ಶ್ರೀ ಜಗದ್ಗುರು ಪಂಚಾಚಾರ್ಯರ ಧರ್ಮ ಜನಜಾಗೃತಿ ಯಾತ್ರೆಯ ಅಂಗವಾಗಿ ಶ್ರೀಮದ್‌ ಕಾಶಿ ಜ್ಞಾನಸಿಂಹಾಸನಾಧೀಶ್ವರ ಜಗದ್ಗುರು ಡಾ.ಚಂದ್ರಶೇಖರ ಶಿವಾಚಾರ್ಯ ಮಹಾಭಗವತ್ಪಾದರ ನೇತೃತ್ವದಲ್ಲಿ ಜೂ.20 ರಿಂದ ಜೂ.30 ರವರೆಗೆ ಹುಕ್ಕೇರಿ ಹಾಗೂ ಚಿಕ್ಕೋಡಿ ಭಾಗದ ವಿವಿಧ ಗ್ರಾಮಗಳಲ್ಲಿ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ.

ಕನ್ನಡಪ್ರಭ ವಾರ್ತೆ ಬೆಳಗಾವಿ

ಶ್ರೀ ಜಗದ್ಗುರು ಪಂಚಾಚಾರ್ಯರ ಧರ್ಮ ಜನಜಾಗೃತಿ ಯಾತ್ರೆಯ ಅಂಗವಾಗಿ ಶ್ರೀಮದ್‌ ಕಾಶಿ ಜ್ಞಾನಸಿಂಹಾಸನಾಧೀಶ್ವರ ಜಗದ್ಗುರು ಡಾ.ಚಂದ್ರಶೇಖರ ಶಿವಾಚಾರ್ಯ ಮಹಾಭಗವತ್ಪಾದರ ನೇತೃತ್ವದಲ್ಲಿ ಜೂ.20 ರಿಂದ ಜೂ.30 ರವರೆಗೆ ಹುಕ್ಕೇರಿ ಹಾಗೂ ಚಿಕ್ಕೋಡಿ ಭಾಗದ ವಿವಿಧ ಗ್ರಾಮಗಳಲ್ಲಿ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ.

ಯಾತ್ರೆಯ ಅಂಗವಾಗಿ ಇಷ್ಟಲಿಂಗ ಮಹಾಪೂಜೆ, ಪಲ್ಲಕ್ಕಿಯಲ್ಲಿ ಗ್ರಂಥೋತ್ಸವ ಹಾಗೂ ಧರ್ಮಸಭೆಗಳನ್ನು ಆಯೋಜಿಸಲಾಗಿದ್ದು, ಮಾನವ ಧರ್ಮಕ್ಕೆ ಜಯವಾಗಲಿ, ಧರ್ಮದಿಂದಲೇ ವಿಶ್ವಕ್ಕೆ ಶಾಂತಿ ಎಂಬ ಸಂದೇಶವನ್ನು ಜನರಲ್ಲಿ ಜಾಗೃತಿಗೊಳಿಸುವ ಉದ್ದೇಶ ಹೊಂದಿದೆ. ಯಾತ್ರೆಗೆ ಕಟಕೋಳ ಚಂದರಗಿ ಹಿರೇಮಠದ ಶ್ರೀಗಳು, ಹುಕ್ಕೇರಿ ಹಿರೇಮಠದ ಶ್ರೀಗಳು, ಕಣ್ಣೂರ ಗೌರಿಶಂಕರ ಮಠದ ಶ್ರೀಗಳು, ಚಿಕ್ಕೋಡಿ ಸಂಪಾದನಾ ಮಠದ ಶ್ರೀಗಳು, ಉಳ್ಳಾಗಡ್ಡಿ-ಖಾನಾಪುರ ಬ್ರಹ್ಮನ್ ಮಠದ ಶ್ರೀಗಳು, ಕೊಣ್ಣೂರ ಮರಡಿಮಠದ ಶ್ರೀಗಳು, ಪಾಶ್ಚಾಪುರ ಹಿರೇಮಠದ ಶ್ರೀಗಳು, ನೂಲ ಸುರಗೀಶ್ವರ ಮಠದ ಶ್ರೀಗಳು ಹಾಗೂ ಖಡಕಲಾಟದ ಕುಮಾರೇಶ್ವರ ವಿರಕ್ತಮಠದ ಶ್ರೀಗಳು ಸೇರಿದಂತೆ ವಿವಿಧ ಮಠಾಧೀಶರು ಭಾಗವಹಿಸಲಿದ್ದಾರೆ.ಯಾತ್ರೆಗೆ ವೀರಶೈವ ವಿದ್ಯಾಸಂಸ್ಥೆ ಚಾರಿಟೇಬಲ್ ಟ್ರಸ್ಟ್ ವಿಶೇಷ ಸಹಭಾಗಿತ್ವ ನೀಡಿದ್ದು, ಸಂಸ್ಥಾಪಕರಾದ ಗೀತಾಂಜಲಿ ಸೂರ್ಯಕಾಂತ್ ನಾಯಿಕ ಹಾಗೂ ಸೂರ್ಯಕಾಂತ್ ನಾಯಿಕ ಸಹಯೋಗ ನೀಡುತ್ತಿದ್ದಾರೆ.ಯಾತ್ರೆಯ ಪ್ರಮುಖ ಸ್ಥಳಗಳು:

