ಸಾರಾಂಶ
ಕನ್ನಡಪ್ರಭ ವಾರ್ತೆ ಮೂಡುಬಿದಿರೆ
15ನೇ ವರ್ಷದ ಪಣಪಿಲ ಜಯ ವಿಜಯ ಜೋಡುಕರೆ ಕಂಬಳವು ಪೂರ್ವ ನಿರ್ಧರಿತ 24 ತಾಸುಗಳ ಒಳಗಾಗಿ ಮುಗಿಯುವ ಮೂಲಕ ಈ ಋತುವಿನ ಮೊದಲ ಕಂಬಳ ನಿಯಮಬದ್ಧವಾಗಿ ನಡೆದಿದೆ. ಕಂಬಳದಲ್ಲಿ ಒಟ್ಟು 165 ಜೊತೆ ಕೋಣಗಳು ಕಣದಲ್ಲಿದ್ದವು.ಫಲಿತಾಂಶ:ಹಗ್ಗ ಕಿರಿಯ 21 ಜೊತೆ: 1. ಸುರತ್ಕಲ್ ಪಾಂಚಜನ್ಯ ಯೋಗೀಶ ಪೂಜಾರಿ ''''ಎ'''' (ಓಡಿಸಿದವರು ಭಟ್ಕಳ ಶಂಕರ್) 2. ಬೆಳುವಾಯಿ ಪುತ್ರಿಗೆ ಗುತ್ತು ಪೆರೋಡಿ ನರಸಿಂಹ ಶೆಟ್ಟಿ (ಓಡಿಸಿದವರು ಆದಿಉಡುಪಿ ಜಿತೇಶ್ ಸುವರ್ಣ).ನೇಗಿಲು ಕಿರಿಯ 52 ಜೊತೆ: 1. ಮೂಲ್ಕಿ ಚಿತ್ರಾಪು ಸಾನದಮನೆ ಅಂಬಿಕಾ ರವೀಂದ್ರ ಪೂಜಾರಿ (ಬಂಬ್ರಾಣಬೈಲು ವಂದಿತ್ ಶೆಟ್ಟಿ). 2. ಪಣೋಲಿಬೈಲು ಬೊಳ್ಳಾಯಿ ಚಂದಪ್ಪ ಪೂಜಾರಿ ( ಪಡುಸಾಂತೂರು ಸುಕೇಶ ಪೂಜಾರಿ).
ನೇಗಿಲು ಸಬ್ ಜ್ಯೂನಿಯರ್ 92 ಜೊತೆ: 1.ಶ್ರೀ ಸ್ವಾಮಿಧಾಮ ಹೊಳೆಕಟ್ಟು ಕುಂಬಾಶಿ (ಬೈಂದೂರು ಮಂಜುನಾಥ ಗೌಡ), 2. ಮುಡಾರ್ ಹಚ್ಚಿಟ್ಟು ಫೋರ ನಿವಾಸ ರೋಷನ್ ರಂಜಿತ್ ಫರ್ನಾಂಡಿಸ್ (ಕಕ್ಕೆಪದವು ಮಹಮ್ಮಾಯಿ ಗೌತಮ್ ಗೌಡ).ಭಾನುವಾರ ಬೆಳಗ್ಗೆ ಬಹುಮಾನ ವಿತರಣಾ ಕಾರ್ಯಕ್ರಮ ನೆರವೇರಿತು. ನೆಲ್ಲಿಕಾರು ಪಂ.ಅಧ್ಯಕ್ಷ ಉದಯ್ ಪೂಜಾರಿ, ಪಂ. ಗ್ರಾಮಕರಣಿಕ ಕಿಶೋರ್ ಕುಮಾರ್, ಉದ್ಯಮಿ ರಮನಾಥ ಸಾಲ್ಯಾನ್, ಕಂಬಳ ಸಮಿತಿಯ ಅಧ್ಯಕ್ಷ ಯುವರಾಜ್ ಹೆಗ್ಡೆ ನಂದೊಟ್ಟು ಜಿಲ್ಲಾ ಕಂಬಳ ಸಮಿತಿಯ ತೀರ್ಪುಗಾರರ ಸಂಚಾಲಕ ವಿಜಯಕುಮಾರ್ ಕಂಗಿನ ಮನೆ, ಕಂಬಳ ಸಮಿತಿಯ ಕಾರ್ಯಧ್ಯಕ್ಷ ಸುಭಾಷ್ ಚಂದ್ರ ಚೌಟ, ವಾಲ್ದಾಡಿ ಗ್ರಾ.ಪಂ. ಉಪಾಧ್ಯಕ್ಷ ಗಣೇಶ್ ಬಿ. ಅಳಿಯೂರು, ದರೆಗುಡ್ಡೆ ಪಂಚಾಯಿತಿ ಸದಸ್ಯರಾದ ಮುನಿರಾಜ್ ಹೆಗ್ಡೆ ಕೆ.ಸಂತೋಷ್ ಪೂಜಾರಿ, ಪಣಪಿಲ ಎಸ್‌ಡಿಎಂಸಿ ಅಧ್ಯಕ್ಷ ರವಿ ಪೂಜಾರಿ, ಶ್ರೀ ಇಟಲ ಗೆಳೆಯರ ಬಳಗದ ಅಧ್ಯಕ್ಷ ಸದಾನಂದ ಪೂಜಾರಿ ಉಯಿಲುಕ್ಕು ಮೊದಲಾದವರಿದ್ದರು. ಕಂಬಳ ಸಮಿತಿಯ ಪ್ರಧಾನ ಕಾರ್ಯದರ್ಶಿ ಕೆ.ಅಶ್ವತ್ ಪಣಪಿಲ ಸ್ವಾಗತಿಸಿದರು.