ಕೂಡಲಸಂಗಮ ರೀತಿ ಕಿತ್ತೂರಲ್ಲಿಪಂಚಮಸಾಲಿ ಮಠ: ಯತ್ನಾಳ್

| Published : Sep 29 2025, 01:04 AM IST / Updated: Sep 29 2025, 01:05 AM IST

ಕೂಡಲಸಂಗಮ ರೀತಿ ಕಿತ್ತೂರಲ್ಲಿಪಂಚಮಸಾಲಿ ಮಠ: ಯತ್ನಾಳ್
Share this Article
  • FB
  • TW
  • Linkdin
  • Email

ಸಾರಾಂಶ

ಟ್ರಸ್ಟ್ ಮತ್ತು ಮಠಗಳು ಬೇರೆ ಬೇರೆಯಾಗಿದ್ದು, ಮಠಾಧೀಶರನ್ನು ಉಚ್ಚಾಟಿಸಲು ಟ್ರಸ್ಟಿಗೆ ಅಧಿಕಾರವಿಲ್ಲ. ಬಸವಜಯ ಮೃತ್ಯುಂಜಯ ಸ್ವಾಮೀಜಿ ಬೆಂಬಲಕ್ಕೆ ಪಂಚಮಸಾಲಿ ಸಮಾಜವಿದೆ. ಶ್ರೀಗಳು ಯಾವುದಕ್ಕೂ ಧೃತಿಗೆಡಬಾರದು ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ್‌ ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ ರಾಮದುರ್ಗ

ಟ್ರಸ್ಟ್ ಮತ್ತು ಮಠಗಳು ಬೇರೆ ಬೇರೆಯಾಗಿದ್ದು, ಮಠಾಧೀಶರನ್ನು ಉಚ್ಚಾಟಿಸಲು ಟ್ರಸ್ಟಿಗೆ ಅಧಿಕಾರವಿಲ್ಲ. ಬಸವಜಯ ಮೃತ್ಯುಂಜಯ ಸ್ವಾಮೀಜಿ ಬೆಂಬಲಕ್ಕೆ ಪಂಚಮಸಾಲಿ ಸಮಾಜವಿದೆ. ಶ್ರೀಗಳು ಯಾವುದಕ್ಕೂ ಧೃತಿಗೆಡಬಾರದು ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ್‌ ಹೇಳಿದ್ದಾರೆ.

ತಾಲೂಕಿನ ಕುನ್ನಾಳ ಗ್ರಾಮದಲ್ಲಿ ಭಾನುವಾರ ಕಿತ್ತೂರು ಚನ್ನಮ್ಮನ ಅಶ್ವಾರೂಢ ಮೂರ್ತಿ ಲೋಕಾರ್ಪಣೆಗೊಳಿಸಿ ಮಾತನಾಡಿ, ಕೂಡಲಸಂಗಮ ಪೀಠದ ಮಾದರಿಯಲ್ಲಿ ಕಿತ್ತೂರು ಪ್ರದೇಶದಲ್ಲಿ 4 ಎಕರೆ ಜಮೀನು ಖರೀದಿಸಿ ₹10 ಕೋಟಿ ವೆಚ್ಚದಲ್ಲಿ ಶಾಖಾಮಠ ಆರಂಭಿಸಲಾಗುವುದು. ಶ್ರೀಗಳ ನೇತೃತ್ವದಲ್ಲಿ ಶಾಖಾಮಠ ಆರಂಭಿಸಿ ಅಲ್ಲಿ ನಿರಂತರ ದಾಸೋಹ ಜೊತೆಗೆ ಸಾವಿರಾರು ವಿದ್ಯಾರ್ಥಿಗಳ ಪ್ರಸಾದ ನಿಲಯ ಸ್ಥಾಪಿಸಲಾಗುವುದು. ಪಂಚಮಸಾಲಿ ಸಮಾಜ ಅಲ್ಲದೆ ಇತರೆ ಸಮಾಜದ ವಿದ್ಯಾರ್ಥಿಗಳಿಗೂ ಸ್ಪರ್ಧಾತ್ಮಕ ಪರೀಕ್ಷೆಗೆ ಅವಕಾಶ ನೀಡಲಾಗುವುದು. ಒಳ್ಳೆಯ ಕೆಲಸಕ್ಕೆ ಸಮಾಜದವರು ದಾನ ಮಾಡಲು ಮುಂದಾಗಲಿದ್ದಾರೆ. ಶ್ರೀಗಳು ಯಾವುದಕ್ಕೂ ಹಿಂಜರಿಯಬಾರದು ಎಂದು ಹೇಳಿದರು.

ಸಮಾಜಕ್ಕೆ ಮೋಸ ಮಾಡಿದವರು, ಜೋಳಿಗೆಯ ಹಣ ನುಂಗಿದವರಿಗೆ ಎಂದಿಗೂ ಒಳ್ಳೆಯದು ಆಗಲ್ಲ. ಕೇವಲ 2 ಕುಟುಂಬಗಳ ಸದಸ್ಯರನ್ನು ಒಳಗೊಂಡಿರುವ ಪಂಚಮಸಾಲಿ ಟ್ರಸ್ಟ್‌ನಲ್ಲಿ ಎಲ್ಲವೂ ಸರಿ ಇಲ್ಲ. ಶ್ರೀಗಳನ್ನು ಮಠದಿಂದ ಉಚ್ಚಾಟಿಸಲು ಟ್ರಸ್ಟಿಗೆ ಅಧಿಕಾರವಿಲ್ಲ. ರಾಜ್ಯ ಸರ್ಕಾರ ನಡೆಸುತ್ತಿರುವ ಜಾತಿ ಗಣತಿಯಲ್ಲಿ ಪಂಚಮಸಾಲಿಗಳು ಲಿಂಗಾಯತ ಎಂದು ಬರೆಯಿಸದೇ ಹಿಂದೂ ಎಂದು ಬರೆಸಬೇಕು. ಒಂದು ವೇಳೆ ಲಿಂಗಾಯತ ಎಂದು ಬರೆಯಿಸಿದರೆ ಸಂವಿಧಾನದಲ್ಲಿ ಮಾನ್ಯತೆ ಇಲ್ಲ. ಅದಕ್ಕಾಗಿ ಎಲ್ಲರೂ ಹಿಂದೂ ಎಂದು ಬರೆಯಿಸಬೇಕು ಎಂದು ಹೇಳಿದರು.