ಮೂಲ್ಕಿ: ಗೋ ಮಾತೆಯಲ್ಲಿ ದೇವರನ್ನು ಕಾಣುವ ಸಮಾಜ ನಮ್ಮದಾಗಿದ್ದು, ಸನಾತನ ಧರ್ಮದ ಮೂಲ ತತ್ವದಂತೆ ಗೋ ಮಾತೆಯ ಸೇವೆ ಎಲ್ಲ ಕಡೆಗಳಲ್ಲಿ ನಡೆಯಬೇಕು ಎಂದು ಕಿನ್ನಿಗೋಳಿ ನಾಲದೆಯ ಪಾಂಚಜನ್ಯ ಗೋ ಶಾಲೆಯ ಟ್ರಸ್ಟ್‌ ಮುಖ್ಯಸ್ಥ ಮುರಳೀಧರ ಹೇಳಿದರು.

ಕಿನ್ನಿಗೋಳಿ ಸಮೀಪದ ನಾಲದೆ ಪಾಂಚಜನ್ಯ ಗೋಶಾಲೆ ಟ್ರಸ್ಟ್‌ ಆಶ್ರಯದಲ್ಲಿ ಅಧಿಕ ಮಾಸದ ಪ್ರಯುಕ್ತ ಪರ್ವ ಕಾಲದಲ್ಲಿ ನಡೆದ ಗೋವಿಗೆ ಗೋಗ್ರಾಸ ಸೇವೆ ಕಾರ್ಯಕ್ರಮದಲ್ಲಿ ಹೇಳಿದರು.

ಧಾರ್ಮಿಕ ಮುಖಂಡ ಪಾರ್ಥಸಾರಥಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಮಾಧವ ಶೆಟ್ಟಿಗಾರ್‌ ಕೆರೆಕಾಡು, ಉಮೇಶ್‌ ಪಂಜ ಮತ್ತಿತರರು ಉಪಸ್ಥಿತರಿದ್ದರು. ಟ್ರಸ್ಟ್‌ ಕಾರ್ಯದರ್ಶಿ ಅರುಣ್‌ ಕುಮಾರ್‌ ಸ್ವಾಗತಿಸಿದರು. ಸಂಘಟಕ ಶ್ರೀಧರ್‌ ಕಾರ್ಯಕ್ರಮ ಸಂಯೋಜಿಸಿದರು. ನೂರಾರು ಮಂದಿ ಭಾಗವಹಿಸಿದ್ದು, ಸಂಜೆ ತನಕ ಗೋಗ್ರಾಸ ಸೇವೆ ನಡೆಯಿತು.