ಸಾರಾಂಶ
ಪಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಯಕ್ಷಧ್ರುವ ಪಟ್ಲ ಫೌಂಡೇಶನ್ ಇದರ ಪಳ್ಳಿ- ನಿಂಜೂರು ಘಟಕದ ಸಹಯೋಗದಲ್ಲಿ 2025-26ನೇ ಸಾಲಿನ ಉಚಿತ ಯಕ್ಷಗಾನ ತರಬೇತಿಯನ್ನು ಘಟಕ ಗೌರವಾಧ್ಯಕ್ಷ ಭರತ್ ಹೆಗ್ಡೆ ಪಳ್ಳಿ ಉದ್ಘಾಟಿಸಿದರು.
ಕನ್ನಡಪ್ರಭ ವಾರ್ತೆ ಕಾಪುಇಲ್ಲಿನ ಪಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಯಕ್ಷಧ್ರುವ ಪಟ್ಲ ಫೌಂಡೇಶನ್ ಇದರ ಪಳ್ಳಿ- ನಿಂಜೂರು ಘಟಕದ ಸಹಯೋಗದಲ್ಲಿ 2025-26ನೇ ಸಾಲಿನ ಉಚಿತ ಯಕ್ಷಗಾನ ತರಬೇತಿಯನ್ನು ಘಟಕ ಗೌರವಾಧ್ಯಕ್ಷ ಭರತ್ ಹೆಗ್ಡೆ ಪಳ್ಳಿ ಉದ್ಘಾಟಿಸಿದರು.
ಮುಖ್ಯ ಅತಿಥಿ ಪಳ್ಳಿ- ನಿಂಜೂರು ಘಟಕದ ಸಂಚಾಲಕ ಸುನಿಲ್ ಕೋಟ್ಯಾನ್ ಮಾತನಾಡಿ, ಶಾಲಾ ಮಕ್ಕಳ ಯಕ್ಷಗಾನ ಕಲಿಕೆಯ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿ, ಈ ವರ್ಷದ ಉಚಿತ ಯಕ್ಷಗಾನ ತರಗತಿಗೆ ಶುಭ ಹಾರೈಸಿದರು.ಸಮಾರಂಭದಲ್ಲಿ ಘಟಕ ಅಧ್ಯಕ್ಷ ಸುನಿಲ್ ಶೆಟ್ಟಿ, ಉಪಾಧ್ಯಕ್ಷ ರಮಾನಂದ ಕಿಣಿ, ಕೋಶಾಧಿಕಾರಿ ನಿಧೀಶ್ ಆಚಾರ್ಯ, ಕಲಾ ಪೋಷಕ ಸುರೇಶ್ ಪಾಣರ ಉಪಸ್ಥಿತರಿದ್ದರು.
ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಪ್ರಭಾಕರ ಬಂಗೇರ, ಯಕ್ಷ ತರಬೇತಿ ನೀಡಲಿರುವ ಗುರು ಸುರೇಶ್ ಮರ್ಣೆ ಅವರಿಗೆ ವೀಳ್ಯ ನೀಡಿದರು. ನಂತರ ತರಗತಿಯ ಮಕ್ಕಳಿಂದ ಯಕ್ಷಗಾನ ನಾಟ್ಯ ಆರಂಭಗೊಂಡಿತು.ಶಾಲಾ ಪ್ರಭಾರ ಮುಖ್ಯೋಪಾಧ್ಯಾಯಿನಿ ಪ್ರೇಮಲತಾ ಸ್ವಾಗತಿಸಿದರು. ಸಹಶಿಕ್ಷಕಿ ಲಕ್ಷ್ಮೀ ಎಚ್. ಅತಿಥಿಗಳಿಗೆ ಪುಷ್ಪ ನೀಡಿ ಗೌರವಿಸಿದರು. ಸಹ ಶಿಕ್ಷಕಿ ಜುಸ್ತಿನಾ ಲುಸಿಲ್ಲಾ ಫೆರಾವೋ ವಂದಿಸಿದರು. ಶಿಕ್ಷಕಿ ಚಿತ್ರಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.