ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರು
ನಗರದ ಸರಸ್ವತಿಪುರಂನ ಅಗ್ನಿಶಾಮಕ ಠಾಣೆ ಹತ್ತಿರದ ರಮ್ಯಾ ಹೋಟೆಲ್ ಎದುರಿನ ಹೆರಿಟೇಜ್ ಹೌಸ್ ನಲ್ಲಿ ಮೂವರು ಕಲಾವಿದರ ಕಲಾ ಪ್ರದರ್ಶನ ಏರ್ಪಡಿಸಲಾಗಿದೆ.ಥ್ರಿ ಫೋಲ್ಡ್ ತಂಡ ಕಟ್ಟಿಕೊಂಡಿರುವ ಕೆ. ನಹುಷಾ, ಕೆ. ರಕ್ಷಿತ್ ಮತ್ತು ಬಿ.ಆರ್. ಶೈಲೇಶ್ ತಮ್ಮ ಕಲಾಪ್ರದರ್ಶನವನ್ನು ಏರ್ಪಡಿಸಿದ್ದಾರೆ. ಮೈಸೂರು ಆಟ್೯ ಸೆಂಟರ್ ಆಯೋಜಿಸಿರುವ ಈ ಕಲಾಪ್ರದರ್ಶನ ಜೂ.17 ರವರೆಗೆ ಬೆಳಗ್ಗೆ 10.30 ರಿಂದ ಸಂಜೆ 7 ರವರೆಗೆ ನಡೆಯಲಿದೆ.
ಶಿವಮೊಗ್ಗ ಜಿಲ್ಲೆಯ ಶಂಕರಘಟ್ಟದ ನಹುಷಾ ಅವರು ಓದಿದ್ದು ಮೈಸೂರಿನ ಕಾವಾದಲ್ಲಿ. ನಂತರ ಬೆಂಗಳೂರಿನ ವಿವಿಯಲ್ಲಿ ಚಿತ್ರಕಲೆ ವಿಷಯದಲ್ಲಿ ಎಂ.ಎ. ಪದವಿ ಪಡೆದು ಜಾಹೀರಾತು ಕಂಪನಿಯಲ್ಲಿದ್ದರು. ಸದ್ಯ ತಮ್ಮ ತೋಟ ನೋಡಿಕೊಳ್ಳುತ್ತ ಚಿತ್ರಕಲೆ ಮುಂದುವರೆಸಿದ್ದಾರೆ. ಅವರ ಚಿತ್ರಕಲಾ ಪ್ರದರ್ಶನದಲ್ಲಿ ಮಲೆನಾಡಿನ ಜೀವನಶೈಲಿ, ಮನುಷ್ಯ ಹಾಗೂ ಪ್ರಾಣಿಗಳ ಸಂಘರ್ಷವನ್ನ ಢಾಳ ಬಣ್ಣಗಳ ಮೂಲಕ ಚಿತ್ರಿಸಿದ್ದಾರೆ.ದಕ್ಷಿಣ ಕನ್ನಡ ಜಿಲ್ಲೆಯ ಗುರುವಾಯನಕೆರೆಯ ರಕ್ಷಿತ್ ಕಡ್ಲಾರ ಅವರು ಕಾವಾದಲ್ಲಿ ಪದವಿ ಹಾಗೂ ಎಂ.ಎ ಪದವಿ ಪಡೆದು ಕೃಷಿ ಜೊತೆಗೆ ಕಲಾಭ್ಯಾಸ ಕೈಗೊಂಡಿದ್ದಾರೆ. ಚಿತ್ರಕಲೆ ಹಾಗೂ ಶಿಲ್ಪಕಲೆಯಲ್ಲಿ ಶೂನ್ಯದ ಮಹತ್ವವನ್ನು ಅವರು ಬಿಂಬಿಸಿದ್ದಾರೆ.
