ಸಾವಿರಾರು ಶ್ರಾವಕ-ಶ್ರಾವಕಿಯರಿಂದ ಪಂಚಾಮೃತ ಅಭಿಷೇಕ

| Published : Oct 03 2025, 01:07 AM IST

ಸಾವಿರಾರು ಶ್ರಾವಕ-ಶ್ರಾವಕಿಯರಿಂದ ಪಂಚಾಮೃತ ಅಭಿಷೇಕ
Share this Article
  • FB
  • TW
  • Linkdin
  • Email

ಸಾರಾಂಶ

ಉಗಾರ ಬುದ್ರಕ ಗ್ರಾಮ ದೇವತೆ ಶ್ರೀ ಪದ್ಮಾವತಿ ದೇವಿಯ ಸದ್ಭಕ್ತರು ಯಾವುದೆ ಜಾತಿ, ಧರ್ಮ, ಮತ ಮರೆತು ಒಂದುಗೂಡಿ ಆಚರಿಸಿದರು

ಕನ್ನಡಪ್ರಭ ವಾರ್ತೆ ಕಾಗವಾಡ

ಜೈನರ ಪವಿತ್ರ ಸ್ಥಾನ ತಾಲೂಕಿನ ಉಗಾರ ಖುರ್ದ ಗ್ರಾಮದ ಪದ್ಮಾವತಿ ದೇವಿಗೆ ಸಾವಿರಾರು ಶ್ರಾವಕ, ಶ್ರಾವಕಿಯರ ಸಮ್ಮುಖದಲ್ಲಿ ಬುಧವಾರ ಅಷ್ಟ ದ್ರವ್ಯಗಳಿಂದ, ಒಂದು ಸಾವಿರ ಲೀಟರ್ ಹಾಲು, ಮೊಸರು, ತುಪ್ಪ, ಎರಡೂ ಸಾವಿರ ಶ್ರೀ ಫಳಗಳಿಂದ ಪದ್ಮಾವತಿ ದೇವಿಯ ಮೂರ್ತಿಗೆ ಕೃಷ್ಣಾ ನದಿಯಲ್ಲಿ ಅಭಿಷೇಕ ಮಾಡಿ ನದಿಗೆ ಅರ್ಪನೆ ಮಾಡಲಾಯಿತು.

ವಿಜಯದಶಮಿಯ ಹಬ್ಬದ ನಿಮಿತ್ತ ಬೆಳಗ್ಗೆ ಮಂದಿರದ ಅರ್ಚಕರಾದ ಅಶೋಕ ಉಪಾದ್ಯೆ, ಮಂದಿರದ ಧರ್ಮಾಧಿಕಾರಿ ಶೀತಲಗೌಡ ಪಾಟೀಲ, ದಂಪತಿ ವಾದ್ಯ-ವೃಂದದೊಂದಿಗೆ ಕೃಷ್ಣಾ ನದಿಗೆ ತೆರಳಿ ಮಧ್ಯಾಹ್ನ ನದಿಗೆ ಪೂಜೆ ಸಲ್ಲಿಸಿದರು. ಅರ್ಚಕರಾದ ಅಶೋಕ ಉಪಾದ್ಯ, ಚೇತನ ಉಪಾದ್ಯ, ಸಂಪತ ಉಪಾದ್ಯ ಪಾಲ್ಗೊಂಡಿದ್ದರು.

ನವರಾತ್ರಿಯ 9 ದಿನಗಳ ಕಾಲ ಪದ್ಮಾವತಿ ದೇವಿಯ ಮಂದಿರಕ್ಕೆ ವಿದ್ಯುತ್ ದೀಪದ ಅಲಂಕಾರ, ಮಾಡಿ 40 ಅಖಂಡ ತುಪ್ಪದ ಜ್ಯೋತಿಗಳನ್ನು ಹಚ್ಚಿ, ಮುಂಜಾನೆ ಪಂಚಾಮೃತ ಅಭಿಷೇಕ, ಮಹಾಶಾಂತಿ ಮಂತ್ರ, ದೇವಿಯ ಅಲಂಕಾರ, ಅಷ್ಟಕ ಸ್ತೋತ್ರ, ಕುಂಕುಮಾರ್ಚನೆ, ಸಾಯಂಕಾಲ ಅಭಿಷೇಕ ಹಾಗೂ ಪ್ರತಿನಿತ್ಯ ರಾತ್ರಿ 7 ಗಂಟೆಗೆ ಆದರ್ಶ ಮಹಿಳಾ ಮಂಡಳದ ವತಿಯಿಂದ ದಾಂಡಿಯಾ ಹಾಗೂ ಗರ್ಭಾ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

ಮುತ್ತಿನ ಮಳೆ ಆಗಮನ:

