A palanquin procession was held on Sunday at the town's Sarveshwara Temple. This temple, which dates back centuries, possesses a unique history. Keshavarao Maharaj—a community leader and former Zilla Panchayat member—stated that the deity is a

- ಜಿ.ಪಂ. ಮಾಜಿ ಸದಸ್ಯ ಕೇಶವರಾವ್‌ ಮಹಾರಾಜ್‌ ನೇತೃತ್ವದಲ್ಲಿ ಉತ್ಸವ, ಧಾರ್ಮಿಕ ಕಾರ್ಯ ವಿಧಾನಗಳುಕನ್ನಡಪ್ರಭ ವಾರ್ತೆ ಹುಮನಾಬಾದ್‌

ತಾಲೂಕಿನ ಹಳ್ಳಿಖೇಡ (ಬಿ) ಪಟ್ಟಣದಲ್ಲಿನ ಸರ್ವೇಶ್ವರ ದೇವಾಲಯದಲ್ಲಿ ಭಾನುವಾರ ಪಲ್ಲಕ್ಕಿ ಉತ್ಸವ ಜರುಗಿತು. ಶತಶತಮಾನಗಳಿಗಿಂತಲೂ ಪುರಾತನವಾದ ದೇವಾಲಯಕ್ಕೆ ತನ್ನದೇ ಆದ ಇತಿಹಾಸವಿದೆ. ಇದು ಸ್ವಯಂಭು ಶಿವ, ಗಿಡಗಂಟೆಗಳಿಂದ ಸುತ್ತುವರೆದಿರುವ ಶಿವಲಿಂಗವನ್ನು ವಿಪ್ರ ಸಮುದಾಯದವರು ಕೂಡಿ ಕೊಂಡು ಚಿಕ್ಕದಾದ ಗರ್ಭಗುಡಿಯನ್ನು ನಿರ್ಮಿದ್ದಾರೆ ಎಂದು ಸಮಾಜದ ಮುಖಂಡ, ಜಿಪಂ ಮಾಜಿ ಸದಸ್ಯ ಕೇಶವರಾವ್‌ ಮಹಾರಾಜ್‌ ತಿಳಿಸಿದ್ದಾರೆ.

ತದನಂತರ ದಿನಗಳಲ್ಲಿ ಪೂಜೆ, ಅರ್ಚನೆ, ಆರಾಧನೆ, ಅಭಿಷೇಕ ಪ್ರತಿಯೊಂದು ಧಾರ್ಮಿಕ ಕಾರ್ಯ ವಿಧಾನಗಳು ನಡೆಯುತ್ತಿವೆ. ಅತೀ ಬರಗಾಲದ ಪರಿಸ್ಥಿತಿ ಯೊಮ್ಮೆ ಬಂದಾಗ ಎಲ್ಲರೂ ಕೂಡಿ ಶಿವನಿಗೆ ಸಂತ್ರಧಾರೆ ಪೂಜೆಯನ್ನು ಪ್ರಾರಂಭಿಸೋಣ ಮತ್ತು ಜೋಳಿಗೆ ಪೂಜೆಯನ್ನು ಸಹ ಮಾಡೋಣ ಎಂದು ನಿರ್ಧಾರ ಮಾಡುತ್ತಿದ್ದಂತೆ ಮಳೆಯಾಗಿ ಕ್ಷಾಮವನ್ನು ದೂರ ಮಾಡಿದ್ದರಿಂದ ದಶಕಗಳಿಂದ ಪ್ರಾರಂಭವಾದ ಈ ಒಂದು ಪೂಜೆ ಇಲ್ಲಿಯವರೆಗೂ ನಡೆದುಕೊಂಡು ಬಂದಿದೆ.

7 ದಿನಗಳ ಕಾಲ ಹಗಲಿರುಳು ಎನ್ನದೆ ಜಲಧಾರೆ ಪೂಜೆ, ಶಿವನಾಮಸ್ಮರಣೆಯ ಮಂತ್ರಗಳು ಮತ್ತು ದಿನಾಲು ಪ್ರತಿಯೊಬ್ಬರ ಮನೆಯಿಂದ ಭೋಜನವನ್ನು ತಂದು ಶಿವನಿಗೆ ಅರ್ಪಿಸಿ ಎಲ್ಲರೂ ಮಹಾಪ್ರಸಾದವಾಗಿ ಸ್ವೀಕರಿಸುತ್ತಾರೆ. ಜೊತೆಗೆ ವೈಶಿಷ್ಟ್ಯಪೂರ್ಣವಾದ ಜೋಳಿಗೆ ಪೂಜೆಯನ್ನು ಮಾಡುತ್ತಾರೆ. ಭಾನುವಾರ ಸಂತ್ರಧಾರೆಯ ಕೊನೆ ದಿನವಾಗಿದ್ದು ಭಜನೆ, ಆರತಿ ಪಲ್ಲಕಿಯ ಮೆರವಣಿಗೆ ಮಾಡಿದರು ಎಂದು ಮುಖಂಡರಾದ ಕೇಶವ ರಾವ್ ಮಹಾರಾಜ್ ತಿಳಿದ್ದಾರೆ.

ಕಾರ್ಯಕ್ರಮದಲ್ಲಿ ಪಾಂಡುರಂಗ ಮಹಾರಾಜ್‌, ಶಿವರಾಮ್‌ ದೀಕ್ಷಿತ್‌, ಗುರುನಾಥ್‌ ದೀಕ್ಷಿತ್, ದೇವಿದಾಸ ದೀಕ್ಷಿತ್‌, ನಿಖಿಲೇಶ ದೀಕ್ಷಿತ್‌, ದೇವಿಪ್ರಸಾದ್ ದೀಕ್ಷಿತ್‌ , ರಾಜೇಶ ಕುಲಕರ್ಣಿ, ಸಂಜಯ ಪಟವಾರಿ, ಮಧುಕರ ದೇಶಪಾಂಡೆ, ಭಗವಂತ್‌ ಬೂತಗಿ, ಮುರಾರ್ಜಿ ಕುಲಕರ್ಣಿ, ದೇವೇಂದ್ರ ಪತ್ತಗಿ, ಬಂಡು ಮಹಾರಾಜ್‌, ರಾಜು ಪಟವಾರಿ, ದತ್ತು ಜೋಶಿ, ಸರ್ವೇಶ್ವರ ಮಹಿಳಾ ಮಂಡಲ ಹಾಗೂ ಅನೇಕ ಬ್ರಾಹ್ಮಣ ಮತ್ತು ಇನ್ನಿತರ ಸಮಾಜದ ಜನರು ಭಾಗವಹಿಸಿ ಪಲ್ಲಕ್ಕಿ ಉತ್ಸವವನ್ನು ವಿಜೃಂಭಣೆಯಿಂದ ಆಚರಿಸಿದರು.