ಜಾತ್ರೆಯಲ್ಲಿ ಸಾಮಾಜಿಕ ಕಾಳಜಿ ಮೆರೆದ ಕೋಟದ ಪಂಚವರ್ಣ ಸಂಘಟನೆ!

| Published : Feb 16 2025, 01:46 AM IST

ಜಾತ್ರೆಯಲ್ಲಿ ಸಾಮಾಜಿಕ ಕಾಳಜಿ ಮೆರೆದ ಕೋಟದ ಪಂಚವರ್ಣ ಸಂಘಟನೆ!
Share this Article
  • FB
  • TW
  • Linkdin
  • Email

ಸಾರಾಂಶ

ಪ್ಲಾಸ್ಟಿಕ್ ಬಾಟಲ್ ಮತ್ತು ಕಸಗಳನ್ನು ಕೋಟ ಪಂಚವರ್ಣ ಯುವಕ ಮಂಡಲದ ಮಾಜಿ ಅಧ್ಯಕ್ಷ ಅಜಿತ್ ಆಚಾರ್ ನೇತೃತ್ವದಲ್ಲಿ ಸದಸ್ಯರು ರಥೋತ್ಸವ ನಡೆದ ಸುಮಾರು ಅರ್ಧ ಕಿ.ಮೀ. ರಸ್ತೆಯಲ್ಲಿ ಸ್ವಯಂಸೇವಕರಾಗಿ ತೆರವುಗೊಳಿಸಿದರು. ಈ ಕಾರ್ಯಕ್ಕೆ ಸಾಲಿಗ್ರಾಮ ದೇಗುಲ ಟ್ರಸ್ಟಿ ಕೆ. ಅನಂತಪದ್ಮನಾಭ ಐತಾಳ್ ಹಾಗೂ ಹಿರೇಮಹಾಲಿಂಗೇಶ್ವರ ದೇಗುದ ಮಾಜಿ ಟ್ರಸ್ಟಿ ವಿಜಯ್ ಕುಮಾರ್ ಶೆಟ್ಟಿ, ರೈತಧ್ವನಿ ಸಂಘದ ಅಧ್ಯಕ್ಷ ಎಂ. ಜಯರಾಮ ಶೆಟ್ಟಿ ಸಾಥ್ ನೀಡಿದರು.

ರಥೋತ್ಸವದ ಮಾರ್ಗದಲ್ಲಿ ಸ್ವಚ್ಛತೆಗೆ ಸಾರ್ವಜನಿಕರಿಂದ ವ್ಯಾಪಕ ಪ್ರಶಂಸೆ

ಕನ್ನಡಪ್ರಭ ವಾರ್ತೆ ಕೋಟ

ಇಲ್ಲಿನ ಕೋಟ ಮಹತೋಭಾರ ಶ್ರೀ ಹಿರೇಮಹಾಲಿಂಗೇಶ್ವರ ದೇಗುಲದ ವಾರ್ಷಿಕ ಜಾತ್ರೋತ್ಸವದ ಸಂದರ್ಭದಲ್ಲಿ ಭವ್ಯ ರಥೋತ್ಸವ ಕಾರ್ಯಕ್ರಮ ವೈಭವಪೂರ್ಣವಾಗಿ ಜರುಗಿತು. ವಿವಿಧ ಭಜನಾ ತಂಡಗಳು, ವೈವಿಧ್ಯಮಯ ಟ್ಯಾಬ್ಲೋಗಳು ರಥೋತ್ಸವಕ್ಕೆ ವಿಶೇಷ ಆಕರ್ಷಣೆ ನೀಡಿದ್ದವು.ಉತ್ಸವದಂಗವಾಗಿ ಸ್ವಯಂ ಸೇವಕರ ಮೂಲಕ ಭಜನಾ ತಂಡಗಳಿಗೆ, ಕಲಾವಿದರಿಗೆ, ನೆರದಿದ್ದ ಭಕ್ತರಿಗೆ ಕುಡಿಯುವ ನೀರಿನ ಬಾಟಲಿಗಳ ವ್ಯವಸ್ಥೆ ಕಲ್ಪಿಸಲಾಗಿತ್ತು. ಸಹಜವಾಗಿಯೇ ಸಾವಿರಾರು ಸಂಖ್ಯೆಯಲ್ಲಿ ಈ ನೀರಿನ ಬಾಟಲುಗಳು ಮತ್ತು ಪ್ಲಾಸ್ಟಿಕ್ ತ್ಯಾಜ್ಯಗಳು ಅಲ್ಲಲ್ಲಿ ಎಸೆಯಲಾಗಿತ್ತು.ಪ್ಲಾಸ್ಟಿಕ್ ಬಾಟಲ್ ಮತ್ತು ಕಸಗಳನ್ನು ಕೋಟ ಪಂಚವರ್ಣ ಯುವಕ ಮಂಡಲದ ಮಾಜಿ ಅಧ್ಯಕ್ಷ ಅಜಿತ್ ಆಚಾರ್ ನೇತೃತ್ವದಲ್ಲಿ ಸದಸ್ಯರು ರಥೋತ್ಸವ ನಡೆದ ಸುಮಾರು ಅರ್ಧ ಕಿ.ಮೀ. ರಸ್ತೆಯಲ್ಲಿ ಸ್ವಯಂಸೇವಕರಾಗಿ ತೆರವುಗೊಳಿಸಿದರು. ಈ ಕಾರ್ಯಕ್ಕೆ ಸಾಲಿಗ್ರಾಮ ದೇಗುಲ ಟ್ರಸ್ಟಿ ಕೆ. ಅನಂತಪದ್ಮನಾಭ ಐತಾಳ್ ಹಾಗೂ ಹಿರೇಮಹಾಲಿಂಗೇಶ್ವರ ದೇಗುದ ಮಾಜಿ ಟ್ರಸ್ಟಿ ವಿಜಯ್ ಕುಮಾರ್ ಶೆಟ್ಟಿ, ರೈತಧ್ವನಿ ಸಂಘದ ಅಧ್ಯಕ್ಷ ಎಂ. ಜಯರಾಮ ಶೆಟ್ಟಿ ಸಾಥ್ ನೀಡಿದರು.ಈ ಸಾಮಾಜಿಕ ಕಾಳಜಿಯ ಕಾರ್ಯ ಭಕ್ತರ ಮತ್ತು ಸಾರ್ವಜನಿಕರ ವ್ಯಾಪಕ ಪ್ರಶಂಸೆಗೆ ವ್ಯಕ್ತವಾಯಿತಲ್ಲದೆ, ಸಾಮಾಜಿಕ ಜಾಲತಾಣದಲ್ಲಿ ಅಭಿನಂದನೆಗಳೊಂದಿಗೆ ಈ ಫೋಟೋಗಳು ಪ್ರಸಾರವಾದವು. ಸಂಘಟನೆಯು ಕಳೆದ ಏಳು ವರ್ಷಗಳಿಂದ ಪ್ರತಿ ಭಾನುವಾರ ಪರಿಸರ ಸ್ವಚ್ಛತಾ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಇದೀಗ ೨೪೧ನೇ ಭಾನುವಾರದ ವರೆಗೆ ಮುಂದುವರಿದು ಹೊಸ ದಾಖಲೆ ಬರೆದಿದೆ.