ಸಾರಾಂಶ
ಜಿಲ್ಲೆಯಲ್ಲಿ 63 ಸಹಕಾರ ಒಕ್ಕೂಟಗಳು ಇದ್ದು, ಪ್ರತಿಯೊಬ್ಬರು ಪರಸ್ಪರ ಸಹಕಾರ ತತ್ವದ ಅಡಿ ಕಾರ್ಯ ನಿರ್ವಹಿಸಬೇಕು.
ಕನ್ನಡಪ್ರಭ ವಾರ್ತೆ ಮೈಸೂರು
ಹಣಕಾಸು ವರ್ಷದ ಅಂತ್ಯಕ್ಕೆ ಇನ್ನೂ 3 ತಿಂಗಳು ಮಾತ್ರವಿದೆ. ಸಾಲ ವಸೂಲಾತಿ ಬಗ್ಗೆ ಗಮನ ಕೊಡಿ. ನ್ಯಾಯಾಲಯದ ಮೊರೆ ಹೋಗದಂತೆ ಸಾಲ ವಸೂಲಿ ಮಾಡಿ. ಲಾಭಾಂಶ ಹೆಚ್ಚಿಸಿಕೊಳ್ಳಿ ಎಂದು ಮೈಸೂರು, ಮಂಡ್ಯ ಮತ್ತು ಕೊಡಗು ಜಿಲ್ಲಾ ಸೌಹಾರ್ದ ಸಹಕಾರಿಗಳ ಒಕ್ಕೂಟದ ಅಧ್ಯಕ್ಷ ಎಸ್.ಆರ್. ನಾರಾಯಣ ರಾವ್ ಸಲಹೆ ನೀಡಿದರು.ನಗರದ ಲಕ್ಷ್ಮೀಪುರಂನಲ್ಲಿರುವ ಪಂಚವಟಿ ಹೊಟೇಲ್ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ಒಕ್ಕೂಟವು ಗುರುವಾರ ಆಯೋಜಿಸಿದ್ದ ಜಿಲ್ಲೆಯ ಸೌಹಾರ್ದ ಸಹಕಾರಿಗಳ ಮುಖ್ಯ ಕಾರ್ಯನಿರ್ವಾಹಕರ ವಾರ್ಷಿಕ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಜಿಲ್ಲೆಯಲ್ಲಿ 63 ಸಹಕಾರ ಒಕ್ಕೂಟಗಳು ಇದ್ದು, ಪ್ರತಿಯೊಬ್ಬರು ಪರಸ್ಪರ ಸಹಕಾರ ತತ್ವದ ಅಡಿ ಕಾರ್ಯ ನಿರ್ವಹಿಸಬೇಕು. ನಾವೆಲ್ಲ ಬಂಧುಗಳು. ಪ್ರತಿಯೊಬ್ಬರು ಪರಸ್ಪರ ವಿಚಾರ ವಿನಿಮಯ ಮಾಡಿಕೊಳ್ಳಬೇಕು ಎಂದು ಅವರು ತಿಳಿಸಿದರು.ಇದಕ್ಕೂ ಮುನ್ನ ಸಹಕಾರ ಸಂಘಗಳ ಸಹಾಯಕ ನಿಬಂಧಕ ಎಸ್.ಎಚ್. ಮನೋಜ್ ಕುಮಾರ್ ಕಾರ್ಯಕ್ರಮ ಉದ್ಘಾಟಿಸಿದರು. ಗುರುಪ್ರಸಾದ್ ಬಂಗೇರ, ಜಗದೀಶ್ ಹೆಬ್ಬಾರ್ ಇದ್ದರು.