ಜೂ.21 ರಂದು ನಾಗರಮುನ್ನೋಳ್ಳಿ, ಜೂ. 22ರಂದು ಕರೂರ-ಬಸವನಾಳಗಡ್ಡೆ, ಜೂ.23 ಮತ್ತು 24ರಂದು ಪಾಶ್ಚಾಪುರ, ಜೂ.25ರಂದು ನಿಪ್ಪಾಣಿ, ಜೂ.26ರಂದು ಜನವಾಡ, ಜೂ.27ರಂದು ಯರಗಟ್ಟಿ, ಜೂ.28ರಂದು ಖಡಕಲಾಟ, ಜೂ.29ರಂದು ಬೆಳವಾಡ ಹಾಗೂ ಜೂ.30 ರಂದು ಕೋಚರಿಯಲ್ಲಿ ಧರ್ಮಸಭೆಗಳು, ಪೂಜೆಗಳು ಹಾಗೂ ಗ್ರಂಥೋತ್ಸವ ಕಾರ್ಯಕ್ರಮಗಳು ನಡೆಯಲಿವೆ. ಯಾತ್ರೆಯಲ್ಲಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಧರ್ಮಜಾಗೃತಿಯ ಸಂದೇಶವನ್ನು ಸ್ವೀಕರಿಸಬೇಕು ಎಂದು ಆಯೋಜಕರು ಮನವಿ ಮಾಡಿದ್ದಾರೆ.

27 ರಂದು ಯಗರಟ್ಟಿಯಲ್ಲಿ ಜಗದ್ಗುರು ಪಂಚಾಚಾರ್ಯರ ಧರ್ಮ ಜನಜಾಗೃತಿ ಯಾತ್ರೆ

ಬೆಳಗಾವಿ: ಹುಕ್ಕೇರಿ ತಾಲೂಕಿನ ಯರಗಟ್ಟಿ ಗ್ರಾಮದಲ್ಲಿ ಜೂ.27ರಂದು ಶ್ರೀಮದ್‌ ಕಾಶೀ ಜ್ಞಾನಸಿಂಹಾಸನಾಧೀಶ್ವರ ಜಗದ್ಗುರು ಡಾ.ಚಂದ್ರಶೇಖರ ಶಿವಾಚಾರ್ಯ ಮಹಾಭಗವತ್ಪಾದರು ಅವರ ಸಾನ್ನಿಧ್ಯದಲ್ಲಿ ಅಡ್ಡಪಲ್ಲಕ್ಕಿ, ಪಲ್ಲಕ್ಕಿಯಲ್ಲಿ ಗ್ರಂಥೋತ್ಸವ ಹಾಗೂ ಶ್ರೀ ಜಗದ್ಗುರು ಪಂಚಾಚಾರ್ಯರ ಧರ್ಮ ಜನಜಾಗೃತಿ ಯಾತ್ರೆ ಭವ್ಯವಾಗಿ ನಡೆಯಲಿದೆ. ಯರಗಟ್ಟಿಯ ಶ್ರೀ ಬಸವೇಶ್ವರ ರಂಗಮಂಟಪದಲ್ಲಿ ಸಂಜೆ 5.40ಕ್ಕೆ ಆರಂಭವಾಗುವ ಈ ಕಾರ್ಯಕ್ರಮಕ್ಕೆ ವಿವಿಧ ಮಠಾಧೀಶರು, ಗಣ್ಯರು ಹಾಗೂ ಸಾವಿರಾರು ಭಕ್ತರು ಭಾಗವಹಿಸುವ ನಿರೀಕ್ಷೆಯಿದೆ. ಕಾರ್ಯಕ್ರಮಕ್ಕೆ ಹುಕ್ಕೇರಿ ಹಿರೇಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಮಾರ್ಗದರ್ಶನ ಮತ್ತು ನೇತೃತ್ವ ವಹಿಸಲಿದ್ದು, ಗುರುಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿ ಸೇರಿದಂತೆ ಹಲವು ಮಠಾಧೀಶರು ಸಾನ್ನಿಧ್ಯ ವಹಿಸಲಿದ್ದಾರೆ. ಸಿದ್ದೇಶ್ವರ ಸ್ವಾಮೀಜಿ, ಡಾ.ಪವಾಡೇಶ್ವರ ಸ್ವಾಮೀಜಿ, ವಿಶ್ವಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹಾಗೂ ಅಭಿನವ ಮಂಜುನಾಥ ಸ್ವಾಮೀಜಿ ಉಪಸ್ಥಿತರಿರಲಿದ್ದಾರೆ. ಮುಖ್ಯ ಅತಿಥಿಗಳಾಗಿ ಮಾಜಿ ಸಂಸದ ರಮೇಶ ವಿ.ಕತ್ತಿ ಮತ್ತು ವಿನಯಗೌಡ ಅ.ಪಾಟೀಲ ಭಾಗವಹಿಸಲಿದ್ದಾರೆ. ಮಾನವ ಧರ್ಮಕ್ಕೆ ಜಯವಾಗಲಿ, ಧರ್ಮದಿಂದಲೇ ವಿಶ್ವಕ್ಕೆ ಶಾಂತಿ ಎಂಬ ಸಂದೇಶದೊಂದಿಗೆ ನಡೆಯುತ್ತಿರುವ ಈ ಧರ್ಮ ಜನಜಾಗೃತಿ ಯಾತ್ರೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಧರ್ಮ ಸಂದೇಶವನ್ನು ಸ್ವೀಕರಿಸುವಂತೆ ಯರಗಟ್ಟಿ ಗ್ರಾಮದ ಸಕಲ ಸದ್ಭಕ್ತರು ಮನವಿ ಮಾಡಿದ್ದಾರೆ.