ಸಾರಾಂಶ
ಗುತ್ತಲ: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಪಂಚ ಗ್ಯಾರಂಟಿ ಯೋಜನೆಯಿಂದಾಗಿ ರಾಜ್ಯದ ಬಡ ಜನತೆಗೆ ಅತ್ಯಂತ ಅನುಕೂಲವಾಗಿದೆ. ಅಲ್ಲದೇ ಗ್ಯಾರಂಟಿ ಯೋಜನೆಗಳು ದೇಶಕ್ಕೆ ಮಾದರಿಯಾಗಿವೆ ಎಂದು ವಿಧಾನಸಭೆಯ ಉಪ ಸಭಾಧ್ಯಕ್ಷ ರುದ್ರಪ್ಪ ಲಮಾಣಿ ತಿಳಿಸಿದರು.
ಪಟ್ಟಣದ ಸಂಗನಬಸವ ಕಲ್ಯಾಣ ಮಂಟಪದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ತಾಲೂಕು ಗ್ಯಾರಂಟಿ ಯೋಜನಾ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.ಗ್ಯಾರಂಟಿ ಯೋಜನೆಯಲ್ಲಿ ಮಹಿಳೆಯರಿಗೆ ಅನುಕೂಲವಾಗಿದ್ದು, ಸ್ವಾವಲಂಬಿಗಳಾಗಿ ಬದುಕುವ ಅವಕಾಶವನ್ನು ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆಯ ಮೂಲಕ ಅವರಿಗೆ ನೀಡಿದೆ. ಶಕ್ತಿ ಯೋಜನೆಯಿಂದ ಉಚಿತವಾಗಿ ಪ್ರಯಾಣಿಸಲು ಅನುಕೂಲವಾಗಿದೆ. ಉಚಿತ ವಿದ್ಯುತ್ ಕೊಡುಗೆಯಿಂದ ಮನೆಯ ಯಜಮಾನನಿಗೂ ಸಹಾಯವಾಗಿದೆ. ಯುವನಿಧಿ ಯೋಜನೆಯಿಂದ ವಿದ್ಯಾವಂತ ನಿರುದ್ಯೋಗಿ ಯುವಕ- ಯುವತಿಯರಿಗೆ ಸಹಾಯವಾಗಿದೆ ಎಂದರು.ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ರಾಜ್ಯ ಉಪಾಧ್ಯಕ್ಷ ಎಸ್.ಆರ್. ಪಾಟೀಲ ಮಾತನಾಡಿ, ಜಿಎಸ್ಟಿ ಪಾವತಿ ಮಾಡದ ಕೆಲವರಿಗೆ ಗೃಹಲಕ್ಷ್ಮೀ ಹಣ ತಲುಪದಿರುವ ಬಗ್ಗೆ ಸಂಬಂಧಿಸಿದ ಅಧಿಕಾರಿಗಳಿಗೆ ಈಗಾಗಲೇ ಸೂಚನೆ ನೀಡಿದ್ದೇವೆ. ಜಿಎಸ್ಟಿ ಪಾವತಿ ಮಾಡದೇ ಇದ್ದರೂ ಜಿಎಸಟಿ ಪಾವತಿದಾರರು ಎಂಬುದು ಏಕೆ ಬಂದಿದೆ ಎಂದು ಪರಿಶೀಲಿಸಿ ಅವರಿಗೂ ಹಣ ಜಮೆ ಮಾಡಲಾಗುವುದೆಂದರು.ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಜಿಲ್ಲಾ ಅಧ್ಯಕ್ಷ ಎಂ.ಎಂ. ಹಿರೇಮಠ, ಜಿಪಂ ಮಾಜಿ ಅಧ್ಯಕ್ಷ ಹಾಗೂ ಕೆಸಿಸಿ ಬ್ಯಾಂಕ್ ನಿರ್ದೇಶಕ ಕೊಟ್ರೇಶಪ್ಪ ಬಸೇಗಣ್ಣಿ, ಜಿಪಂ ಮಾಜಿ ಸದಸ್ಯ ಸಿ.ಬಿ. ಕುರವತ್ತಿಗೌಡರ ಮಾತನಾಡಿದರು.ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ತಾಲೂಕು ಅಧ್ಯಕ್ಷ ಎಂ.ಎಂ. ಮೈದೂರ ಅಧ್ಯಕ್ಷತೆ ವಹಿಸಿದ್ದರು. ಪಪಂ ಅಧ್ಯಕ್ಷೆ ಮಾಳವ್ವ ಗೊರವರ, ಬಸಾಪುರ ಗ್ರಾಪಂ ಅಧ್ಯಕ್ಷ ನೀಲಪ್ಪ ಕಂಬಳಿ, ಆಶ್ರಯ ಸಮಿತಿ ಸದಸ್ಯರಾದ ಶಹಜಾನಸಾಬ ಅಗಡಿ, ವಿಜಯ ಚಲವಾದಿ, ದುರಗಪ್ಪ ಬಾರ್ಕಿ, ತಾಲೂಕು ಭೂ ನ್ಯಾಯ ಮಂಡಳಿ ಸದಸ್ಯರಾದ ಮಂಜುನಾಥ ದಪ್ಪೇರ, ಶಂಕರ ಮಕರಬ್ಬಿ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ತಾಲೂಕು ಸಮಿತಿ ಸದಸ್ಯರಾದ ರಮೇಶ ಮಾಗಳ, ಪ್ರಕಾಶಗೌಡ ಪಾಟೀಲ್, ಗುಡ್ಡನಗೌಡ ಮುದಿಗೌಡ್ರ, ಶಹಜಾನಬಿ ಉಪ್ಪುಣಸಿ, ಶಿಲ್ಪಾ ಬಡಮ್ಮನವರ, ಅಶೋಕಪ್ಪ ಅಗಿಮನಿ, ಅಬ್ದುಲ್ ಖಾದರಸಾಬ ಯರೇಶಿಮಿ ಇತರರು ಇದ್ದರು.
ಪಪಂ ಸ್ಥಾಯಿ ಸಮಿತಿ ಅಧ್ಯಕ್ಷ ಪ್ರದೀಪ ಸಾಲಗೇರಿ ಸ್ವಾಗತಿಸಿದರು. ತಾಪಂ ಇಒ ಡಾ. ಪರಮೇಶ ಹುಬ್ಬಳ್ಳಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪಪಂ ನಾಮನಿರ್ದೇಶಿತ ಸದಸ್ಯ ಪಿ.ಎನ್. ಹೇಮಗಿರಿಮಠ ನಿರೂಪಿಸಿದರು.ನಾಡಗೀತೆಗೆ ಅಗೌರವ: ಕಾರ್ಯಕ್ರಮದ ಪೂರ್ವದಲ್ಲಿ ನಾಡಗೀತೆಯನ್ನು ಅಪೂರ್ಣಗೊಳಿಸಿ ಕಾಟಾಚಾರಕ್ಕೆ ಹಾಕುವ ಮುಖಾಂತರ ನಾಡಗೀತೆಗೆ ಅಗೌರವ ತೋರಿದಂತಾಯಿತು ಎಂದು ಕಾರ್ಯಕ್ರಮದಲ್ಲಿ ಭಾಗವಹಿಸಿದವರು ಮಾತನಾಡಿದ್ದು ಕೇಳಿಬಂತು.