ಸಾರಾಂಶ
ಕೂಡಲ ಸಂಗಮ ಪಂಚಮಸಾಲಿ ಗುರುಪೀಠದ ಬಸವ ಜಯಮೃತ್ಯುಂಜಯಸ್ವಾಮಿಗಳಿಗೆ ಸಾಮಾಜಿಕ ಜಾಲತಾಣದಲ್ಲಿ ತೇಜೋವಧೆ ಮಾಡಿ ಹಾಗೂ ಸ್ವಾಮಿಗಳ ಕೊಲೆಗೆ ಪಿತೂರಿ ನಡೆಸಿದ ವ್ಯಕ್ತಿಯನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಪಂಚಮಸಾಲಿ ಸಮಾಜ ಮುಖಂಡರು ಠಾಣಾಧಿಕಾರಿ ಎಂ.ಡಿ ಫೈಜುಲ್ಲಾ ಅವರಿಗೆ ಶುಕ್ರವಾರ ಮನವಿ ಸಲ್ಲಿಸಿದರು.
ಕನಕಗಿರಿ: ಕೂಡಲ ಸಂಗಮ ಪಂಚಮಸಾಲಿ ಗುರುಪೀಠದ ಬಸವ ಜಯಮೃತ್ಯುಂಜಯಸ್ವಾಮಿಗಳಿಗೆ ಸಾಮಾಜಿಕ ಜಾಲತಾಣದಲ್ಲಿ ತೇಜೋವಧೆ ಮಾಡಿ ಹಾಗೂ ಸ್ವಾಮಿಗಳ ಕೊಲೆಗೆ ಪಿತೂರಿ ನಡೆಸಿದ ವ್ಯಕ್ತಿಯನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಪಂಚಮಸಾಲಿ ಸಮಾಜ ಮುಖಂಡರು ಠಾಣಾಧಿಕಾರಿ ಎಂ.ಡಿ ಫೈಜುಲ್ಲಾ ಅವರಿಗೆ ಶುಕ್ರವಾರ ಮನವಿ ಸಲ್ಲಿಸಿದರು.
ಸಮಾಜದ ಮುಖಂಡ ಚನ್ನಬಸವ ತೆಗ್ಗಿನಮನಿ ಮಾತನಾಡಿ, ಜಯಮೃತ್ಯುಂಜಯ ಸ್ವಾಮೀಜಿ ಪಂಚಮಸಾಲಿ ಸಮಾಜದ ಏಳಿಗೆಗಾಗಿ ಶ್ರಮಿಸುತ್ತಿದ್ದಾರೆ. ಪಂಚಮಸಾಲಿ ಸಮಾಜಕ್ಕೆ ೨ಎ ಮೀಸಲಾತಿ ಒತ್ತಾಯಿಸಿ ರಾಜ್ಯಾದ್ಯಂತ ಹೋರಾಟ ನಡೆಸಿದ್ದಾರೆ. ಸಂವಿಧಾನಾತ್ಮಕವಾಗಿ ೨ಎ ಮೀಸಲಾತಿ ಹಕ್ಕನ್ನು ಪಡೆಯಲು ಸ್ವಾಮಿಗಳು ನಿರಂತರ ಹೋರಾಟ ಮಾಡುತ್ತಿರುವುದನ್ನು ಹತ್ತಿಕ್ಕುವ ಉದ್ದೇಶದಿಂದ ಸ್ವಾಮಿಗಳ ಮೇಲೆ ಸಾಮಾಜಿಕ ಜಾಲತಾಣದಲ್ಲಿ ವ್ಯಕ್ತಿಯೋರ್ವ ತೇಜೋವಧೆ ಮಾಡಿ ನಿಂದಿಸಿದ್ದಾನೆ. ಇದು ರಾಜ್ಯದ ಪಂಚಮಸಾಲಿ ಸಮಾಜದ ಧಾರ್ಮಿಕ ಭಾವನೆಗೆ ದಕ್ಕೆ ತಂದಿದ್ದು, ಸ್ವಾಮಿಗಳ ಕೊಲೆಗೆ ಸಂಚು ರೂಪಿಸಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಆ ವ್ಯಕ್ತಿಯನ್ನು ಕೂಡಲೆ ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು.ಪಪಂ ಸದಸ್ಯ ಶರಣೇಗೌಡ ಪಾಟೀಲ್, ತಾಪಂ ಕೆಡಿಪಿ ಸದಸ್ಯ ಶರಣಪ್ಪ ತೆಗ್ಗಿನಮನಿ, ಪ್ರಮುಖರಾದ ಶೇಖರಪ್ಪ ಭಾವಿಕಟ್ಟಿ, ರೇಣುಕಪ್ಪ ತೆಗ್ಗಿನಮನಿ, ಬಸವರಾಜ ತಿಪ್ಪನಾಳ, ಅಮರೇಶ ಓಬಳಬಂಡಿ, ವೀರನಗೌಡ ಪಾಟೀಲ್, ಅಮರೇಶ ಭಾವಿಕಟ್ಟಿ, ನಾಗೇಶ ರೊಟ್ಟಿ, ಪ್ರಶಾಂತ ತೆಗ್ಗಿನಮನಿ, ನಾಗರಾಜ ತೆಗ್ಗಿನಮನಿ, ಮಹಾಂತೇಶ ಕೊಡ್ಲಿ, ಬಸವರಾಜ ಕೋರಿ, ರಾಜೇಶ ಚಿನ್ನೂರು, ಶರಣಪ್ಪ ಬಜಾರದ ಸೇರಿದಂತೆ ಒಬಳಬಂಡಿ, ಸುಳೆಕಲ್, ಬೆನಕನಾಳ, ಕಲಕೇರಿ ಗ್ರಾಮದ ಪಂಚಮಸಾಲಿ ಸಮಾಜದವರು ಇದ್ದರು.