ಭಕ್ತಾಧಿಗಳು ಪವಿತ್ರ ಕೃಷ್ಣೆಯಲ್ಲಿ ಮಿಂದು ಪದ್ಮಾವತಿ ದೇವಿಯ ಪೂಜೆ ನೆರವೇರಿಸುತ್ತಿದ್ದಂತೆ ಮೇಘರಾಜ 5 ಮಳೆಯ ಹನಿಗಳನ್ನಾದರೂ ಸುರಿಸಿ ಭಕ್ತರ ಭಕ್ತಿ ಸಾಕ್ಷಿಕರಿಸುತ್ತಾನೆ. ಈ ಮಳೆ ಹನಿಗೆ ಮುತ್ತಿನ ಮಳೆಯಂದೇ ಕರೆಯಲ್ಪಡುತ್ತಾರೆ. ನೂರಾರು ವರ್ಷಗಳಿಂದ ಇದು ನಡೆದುಕೊಂಡು ಬಂದ ಸಂಪ್ರದಾಯ ಹಾಗೂ ದೇವಿಯ ಮಹಾತ್ಮೆ. ಕಳೆದ ಅನೇಕ ವರ್ಷಗಳಿಂದ ಪವಾಡ ನಡೆಯುತ್ತಾ ಬಂದಿದ್ದೆ ಭಾನುವಾರವು ಸಹ ಪೂಜೆ ಸಲ್ಲಿಸುವ ಸಂದರ್ಭದಲ್ಲಿ ವರುಣನ ಆಗಮನಾಯಿತು, ಅಲ್ಲಿ ನೆರದಿದ್ದ ಸದ್ಭಕ್ತರು ಪದ್ಮಾವತಿ ಮಾತಾಕೀ ಜೈ ಎಂದು ಜೈ ಘೋಷಗಳನ್ನು ಕೂಗುತ್ತ ಭಕ್ತಿಯ ಪರಾಕಾಷ್ಟೆ ಮೆರೆದರು.

ಭಾವೈಕ್ಯತೆ ಮೆರೆದ ಗ್ರಾಮ:

ಉಗಾರ ಬುದ್ರಕ ಗ್ರಾಮ ದೇವತೆ ಶ್ರೀ ಪದ್ಮಾವತಿ ದೇವಿಯ ಸದ್ಭಕ್ತರು ಯಾವುದೆ ಜಾತಿ, ಧರ್ಮ, ಮತ ಮರೆತು ಒಂದುಗೂಡಿ ಆಚರಿಸಿದರು. ಸಂಘ ಸಂಸ್ಥೆಗಳ ಪ್ರಮುಖರು ಒಂದುಗೂಡಿ ಗ್ರಾಮ ಸ್ವಚ್ಚಗೊಳಿಸಿದ್ದರು. ಎಲ್ಲ ವರ್ಗದ ಭಕ್ತರು ದೇವಿಯ ಮೆರವಣಿಗೆಯಲ್ಲಿ ಭಾಗವಹಿಸಿ ಭಾವೈಕ್ಯತೆ ಮೆರೆದರು. ಮೆರವಣಿಗೆಯಲ್ಲಿ ಸ್ಥಳೀಯ ಪದ್ಮಭೂಷಣ, ಪದ್ಮಾವತಿ, ಪಾರ್ಶ್ವಪದ್ಮಾವತಿ, ಜಾಂಜ್ ಪತಕದಲ್ಲಿ ನೂರಾರು ಯುವಕರು ಪಾಲ್ಗೊಂಡಿದ್ದರು. ಅಲ್ಲದೆ ವಿದ್ಯಾರ್ಥಿಗಳು ಲೆಜಿಮ್ ಪ್ರದರ್ಶಿಸಿದರು.

ಈ ವೇಳೆ ಮಂದಿರದ ಧರ್ಮಾಧಿಕಾರಿ ಶೀತಲಗೌಡ ಪಾಟೀಲ, ವೃಷಭಗೌಡ ಪಾಟೀಲ ಅಣ್ಣಾಗೌಡ ಪಾಟೀಲ, ರಾಜವೀರ ಪಾಟೀಲ,ಕುಟುಂಬ ವರ್ಗಮುಖಂಡರಾದ ಅಣ್ಣಾಸಾಬ ನಂದಗಾಂವೆ, ಪ್ರಮೋದ ಹೊಸುರೆ, ಪ್ರಶಾಂತ ವಸವಾಡೆ, ಶ್ರೀ ಪದ್ಮಾವತಿ ಸೇವಾ ಸಮೀತಿಎಲ್ಲ ಸದಸ್ಯರು ಸೇರಿದಂತೆ ಕರ್ನಾಟಕ ಹಾಗೂ ಮಹಾರಾಷ್ಟ ರಾಜ್ಯಗಳಿಂದ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದರು.