ಮಾರಣಾಂತಿಕ ರೋಗಗಳಿಗೆ ಪಂಚಗವ್ಯ ದಿವ್ಯೌಷಧಿ!

| Published : Nov 03 2025, 02:30 AM IST

ಮಾರಣಾಂತಿಕ ರೋಗಗಳಿಗೆ ಪಂಚಗವ್ಯ ದಿವ್ಯೌಷಧಿ!
Share this Article
  • FB
  • TW
  • Linkdin
  • Email

ಸಾರಾಂಶ

ಕ್ಯಾನ್ಸರ್ ರೋಗ ಎಲ್ಲರನ್ನು ಭಯಪಡಿಸುತ್ತದೆ. ಆದರೆ, ಅದು ಜೀವನದ ಭಾಗವಾಗಿರುವುದರಿಂದ ಅದನ್ನು ಎದುರಿಸಿ ಬದುಕಲು ಕಲಿಯಬೇಕು. ಕಿಮೋಥೆರಪಿಯಿಂದ ಕ್ಯಾನ್ಸರ್ ರೋಗಿಗೆ ಶೇ. 30ರಷ್ಟು ಗುಣ ಹೊಂದಿದರೆ ಶೇ.70ರಷ್ಟು ಸೈಡ್ ಎಫೆಕ್ಟ್ ಇರುತ್ತದೆ.

ಶಿರಹಟ್ಟಿ:

ಮಾರಣಾಂತಿಕ ಹಾಗೂ ದೀರ್ಘ ಕಾಲದ ರೋಗಗಳ ಪರಿಹಾರಕ್ಕೆ ಪಂಚಗವ್ಯ ದಿವ್ಯ ಔಷಧಿಯಾಗಿದೆ ಎಂದು ಬೆಂಗಳೂರಿನ ಖ್ಯಾತ ಪಂಚಗವ್ಯ ಮತ್ತು ಆರ್ಯುವೇದ ವೈದ್ಯ ಡಾ. ಡಿ.ಪಿ. ರಮೇಶ ಹೇಳಿದರು.

ತಾಲೂಕಿನ ಕಡಕೋಳ ಗ್ರಾಮದ ದೇವರಡ್ಡಿ ಅಗಸನಕೊಪ್ಪ ಅವರ ಗೋಮಂದಿರದಲ್ಲಿ ಪಂಚಗವ್ಯ ವಿದ್ಯಾಪೀಠ ಹಾಗೂ ಪಂಚಗವ್ಯ ಡಾಕ್ಟರ್ಸ್‌ ಅಸೋಸಿಯೇಶನ್ ಕಾಂಚಿಪುರಂ, ಭಾರದ್ವಾಜ ಆಶ್ರಮ, ಧರಿತ್ರಿ ಕೃಷಿ ಪರಿವಾರ ಗದಗ, ಶ್ರೀಕಪ್ಪತಮಲ್ಲೇಶ್ವರ ತೋಟಗಾರಿಕೆ ರೈತ ಉತ್ಪಾದಕ ಕಂಪನಿ ಸಹಯೋಗದಲ್ಲಿ ಜರುಗಿದ ಪಂಚಗವ್ಯ ಕ್ಯಾನ್ಸರ್ ಚಿಕಿತ್ಸಾ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.

ಕ್ಯಾನ್ಸರ್ ರೋಗ ಎಲ್ಲರನ್ನು ಭಯಪಡಿಸುತ್ತದೆ. ಆದರೆ, ಅದು ಜೀವನದ ಭಾಗವಾಗಿರುವುದರಿಂದ ಅದನ್ನು ಎದುರಿಸಿ ಬದುಕಲು ಕಲಿಯಬೇಕು. ಕಿಮೋಥೆರಪಿಯಿಂದ ಕ್ಯಾನ್ಸರ್ ರೋಗಿಗೆ ಶೇ. 30ರಷ್ಟು ಗುಣ ಹೊಂದಿದರೆ ಶೇ.70ರಷ್ಟು ಸೈಡ್ ಎಫೆಕ್ಟ್ ಇರುತ್ತದೆ. ಆದರೆ, ಆಯುರ್ವೇದದಲ್ಲಿ ಪರಿಣಾಮಕಾರಿ ಚಿಕಿತ್ಸೆ ಇರುವುದರಿಂದ ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಬೇಕಿದೆ ಎಂದು ತಿಳಿಸಿದರು.

ಹಿರಿಯ ಆಯುರ್ವೇದ ವೈದ್ಯ ಡಾ. ಎಂ.ಡಿ. ಸಾಮುದ್ರಿ ಮಾತನಾಡಿ, ಕ್ಯಾನ್ಸರ್‌ ರೋಗಕ್ಕೆ ಮೂಲದಲ್ಲಿ ಚಿಕಿತ್ಸೆ ಪಡೆದರೆ ಅದನ್ನು ಗುಣಪಡಿಸಲು ಸಾಧ್ಯ. ಕೊನೆಯ ಹಂತದಲ್ಲಿ ಚಿಕಿತ್ಸೆ ಫಲಿಸುವುದಿಲ್ಲ, ಚಿಕಿತ್ಸೆಯೊಂದಿಗೆ ದೈವಿಚ್ಛೆಯು ಇರಬೇಕು. ಕೋರೋನಾ ನಂತರ ಎಲ್ಲರೂ ತಮ್ಮ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸುತ್ತಿದ್ದಾರೆ. ಇಂದಿನ ದಿನಗಳಲ್ಲಿ ರೋಗಿಯನ್ನು ಹಿಂಡುವ ವೈದ್ಯಕೀಯ ವೆಚ್ಚ ಮತ್ತು ವ್ಯವಸ್ಥೆಗಳ ಬಗ್ಗೆ ಮಾತನಾಡಿದರೆ ನನ್ನನ್ನು ಖಳನಾಯಕನಂತೆ ಬಿಂಬಿಸುತ್ತಾರೆ ಎಂದರು.

ಈ ವೇಳೆ ಹಿರಿಯರಾದ ಎಸ್.ಸಿ. ಕೋರಿ, ಪಾರಂಪರಿಕ ವೈದ್ಯ ಚನ್ನವೀರಪ್ಪ ಕೊಂಚೀಗೇರಿ, ಗವ್ಯಸಿದ್ದ, ಡಾ. ಶಿವಲೀಲಾ ಹೊಸಮನಿ, ಡಾ. ಶಿವನಗೌಡ ಹೊಸಮನಿ, ರುದ್ರಣ್ಣ ಗುಳಗುಳಿ, ಸರೋಜನಿ ಅಗಸನಕೊಪ್ಪ, ದೇವರಡ್ಡಿ ಅಗಸನಕೊಪ್ಪ ಸೇರಿದಂತೆ ಮುಂತಾದವರು ಇದ್ದರು. ಶಿಬಿರದಲ್ಲಿ ನಾಡಿನ ವಿವಿಧ ಭಾಗಗಳಿಂದ ಆಗಮಿಸಿದ್ದ 30ಕ್ಕೂ ಹೆಚ್ಚು ಕ್ಯಾನ್ಸರ್ ರೋಗಿಗಳಿಗೆ ಚಿಕಿತ್ಸೆ ನೀಡಲಾಯಿತು. ಈರಯ್ಯ ಪಾಟೀಲ ನಿರೂಪಿಸಿದರು.