ ಪಿ.ಎಸ್.ಭಟ್ ಬ್ಲಾಕ್, ನವೀಕೃತ ತುರ್ತುಚಿಕಿತ್ಸಾ ವಿಭಾಗ, ನವಜಾತ ಶಿಶುಗಳ ತೀವ್ರ ನಿಗಾ ವಿಭಾಗದ ಉದ್ಘಾಟನೆ, ನವೀಕೃತ ತುರ್ತುಚಿಕಿತ್ಸಾ ವಿಭಾಗ ಉದ್ಘಾಟನೆ ಸಮಾರಂಭ ಇತ್ತೀಚೆಗೆ ನೆರವೇರಿತು.

ಕನ್ನಡಪ್ರಭ ವಾರ್ತೆ ಮೂಡುಬಿದಿರೆ

ಗ್ರಾಮೀಣ ಆರೋಗ್ಯ ಸೇವೆ ಸವಾಲಿನ ಕ್ಷೇತ್ರವಾಗಿದೆ. ಇಲ್ಲಿ ಮಿತ ದರದಲ್ಲಿ ಗುಣಮಟ್ಟದ ಸೇವೆ ನೀಡುವುದು ನಿಜಾರ್ಥದ ಸೇವೆಯಾಗುತ್ತದೆ ಎಂದು ಪುಣೆಯ ಸೊಶಿಯಲ್ ಸೇವಾ ಇನಿಶಿಯೇಟಿವ್‌ನ ಪ್ರಕಾಶ್ ಪೈ ಹೇಳಿದ್ದಾರೆ.ಗುರುವಾರ ಜಿ.ವಿ.ಪೈಆಸ್ಪತ್ರೆಯಲ್ಲಿ ನೂತನ ಪಿ.ಎಸ್.ಭಟ್ ಬ್ಲಾಕ್, ನವೀಕೃತ ತುರ್ತುಚಿಕಿತ್ಸಾ ವಿಭಾಗ, ನವಜಾತ ಶಿಶುಗಳ ತೀವ್ರ ನಿಗಾ ವಿಭಾಗದ ಉದ್ಘಾಟನಾ ಸಮಾರಂಭದಲ್ಲಿ, ನವೀಕೃತ ತುರ್ತುಚಿಕಿತ್ಸಾ ವಿಭಾಗವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಟ್ರಸ್ಟಿ ಡಾ. ಮುರಳೀ ಕೃಷ್ಣ ಆಸ್ಪತ್ರೆಯ ಅಭಿವೃದ್ಧಿ ಕಾರ್ಯಗಳನ್ನು ವಿವರಿಸಿ, ಮಿತದರದಲ್ಲಿ ಗುಣಮಟ್ಟದ ಸೇವೆಗೆ ಆದ್ಯತೆ ನೀಡುತ್ತಿರುವ ಆಸ್ಪತ್ರೆ ಮುಂದೆ ಎನ್.ಎ.ಬಿ.ಎಚ್. ಮಾನ್ಯತೆ ಹಾಗೂ ಮೇಲ್ದರ್ಜೆಯ ಶಸ್ತ್ರಚಿಕಿತ್ಸಾ ವಿಭಾಗದ ಕನಸು ಹೊಂದಿದೆ ಎಂದರು. ನೂತನ ಪಿ.ಎಸ್.ಭಟ್ ಬ್ಲಾಕ್ ಉದ್ಘಾಟನೆಯನ್ನು ಪಿ.ಎಸ್.ಭಟ್ ಸಹೋದರ ಪಿ.ವಿಶ್ವನಾಥ ಭಟ್ ನೆರವೇರಿಸಿದರು. ಟ್ರಸ್ಟ್ ಉಪಾಧ್ಯಕ್ಷ ಕೆ. ಅಭಯಚಂದ್ರ ಜೈನ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಉದಾರ ದಾನಿಗಳು ಕೊಡುಗೆಗಳ ಮೂಲಕ ಆಸ್ಪತ್ರೆಗೆ ಶಕ್ತಿ ತುಂಬುವ ಕೆಲಸ ಮಾಡಿದ್ದಾರೆ. ಹಾಗಾಗಿ ಡಯಾಲಿಸೀಸ್‌ನಂತಹ ವ್ಯವಸ್ಥೆ ಅತ್ಯಂತ ರಿಯಾಯಿತಿ ದರದಲ್ಲಿ ಇಲ್ಲಿನ ಜನತೆಗೆ ದೊರೆಯುವಂತಾಗಿದೆ ಎಂದರು.

ಖ್ಯಾತ ಹೃದ್ರೋಗ ತಜ್ಞ ಡಾ. ಪದ್ಮನಾಭ ಕಾಮತ್ ಅವರು ತನ್ನ ತಂದೆ ದಿ. ಡಾ. ಮಂಜುನಾಥ ಕಾಮತ್ ಸ್ಮರಣಾರ್ಥ ನೀಡಿದ ಅತ್ಯಾಧುನಿಕ ಇಸಿಜಿ ಯಂತ್ರವನ್ನು ಪಿ.ಆರ್.ಒ ಪ್ರದೀಪ್ ನಾಯಕ್ ಆಸ್ಪತ್ರೆಗೆ ಹಸ್ತಾಂತರಿಸಿದರು. ನವಜಾತ ಶಿಶುಗಳ ನವೀಕೃತ ತೀವ್ರ ನಿಗಾ ವಿಭಾಗವನ್ನು ಎಂ.ಸಿ.ಎಸ್ ಸೊಸೈಟಿಯ ವಿಶೇಷ ಕಾರ್ಯನಿರ್ವಹಣಾಧಿಕಾರಿ ಚಂದ್ರಶೇಖರ್ ಉದ್ಘಾಟಿಸಿದರು. ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದ ಟ್ರಸ್ಟ್ ಕಾರ್ಯದರ್ಶಿ ಡಾ. ಹರೀಶ್ ನಾಯಕ್ ಐದು ದಶಕಗಳ ಹಿಂದೆ ಹೆರಿಗೆ ಆಸ್ಪತ್ರೆಯೆಂದು ಖ್ಯಾತಿ ಪಡೆದ ಜಿ.ವಿ.ಆಸ್ಪತ್ರೆ ಹಲವು ದಾನಿಗಳ ಉದಾರ ಕೊಡುಗೆಗಳಿಂದ ಬೆಳೆದು ಇದೀಗ ಸಾರ್ಥಕ ಸ್ವರ್ಣ ಮಹೋತ್ಸವ ಕಾಣುತ್ತಿದೆ ಎಂದರು.

ಇನ್ನೋರ್ವ ಉಪಾಧ್ಯಕ್ಷ ಎಸ್.ಡಿ.ಸಂಪತ್ ಸಾಮ್ರಾಜ್ಯ, ಮನೋಹರ್ ಮೂಡುಬಿದಿರೆ ಉಪಸ್ಥಿತರಿದ್ದರು. ಜೆ.ಜೆ.ಪಿಂಟೋ ರೂಪಿಸಿ ವಂದಿಸಿದರು.

ಜಿ.ವಿ.ಪೈ ಟ್ರಸ್ಟ್ ಪದಾಧಿಕಾರಿಗಳು, ಆಸ್ಪತ್ರೆಯ ವೈದ್ಯಾಧಿಕಾರಿಗಳು, ಸಿಬ್ಬಂದಿ ಇದ್ದರು.