ಶಿವಮೊಗ್ಗ ಜಿಲ್ಲೆಯ ತುಮರಿಯ ಶೈಲೇಶ್ ಅವರು ಕಾವಾದಲ್ಲಿ ಪದವಿ ಪಡೆದು, ಬರೋಡಾದಲ್ಲಿ ಎಂ.ಎ ಪದವಿ ಪಡೆದಿದ್ದಾರೆ. ಸದ್ಯ ದೆಹಲಿ ವಾಸಿಯಾದ ಅವರು, ದೇಶದ ಹಲವೆಡೆ ಅಲ್ಲದೆ ಕೊರಿಯಾದಲ್ಲೂ ತಮ್ಮ ಚಿತ್ರಕಲಾ ಪ್ರದರ್ಶನ ಏರ್ಪಡಿಸಿದ್ದಾರೆ. ಯಂತ್ರಗಳನ್ನೇ ಶಿಲ್ಪಗಳಾಗಿ ರೂಪಿಸಿರುವ ಅವರು, ಚಿತ್ರಕಲೆಯಲ್ಲಿ ಸಂಭಾಷಣೆ ರಚಿಸಿದ್ದಾರೆ.ಅಂತಾರಾಷ್ಟ್ರೀಯ ಕಿರುಚಿತ್ರ, ಸಾಕ್ಷ್ಯಚಿತ್ರೋತ್ಸವಕನ್ನಡಪ್ರಭ ವಾರ್ತೆ ಮೈಸೂರು
ಮೈಸೂರು ಸಿನಿಮಾ ಸೊಸೈಟಿ ಮತ್ತು ಭಾರತೀಯ ಚಿತ್ರ ಸಾಧನದ ಸಹಯೋಗದಲ್ಲಿ ಮೈಸೂನಲ್ಲಿ 2025ರ ಫೆಬ್ರವರಿ 1 ಮತ್ತು 2 ರಂದು ಅಂತಾರಾಷ್ಟ್ರೀಯ ಕಿರುಚಿತ್ರ ಮತ್ತು ಸಾಕ್ಷ್ಯ ಚಿತ್ರೋತ್ಸವವನ್ನು ವಿದ್ಯಾರ್ಥಿ ಮತ್ತು ವೃತ್ತಿಪರ ವಿಭಾಗಗಳಲ್ಲಿ ಆಯೋಜಿಸಲಾಗಿದೆ ಎಂದು ಸೊಸೈಟಿ ಕಾರ್ಯದರ್ಶಿ ಪದ್ಮಾವತಿ ಎಸ್.ಭಟ್ ತಿಳಿಸಿದರು.ಕಾರ್ಯಕ್ರಮದ ಅಂಗವಾಗಿ ಪರಿದೃಶ್ಯ ಚಿತ್ರೋತ್ಸವಕ್ಕೆ ಕಿರುಚಿತ್ರ ಮತ್ತು ಸಾಕ್ಷ್ಯಚಿತ್ರ ಆಹ್ವಾನಿಸಲಾಗಿದೆ, ಈ ಸ್ಪರ್ಧೆಯಲ್ಲಿ ಭಾಗವಹಿಸಲು ಅರ್ಹತೆ 2022ರ ನಂತರ ಚಿತ್ರೀಕರಣಗೊಂಡ ಕಿರು ಚಿತ್ರಗಳು ಮತ್ತು ಸಾಕ್ಷ್ಯಾ ಚಿತ್ರಗಳಿಗೆ ಪ್ರವೇಶಾವಕಾಶ ಇದೆ ಎಂದು ಅವರು ಸುದ್ದಿಗೋಷ್ಠಿಯಲ್ಲಿ ಶುಕ್ರವಾರ ತಿಳಿಸಿದ್ದಾರೆ.ಈ ಸ್ಪರ್ಧೆಯಲ್ಲಿ ಅತ್ಯುತ್ತಮ ಕಿರುಚಿತ್ರ, ಅತ್ಯುತ್ತಮ ನಿರ್ದೇಶಕ, ಅತ್ಯುತ್ತಮ ನಟ, ಅತ್ಯುತ್ತಮ ನಟಿ, ಅತ್ಯುತ್ತಮ ಛಾಯಾಚಿತ್ರ, ಅತ್ಯುತ್ತಮ ಚಿತ್ರಕಥೆ, ಅತ್ಯುತ್ತಮ ಧ್ವನಿ ಸಂಯೋಜನೆ, ಹಾಗೂ ಇನ್ನೂ ಅನೇಕ ಬಹುಮಾನ ಇರುತ್ತವೆ. ಚಿತ್ರಗಳನ್ನು ಸಲ್ಲಿಸಲು ನ. 30ರಂದು ಕಿರುಚಿತ್ರಗಳ ಅವಧಿ - 1 ನಿಮಿಷದಿಂದ 45 ನಿಮಿಷಗಳ ಒಳಗೆ ಇರತಕ್ಕದ್ದು ಮತ್ತು ಸಾಕ್ಷ್ಯಚಿತ್ರಗಳ ಅವಧಿ -30 ನಿಮಿಷದಿಂದ 100 ನಿಮಿಷಗಳ ಒಳಗೆ ಇರಬೇಕು ಎಂದರು.ಆಸಕ್ತರು https://filmfreeway.com/paridrishya, ಇ ಮೇಲ್‌ವಿಳಾಸ www.mysurucinemasociety.com ಇಲ್ಲಿಗೆ ಭೇಟಿ ನೀಡಬಹುದು. ಹೆಚ್ಚಿನ ಮಾಹಿತಿಗೆ ಮೊ. 99805 96824 ಸಂಪರ್ಕಿಸಬಹುದು.