ಯತ್ನಾಳ ಪರ ಪಂಚಮಸಾಲಿ ಸಮಾಜ ನಿಲ್ಲಲಿದೆ

| Published : Mar 28 2025, 12:33 AM IST

ಯತ್ನಾಳ ಪರ ಪಂಚಮಸಾಲಿ ಸಮಾಜ ನಿಲ್ಲಲಿದೆ
Share this Article
  • FB
  • TW
  • Linkdin
  • Email

ಸಾರಾಂಶ

ಯತ್ನಾಳ ಅವರು ನಿಷ್ಠುರತೆ ಮತ್ತು ನೇರವಾಗಿ ಮಾತನಾಡಿ ಸತ್ಯಕ್ಕೆ ಹತ್ತಿರವಾದವರು. ಅಂತಹವರನ್ನು ಬಿಜೆಪಿಯಿಂದ ಉಚ್ಚಾಟಿಸಿರುವುದು ದೊಡ್ಡ ಆಘಾತವಾಗಿದೆ. ಇಂತಹ ಘಟನೆಯನ್ನು ಸಮಾಜ ಎಂದಿಗೂ ಸಹಿಸುವುದಿಲ್ಲ. ಸಮಾಜ ಯಾವಾಗಲೂ ಯತ್ನಾಳ ಜತೆಗೆ ಇರುತ್ತದೆ.

ಕುಷ್ಟಗಿ:

ಪಂಚಮಸಾಲಿ ಸಮುದಾಯದ ಪ್ರಬಲ ನಾಯಕ, ಹಿಂದುತ್ವ ಪ್ರತಿಪಾದಕ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು ಬಿಜೆಪಿಯಿಂದ ಉಚ್ಚಾಟಿಸಿರುವುದನ್ನು ವೀರಶೈವ ಪಂಚಮಸಾಲಿ ಲಿಂಗಾಯತ ಸಮುದಾಯದ ಮುಖಂಡರು ಖಂಡಿಸಿದ್ದಾರೆ. ಪಟ್ಟಣದ ಪಂಚಮಸಾಲಿ ಸಮುದಾಯ ಭವನದಲ್ಲಿ ಸಮಾಜದ ಮುಖಂಡರು ಸಭೆ ನಡೆಸಿ, ಎಲ್ಲ ಸಮುದಾಯಗಳ ಪರವಾಗಿದ್ದ ಯತ್ನಾಳ ಅವರನ್ನು ಉಚ್ಚಾಟಿಸಿರುವುದು ಸಮಾಜದ ಜನರಿಗೆ ನೋವು ತರಿಸಿದೆ ಎಂದರು.

ಸಮಾಜದ ಅಧ್ಯಕ್ಷ ದೇವೇಂದ್ರಪ್ಪ ಬಳೂಟಗಿ ಮಾತನಾಡಿ, ಯತ್ನಾಳ ಅವರು ನಿಷ್ಠುರತೆ ಮತ್ತು ನೇರವಾಗಿ ಮಾತನಾಡಿ ಸತ್ಯಕ್ಕೆ ಹತ್ತಿರವಾದವರು. ಅಂತಹವರನ್ನು ಬಿಜೆಪಿಯಿಂದ ಉಚ್ಚಾಟಿಸಿರುವುದು ದೊಡ್ಡ ಆಘಾತವಾಗಿದೆ. ಇಂತಹ ಘಟನೆಯನ್ನು ಸಮಾಜ ಎಂದಿಗೂ ಸಹಿಸುವುದಿಲ್ಲ. ಸಮಾಜ ಯಾವಾಗಲೂ ಯತ್ನಾಳ ಜತೆಗೆ ಇರುತ್ತದೆ ಎಂದು ಹೇಳಿದರು.

ಮುಖಂಡ ಬಸವರಾಜ ಹಳ್ಳೂರ ಮಾತನಾಡಿ, ಯತ್ನಾಳ ಧೀಮಂತ ನಾಯಕರಾಗಿದ್ದು ಹಿಂದು ಹೋರಾಟಗಾರರ ಬಗ್ಗೆ ಬಿಜೆಪಿ ನಾಯಕರು ಈ ರೀತಿ ನಡೆದುಕೊಳ್ಳಬಾರದಿತ್ತು. ಇದರಿಂದ ಪಕ್ಷಕ್ಕೆ ದೊಡ್ಡ ನಷ್ಟವಾಗಲಿದೆ ಎಂದರು.

ಈ ವೇಳೆ ಸಮಾಜದ ಮುಖಂಡರಾದ ನಿಂಗಪ್ಪ ಮಂಗಳೂರು, ಈರಣ್ಣ ಬಳಿಗಾರ, ವೀರೇಶ ತುರಕಾಣಿ, ಶಂಕರಗೌಡ್ರು, ಬಸವರಾಜ ಹೊರಪ್ಯಾಟಿ, ಶಿವಪ್ಪ ಗೆಜ್ಜಲಗಟ್ಟಿ, ಸಿದ್ದರಾಮಪ್ಪ ಕೌದಿ, ಚನ್ನಬಸಪ್ಪ ನಾಯಕವಾಡಿ, ಬಸವರಾಜ ಬುಡಕುಂಟಿ ಹಾಗೂ ಸಂಗನಗೌಡ ಪಾಟೀಲ್, ಸಂಗಮೇಶ ಕಂದಗಲ್, ಸುರೇಶ ಕೌದಿ, ಶಿವು ಸೂಡಿ, ಸತೀಶ ಬ್ಯಾಳಿ ಇದ್ದರು.