ಕಕ್ಕಬೆಯ ಪಾಡಿ ಶ್ರೀ ಇಗುತ್ತಪ್ಪ ದೇವಸ್ಥಾನದ ಅಷ್ಟ ಬಂಧ ಬ್ರಹ್ಮಕಲಶೋತ್ಸವ ಮೇ 13ರಿಂದ 18ರ ವರೆಗೆ ವಿಜೃಂಭಣೆಯಿಂದ ನಡೆಯಲಿದೆ.

ಕನ್ನಡಪ್ರಭ ವಾರ್ತೆ ನಾಪೋಕ್ಲು

ಇಲ್ಲಿಗೆ ಸಮೀಪದ ಕಕ್ಕಬೆಯ ಪಾಡಿ ಶ್ರೀ ಇಗುತ್ತಪ್ಪ ದೇವಸ್ಥಾನದ ಅಷ್ಟ ಬಂಧ ಬ್ರಹ್ಮಕಲಶೋತ್ಸವ ಮೇ 13ರಿಂದ 18ರ ವರೆಗೆ ವಿಜೃಂಭಣೆಯಿಂದ ನಡೆಯಲಿದೆ.

ನೀಲೇಶ್ವರ ಉಚ್ಚಿಲತಾಯ ಪದ್ಮನಾಭ ತಂತ್ರಿಯವರ ನೇತೃತ್ವದಲ್ಲಿ ಮೇ 13ರಂದು ಸಾಮೂಹಿಕ ಪ್ರಾರ್ಥನೆ, ಪುಣ್ಯಾಹ ಅಂಕುರಾರ್ಪಣೆ, ವಾಸ್ತು ರಾಕ್ಷೋಘ್ನ ಹೋಮ ನೆರವೇರಲಿದೆ.

ಮೇ 14ರಂದು ಗಣಪತಿ ಹೋಮ ಅಂಕುರ ಪೂಜೆ, ಬಿಂಬಶುದ್ಧಿ ಕಲಶ ಪೂಜೆ, ಕಲಶಾಭಿಷೇಕ ಪ್ರಾಯಶ್ಚಿತ ಹೋಮಗಳು ನೆರವೇರಲಿವೆ. ರಾತ್ರಿ ಅಂಕುರ ಪೂಜೆ ಹಾಗೂ ದುರ್ಗಾ ನಮಸ್ಕಾರ ಪೂಜೆ ನೆರವೇರಲಿದೆ. ಮೇ 15ರಂದು ಬೆಳಗ್ಗೆ 7 ಗಂಟೆಗೆ ಗಣಪತಿ ಹೋಮ ಅಂಕುರ ಪೂಜೆ, ಶಾಂತಿ ಹೋಮಗಳು ಹೋಮ ಕಲಶಾಭಿಷೇಕ ನಡೆಯಲಿದ್ದು, ಮಧ್ಯಾಹ್ನ ಪೂಜೆ ಹಾಗೂ ರಾತ್ರಿ ಅಂಕುರ ಪೂಜೆ, ದುರ್ಗಾ ನಮಸ್ಕಾರ ಪೂಜೆ ನಡೆಯಲಿದೆ.ಮೇ 16ರಂದು ಬೆಳಗ್ಗೆ 7ಗಂಟೆಯಿಂದ ಗಣಪತಿ ಹೋಮ ಅಂಕುರ ಪೂಜೆ, ತತ್ವ ಹೋಮ, ತತ್ವ ಕಲಶ ಪೂಜೆ, ತತ್ವ ಕಲಶಾಭಿಷೇಕ ನಡೆಯಲಿದೆ. ಮೇ 17ರಂದು ಬೆಳಗ್ಗೆ 7 ಗಂಟೆಯಿಂದ ಗಣಪತಿ ಹೋಮ, ಅಂಕುರ ಪೂಜೆ, ಕಲಶ ಪೂಜೆ, ಕುಂಭೇಶ ಕರ್ಕರಿ ಕಲಶ ಪೂಜೆ, ಅಧಿವಾಸ ಹೋಮ ನಡೆಯಲಿದೆ.

ಮೇ 18ರಂದು ಬೆಳಗ್ಗೆ 8 ಗಂಟೆಗೆಯಿಂದ ರೋಹಿಣಿ ನಕ್ಷತ್ರ ಮಿಥುನ ಲಗ್ನದಲ್ಲಿ ಅಷ್ಟಬಂಧ ಲೇಪನ ಪರಿಕಲಶಾಭಿಷೇಕ ಬ್ರಹ್ಮಕಲಶಾಭಿಷೇಕ ನಡೆಯಲಿದೆ. ಮಧ್ಯಾಹ್ನ ಪೂಜೆ ಪ್ರಸಾದ ವಿತರಣೆ ಮಂತ್ರಾಕ್ಷತೆ ಜರುಗಲಿದೆ ಎಂದು ಪಾಡಿ ಇಗ್ಗುತ್ತಪ್ಪ ದೇವಾಲಯದ ತಕ್ಕ ಮುಖ್ಯಸ್ಥರು ಹಾಗೂ ಭಕ್ತ ಜನ ಸಂಘದ ಅಧ್ಯಕ್ಷ ಪರದಂಡ ಸುಮನ್ ಸುಬ್ರಮಣಿ, ಆಡಳಿತ ಮಂಡಳಿ ಮತ್ತು ಪಾಡಿ ಇಗ್ಗುತ್ತಪ್ಪ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಬಾಚಮಂಡ ರಾಜ ಪೂವಣ್ಣ ಆಡಳಿತ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.