ಸಾರಾಂಶ
ಕನ್ನಡಪ್ರಭ ವಾರ್ತೆ ಮಸ್ಕಿಮಸ್ಕಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ವಿವಿಧೆಡೆ ಇತ್ತೀಚಿಗೆ ಸುರಿದ ಅಕಾಲಿಕ ಮಳೆ ಹಾಗೂ ಗಾಳಿಗೆ ಭತ್ತದ ಬೆಳೆ ನೆಲ ಕಚ್ಚಿ ರೈತರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದ್ದು, ಸರ್ಕಾರ ರೈತರ ಬೆನ್ನಿಗೆ ಇದೆ ಆದಷ್ಟು ಬೇಗ ರೈತರಿಗೆ ಪರಿಹಾರ ಒದಗಿಸಲಾಗುವುದು ಎಂದು ಖಾದಿ ಗ್ರಾಮೋದ್ಯೋಗ ನಿಗಮದ ಅಧ್ಯಕ್ಷ ಶಾಸಕ ಆರ್.ಬಸನಗೌಡ ತುರ್ವಿಹಾಳ ಭರವಸೆ ನೀಡಿದರು.ಸಮೀಪದ ವೀರಾಪುರ, ಹರಳಹಳ್ಳಿ, ಬನ್ನಟ್ಟಿ ಕ್ಯಾಂಪ್ ಹಾಗೂ ಮಲದಗುಡ್ಡ ಸೇರಿದಂತೆ ವಿವಿಧ ಗ್ರಾಮಗಳ ಭತ್ತದ ಗದ್ದೆಗಳಿಗೆ ಶನಿವಾರ ಭೇಟಿ ನೀಡಿ ಅಖಾಲಿಕ ಮಳೆಗೆ ಹಾಳಾದ ಬತ್ತವನ್ನು ಪರಿಶೀಲಿಸಿ ಮಾತನಾಡಿದ ಅವರು, ಮಸ್ಕಿ ತಾಲೂಕಿನ ವ್ಯಾಪ್ತಿಯಲ್ಲಿ ಈ ಬಾರಿ ಮಳೆ ಹಾಗೂ ಕಾಲುವೆ ನೀರಿನಿಂದ ಬತ್ತದ ಬೆಳೆಗಳು ಚೆನ್ನಾಗಿ ಬೆಳೆದಿದ್ದವು. ಆದರೆ ಅಕಾಲಿಕ ಮಳೆಗೆ ಭತ್ತ ನೆಲಕಚ್ಚಿದ್ದರಿಂದ ರೈತರು ಸಂಕಷ್ಟಕ್ಕೆ ಸಿಲಿಕುವಂತಾಗಿದೆ. ಈಗಾಗಲೇ ಕ್ಷೇತ್ರ ವ್ಯಾಪ್ತಿಯಲ್ಲಿ ನಷ್ಟವಾಗಿರುವ ಬತ್ತದ ಬೆಳೆಗಳ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲು ಸೂಚಿಸಲಾಗಿದ್ದು ರೈತರ ಬೆಳೆಗಳು ಹಾಳಾಗಿದ್ದರೆ ಕೂಡಲೇ ಗ್ರಾಮ ಆಡಳಿತ ಅಧಿಕಾರಿಗಳ ಬಳಿ ಆ್ಯಪ್ ಮೂಲಕ ನಮೂದಿಸಿ ಅನುಕೂಲವಾಗುತ್ತದೆ ಎಂದು ರೈತರಲ್ಲಿ ಮನವಿ ಮಾಡಿದರು.ಮಸ್ಕಿ ತಾಲೂಕಿನ ಈ ಬಾರಿ ಮಳೆ ಹಾಗೂ ಕಾಲುವೆ ನೀರಿನಿಂದ ಬತ್ತದ ಬೆಳೆಗಳು ಚೆನ್ನಾಗಿ ಬೆಳೆದಿದ್ದವು. ಆದರೆ ಅಕಾಲಿಕ ಮಳೆಗೆ ಭತ್ತ ನೆಲಕಚ್ಚಿದ್ದರಿಂದ ರೈತರು ಸಂಕಷ್ಟಕ್ಕೆ ಸಿಲುಕುವಂತಾಗಿದೆ. ಈಗಾಗಲೇ ಕ್ಷೇತ್ರ ವ್ಯಾಪ್ತಿಯಲ್ಲಿ ನಷ್ಟವಾಗಿರುವ ಬತ್ತದ ಬೆಳೆಗಳ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲು ಸೂಚಿಸಲಾಗಿದ್ದು ರೈತರ ಬೆಳೆಗಳು ಹಾಳಾಗಿದ್ದರೆ ಕೂಡಲೇ ಗ್ರಾಮ ಆಡಳಿತ ಅಧಿಕಾರಿಗಳ ಬಳಿ ಆ್ಯಪ್ ಮೂಲಕ ನಮೂದಿಸಿ ಇದರಿಂದ ಅನುಕೂಲವಾಗುತ್ತದೆ ಎಂದು ರೈತರಲ್ಲಿ ಮನವಿ ಮಾಡಿದರು. ಕೂಡಲೇ ಹಾನಿಗೊಳಗಾದ ರೈತರ ಜಮೀನುಗಳಿಗೆ ಪರಿಹಾರ ಒದಗಿಸಲು ಬೇಕಾದ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಿ ಎಂದು ಸಿಂದನೂರು ತಹಸೀಲ್ದಾರ್ ಅರುಣದೇಸಾಯಿ ಕೃಷಿ ಜಂಟಿ ನಿರ್ದೇಶಕ ಜಯ ಪ್ರಕಾಶ ಅವರಿಗೆ ಸೂಚನೆ ನೀಡಿದರು.ಈ ಸಂದರ್ಭದಲ್ಲಿ ಕಾಂಗ್ರೆಸಿನ ಎಸ್ ಟಿ ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ ಆರ್.ಸಿದ್ದನಗೌಡ ತುರ್ವಿಹಾಳ, ತಹಸಿಲ್ದಾರ್ ಅರುಣ್ ದೇಸಾಯಿ, ವಿವಿಧ ಇಲಾಖೆ ಅಧಿಕಾರಿ, ಸಿಬ್ಬಂದಿ, ಮುಖಂಡರು, ರೈತರು ಇದ್ದರು.