ಸಾರಾಂಶ
ದೈವಗಳ ಶುದ್ಧಿಕಲಶ, ದೈವಗಳಿಗೆ ತಂಬಿಲ, ನಾಗ ತಂಬಿಲ, ಮುಡಿಪು ಸೇವೆ ನಡೆಯಿತು. ಸಂಜೆ 7ರಿಂದ ದೈವಗಳ ಭಂಡಾರ ಇಳಿಯುವ ಕಾರ್ಯಕ್ರಮ ನಡೆಯಿತು.
ಕನ್ನಡಪ್ರಭವಾರ್ತೆ ಪುತ್ತೂರು
ತಾಲೂಕಿನ ಪಡುವನ್ನೂರು ಗ್ರಾಮದ ಕುತ್ಯಾಳ ಹೊಸಮನೆಯಲ್ಲಿ ತರವಾಡು ದೈವಗಳ ನೇಮೋತ್ಸವ ಮೇ 14ರಿಂದ 16ರ ತನಕ 3 ದಿನಗಳ ಕಾಲ ನಡೆಯಿತು.ಮೇ 14 ರಂದು ಸಂಜೆ ದುರ್ಗಾಪೂಜೆ ಮತ್ತು ಭಜನಾ ಕಾರ್ಯಕ್ರಮ ನಡೆಯಿತು. 15ರಂದು ಬೆಳಗ್ಗೆ ಗಣಪತಿ ಹೋಮ, ದೈವಗಳ ಶುದ್ಧಿಕಲಶ, ದೈವಗಳಿಗೆ ತಂಬಿಲ, ನಾಗ ತಂಬಿಲ, ಮುಡಿಪು ಸೇವೆ ನಡೆಯಿತು. ಸಂಜೆ 7ರಿಂದ ದೈವಗಳ ಭಂಡಾರ ಇಳಿಯುವ ಕಾರ್ಯಕ್ರಮ ನಡೆದು ಅನ್ನಸಂತರ್ಪಣೆ ನಡೆಯಿತು.ಬಳಿಕ ರಾತ್ರಿ ಕಲ್ಲುರ್ಟಿ, ಕೊರತಿ, ಗುಳಿಗ ಮತ್ತು ಕುಪ್ಪೆ ಪಂಜುರ್ಲಿ ದೈವಗಳ ನೇಮೋತ್ಸವ ನಡೆಯಿತು. ಮೇ 16ರಂದು ಗುರುವಾರ ಬೆಳಗ್ಗೆ ವರ್ಣರ ಪಂಜುರ್ಲಿ ದೈವದ ನೇಮ ನಡೆದು ಮಧ್ಯಾಹ್ನ ಧರ್ಮದೈವ ಪಿಲಿ ಚಾಮುಂಡಿ ನೇಮೋತ್ಸವ ನಡೆಯಿತು. ಬಳಿಕ ಪ್ರಸಾದ ವಿತರಣೆ, ಅನ್ನಸಂತರ್ಪಣೆ ನೆರವೇರಿತು.ಕುಟುಂಬದ ಯಜಮಾನರಾದ ಕೆ. ಎಚ್. ದಾಸಪ್ಪ ರೈ, ಕುತ್ಯಾಳ ಹೊಸಮನೆಗುತ್ತು ಶಶಿಧರ ರೈ ಮತ್ತು ಕುಟುಂಬಸ್ಥರು, ಭಕ್ತರು ಉಪಸ್ಥಿತರಿದ್ದರು. ಶಾಸಕ ಅಶೋಕ್ ಕುಮಾರ್ ರೈ ಕೋಡಿಂಬಾಡಿ, ಮಾಜಿ ಶಾಸಕರಾದ ಸಂಜೀವ ಮಠಂದೂರು, ಶಕುಂತಳಾ ಶೆಟ್ಟಿ ಸೇರಿದಂತೆ ಹಲವಾರು ಮಂದಿ ರಾಜಕೀಯ ಮತ್ತು ಸಾಮಾಜಿಕ ಗಣ್ಯರು ಆಗಮಿಸಿ ದೈವಗಳ ಗಂಧ ಪ್ರಸಾದ ಸ್ವೀಕರಿಸಿದರು.