ಸಾರಾಂಶ
ರಾಣಿಬೆನ್ನೂರು: 20 ವರ್ಷಗಳಿಂದ ವಾಸವಾಗಿರುವ ತಾಲೂಕಿನ ಪದ್ಮಾವತಿಪುರ ತಾಂಡಾ ಗ್ರಾಮವನ್ನು ಅಧಿಕೃತ ಕಂದಾಯ ಗ್ರಾಮವನ್ನಾಗಿ ನಿರ್ಮಾಣ ಮಾಡಬೇಕು ಎಂದು ಆಗ್ರಹಿಸಿ ಗ್ರಾಮಸ್ಥರು ತಹಸೀಲ್ದಾರ್ ಆರ್.ಎಚ್. ಭಾಗವಾನ್ ಅವರಿಗೆ ಮನವಿ ಸಲ್ಲಿಸಿದರು.ಗ್ರಾಮದಲ್ಲಿ 800ಕ್ಕೂ ಹೆಚ್ಚು ಮನೆಗಳಿದ್ದು, 2000 ಜನಸಂಖ್ಯೆಯನ್ನು ಹೊಂದಿರುವ ಗ್ರಾಮ ಒಂದು ಅಂಗನವಾಡಿ ಕೇಂದ್ರವಿದೆ. ಒಂದರಿಂದ ಏಳನೇ ತರಗತಿಯವರೆಗೆ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಿದ್ದು, 1500 ಹೆಚ್ಚು ಮತದಾರರನ್ನು ಮತದಾರರನ್ನು ಹೊಂದಿದೆ. ಮೂರು ಗ್ರಾಮ ಪಂಚಾಯಿತಿ ಸದಸ್ಯತ್ವ ಹೊಂದಿರುವ ಗ್ರಾಮ ಈ ಗ್ರಾಮಕ್ಕೆ ಸರ್ಕಾರಿ ಸಾರಿಗೆ ಸೇವೆ ಇಲ್ಲ ಕುಡಿಯುವ ನೀರಿನ ಸಮಸ್ಯೆಯಿದೆ. ಗ್ರಾಮದಲ್ಲಿ ಶವ ಸಂಸ್ಕಾರ ಮಾಡಲು ಅಧಿಕೃತ ಸ್ಮಶಾನವಿಲ್ಲ. ಸಾಮಾಜಿಕವಾಗಿ, ಶೈಕ್ಷಣಿಕವಾಗಿ, ಆರ್ಥಿಕವಾಗಿ, ಔದ್ಯೋಗಿಕವಾಗಿ, ಪ್ರಗತಿ ಮತ್ತು ಸ್ವಾವಲಂಬನೆ ಸಾಧಿಸಲು ಸೂಕ್ತ ದಾಖಲೆಗಳನ್ನ ತೆಗೆದುಕೊಂಡು ಬ್ಯಾಂಕ್‌ಗಳಿಗೆ ಹೋದರೆ ಬ್ಯಾಂಕುಗಳಲ್ಲಿ ಎಲ್ಲಾ ಸೂಕ್ತವಾಗಿದೆ. ಆದರೆ ನಿಮ್ಮ ಮನೆಗೆ ಈ ಸ್ವತ್ತು ಉತಾರವಿದ್ದರೆ ಮಾತ್ರ ಸಾಲ ಸೌಲಭ್ಯ ಕೊಡಲು ಅವಕಾಶವಿದೆ ಎಂದು ನಮ್ಮ ಅರ್ಜಿಯನ್ನು ತಿರಸ್ಕರಿಸುತ್ತಾರೆ. ಈ ಸ್ವತ್ತು ಉತ್ತರ ಪಡೆದುಕೊಳ್ಳಲು ಗ್ರಾಮ ಪಂಚಾಯಿತಿಗೆ ಹೋಗಿ ಆನ್‌ಲೈನ್‌ದಲ್ಲಿ ಅರ್ಜಿ ಸಲ್ಲಿಸಿದರೆ ನಮ್ಮ ಅರ್ಜಿಗಳು ಸ್ವೀಕೃತ ವಾಗುವುದಿಲ್ಲ ಇದಕ್ಕೆ ಗ್ರಾಮ ಪಂಚಾಯತಿಯವರನ್ನ ಕಾರಣ ಕೇಳಿದರೆ ನಿಮ್ಮ ಗ್ರಾಮವು ಅರಣ್ಯ ವ್ಯಾಪ್ತಿಯಲ್ಲಿ ಬರುತ್ತದೆ ಮತ್ತು ಕಂದಾಯ ಗ್ರಾಮದ ನೋಟಿಫಿಕೇಶನ್ ಬಾರದೆ ಇರುವುದರಿಂದ ನಿಮ್ಮ ಗ್ರಾಮಕ್ಕೆ ಅಧಿಕೃತ ಈ ಸ್ವತ್ತು ಉತಾರ ನೀಡಲು ಬರುವುದಿಲ್ಲ ಎಂದು ಹಿಂಬರಹ ನೀಡುತ್ತಾರೆ. ಗ್ರಾಮವನ್ನು ಸರ್ವೇ ಮಾಡಿಸಿ ನಕ್ಷೆ ತಯಾರಿಸಿ ಅಧಿಕೃತ ಕಂದಾಯ ಗ್ರಾಮವನ್ನಾಗಿ ಘೋಷಿಸದಿದ್ದಲ್ಲಿ ಪಾದಯಾತ್ರೆಯ ಚಳುವಳಿ ಮೂಲಕ ಪದ್ಮಾವತಿಪುರ ತಾಂಡಾದಿಂದ ಜಿಲ್ಲಾಡಳಿತ ಭವನಕ್ಕೆ ಮುತ್ತಿಗೆ ಹಾಕಲಾಗುವುದು ಎಂದರು. ಮಹಿಳಾ ಹೋರಾಟಗಾರ್ತಿ ಲಲಿತವ್ವ ಲಮಾಣಿ, ಗಂಗವ್ವ ಲಮಾಣಿ, ಲಕ್ಷ್ಮವ್ವ ಲಮಾಣಿ, ಹೊಳೆಯಪ್ಪ ಲಮಾಣಿ, ಪ್ರಕಾಶ ಮಣಕೂರ, ಮಂಜವ್ವ ಲಮಾಣಿ, ಎಲ್ಲಪ್ಪ ಚಿಕ್ಕಣ್ಣನವರ ಮತ್ತಿತರರಿದ್ದರು.