ಮಾಜಿ ಸೈನಿಕರ ಸಮಿತಿ ಅಧ್ಯಕ್ಷರಾಗಿ ಪಿ. ಸಾಗರ್ ಆಯ್ಕೆ

| Published : Apr 16 2025, 12:45 AM IST

ಮಾಜಿ ಸೈನಿಕರ ಸಮಿತಿ ಅಧ್ಯಕ್ಷರಾಗಿ ಪಿ. ಸಾಗರ್ ಆಯ್ಕೆ
Share this Article
  • FB
  • TW
  • Linkdin
  • Email

ಸಾರಾಂಶ

ಇತ್ತೀಚೆಗೆ ನಗರದಲ್ಲಿ ನಡೆದ ಜಿಲ್ಲಾ ಮಾಜಿ ಸೈನಿಕರ ಸಮನ್ವಯ ಸಮಿತಿಯ ಚುನಾವಣೆಯಲ್ಲಿ ನೂತನ ಅಧ್ಯಕ್ಷರಾಗಿ ಪಿ. ಸಾಗರ್ ಹಾಗೂ ಗೌರವಾಧ್ಯಕ್ಷರಾಗಿ ಬಿ. ದೊರೆರಾಜು ಹಾಗೂ ಪದಾಧಿಕಾರಿಗಳು ಆಯ್ಕೆಯಾಗಿದ್ದಾರೆ.

ಕನ್ನಡಪ್ರಭ ವಾರ್ತೆ ಹಾಸನ

ಇತ್ತೀಚೆಗೆ ನಗರದಲ್ಲಿ ನಡೆದ ಜಿಲ್ಲಾ ಮಾಜಿ ಸೈನಿಕರ ಸಮನ್ವಯ ಸಮಿತಿಯ ಚುನಾವಣೆಯಲ್ಲಿ ನೂತನ ಅಧ್ಯಕ್ಷರಾಗಿ ಪಿ. ಸಾಗರ್ ಹಾಗೂ ಗೌರವಾಧ್ಯಕ್ಷರಾಗಿ ಬಿ. ದೊರೆರಾಜು ಹಾಗೂ ಪದಾಧಿಕಾರಿಗಳು ಆಯ್ಕೆಯಾಗಿದ್ದಾರೆ.

ಜಿಲ್ಲಾ ಮಾಜಿ ಸೈನಿಕರ ಸಮನ್ವಯ ಸಮಿತಿಯ ಮಾಜಿ ಸೈನಿಕರ ನಿವೃತ್ತಿಯ ನಂತರದ ಶ್ರೇಯೋಭಿವೃದ್ಧಿಗಾಗಿ ತನ್ನದೆಯಾದ ಸಂಘ ಸ್ಥಾಪಿಸಿಕೊಂಡು ಸಮಾಜ ಸೇವೆ ಮತ್ತು ಇತರೆ ಸೇವೆಯಲ್ಲಿ ಸಕ್ರಿಯವಾಗಿದೆ. ಸಂಘದ ೨೦೨೫-೨೮ನೇ ಅವಧಿಗೆ ಚುನಾವಣೆ ನಡೆಯುವ ಮೂಲಕ ನೂತನ ಆಡಳಿತ ಮಂಡಳಿಯ ಸದಸ್ಯರನ್ನು ಆಯ್ಕೆ ಮಾಡಲಾಗಿದೆ. ಅಸಿಸ್ಟೆಂಟ್ ಕರ್ನಲ್ ಬಿ. ದೊರೆರಾಜು ಗೌರವಾಧ್ಯಕ್ಷರಾಗಿ, ಪಿ. ಸಾಗರ್ ಅಧ್ಯಕ್ಷರಾಗಿ, ಬಿ.ಕೆ. ವೆಂಕಟೇಶ್ ಉಪಾಧ್ಯಕ್ಷರಾಗಿ, ಡಿ.ಇ. ಸ್ವಾಮಿ ಪ್ರಧಾನ ಕಾರ್ಯದರ್ಶಿಯಾಗಿ, ಜಿ.ಕೆ. ಶ್ರೀಧರ್ ಸಹ ಕಾರ್ಯದರ್ಶಿಯಾಗಿ, ಹೆಚ್.ಎ. ಲೋಕೇಶ್ ಖಜಾಂಚಿಯಾಗಿ, ಎಂ.ಎಸ್. ನಾರಾಯಣಸ್ವಾಮಿ ಸಂಚಾಲಕರಾಗಿ, ಎಂ.ಎನ್. ಕೃಷ್ಣೇಗೌಡ ಹಾಗೂ ಮಲ್ಲೇಗೌಡ ಹಾಸನ ತಾಲೂಕು ನಿರ್ದೇಶಕರಾಗಿ, ಸೋಮೇಗೌಡ ಹಾಗೂ ಪಿ. ಯೋಗೇಶ್ ಚನ್ನರಾಯಪಟ್ಟಣ ತಾಲೂಕಿನ ನಿರ್ದೇಶಕರು. ಬಿ.ಎನ್. ರಮೇಶ್ ಹಾಗೂ ಸಿ.ಹೆಚ್. ಮಹೇಶ್ ಅರಸೀಕೆರೆ ತಾಲೂಕಿನ ನಿರ್ದೇಶಕರು, ಕೆ. ದಿಲೀಪ್ ಹಾಗೂ ಈಶ್ವರ್ ಹೊಳೆನರಸೀಪುರ ತಾಲೂಕಿನ ನಿರ್ದೇಶಕರು, ಹೆಚ್.ಡಿ. ಕೇಶವಮೂರ್ತಿ ಹಾಗೂ ಹೆಚ್.ಪಿ. ಧರ್ಮಪ್ಪ ಸಕಲೇಶಪುರ ತಾಲೂಕಿನ ನಿರ್ದೇಶಕರು, ಅರುಣ್ ಕುಮಾರ್ ಹಾಗೂ ಕೆ. ಶಿವಮೂರ್ತಿ ಅರಕಲಗೂಡು ತಾಲೂಕಿನ ನಿರ್ದೇಶಕರು, ಡಿ.ಎನ್. ಧರ್ಮರಾಜು ಹಾಗೂ ಕೆ.ಸಿ. ಉಮೇಶ್ ಬೇಲೂರ ತಾಲೂಕಿನ ನಿರ್ದೇಶಕರು, ಜಿ.ಕೆ. ವೆಂಕಟೇಶ್ ಹಾಗೂ ಮಂಜುನಾಥ್ ಆಲೂರು ತಾಲೂಕಿನ ನಿದೇಶಕರುಗಳು. ಚುನಾವಣೆ ನಡೆಯಲು ಸಂಘದ ಸದಸ್ಯರು, ಜಿಲ್ಲಾ ಪೊಲೀಸ್ ಇಲಾಖೆ, ಸಿಬ್ಬಂದಿ ಮತ್ತು ಜಿಲ್ಲಾ ಸಹಕಾರ ಸಂಘಗಳ ಉಪನೋಂದಣಾಧಿಕಾರಿಗಳು ಮತ್ತು ಆಡಳಿತ ಮಂಡಳಿಯವರಿಗೆ ಧನ್ಯವಾದ ತಿಳಿಸುವುದಾಗಿ ಜಿಲ್ಲಾ ಮಾಜಿ ಸೈನಿಕರ ಸಮನ್ವಯ ಸಮಿತಿಯ ನೂತನ ಅಧ್ಯಕ್ಷ ಪಿ. ಸಾಗರ್ ತಿಳಿಸಿದ್ದಾರೆ.